ಪಾಪವನ್ನು ತೊಳೆದುಕೊಳ್ಳುವ ಪುಣ್ಯಕ್ಷೇತ್ರವಾಗಿ ಕೊಪ್ಪಳ -ಲಕ್ಷ್ಮೀ ಶ್ರೀನಿವಾಸ ಗುರೂಜಿ.

ಕೊಪ್ಪಳ. ಜ. ೧೩. ಕೊಪ್ಪಳದ ಆಧ್ಯಾತ್ಮಿಕ ಗುರು ಶ್ರೀ ಶೇಖಣ್ಣಾಚಾರ್ಯರ ನೆನಪಿನಲ್ಲಿ ಆಗುತ್ತಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದ ಕಾರಣಕ್ಕೆ ಕೊಪ್ಪಳ ಪಾಪ ಕಳೆದುಕೊಂಡು ಮೋಕ್ಷ ಪಡೆಯುವ ಕೇಂದ್ರವಾಗಲಿದೆ ಎಂದು ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕರು, ಮುದ್ರಾ ರಹಸ್ಯ ಖ್ಯಾತಿಯ ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ ಹೇಳಿದರು.
ಅವರು ನಗರದ ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಗುರು ಶ್ರೀ ಶೇಖಣ್ಣಾಚಾರ್ಯರವರ ೯ ನೇ ಪುಣ್ಯಸ್ಮರಣೆ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಜನರು ದುಷ್ಚಟಗಳಿಂದ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ, ಕಾಶಿ, ತಿರುಪತಿ ಇನ್ಯಾವುದೇ ಕ್ಷೇತ್ರಕ್ಕೆ ಹೋಗಿಬಂದರೆ ಮುಕ್ತಿ ಮೋಕ್ಷ ಸಿಗುವ ಯಾವ
ಗ್ಯಾರಂಟಿಯೂ ಇಲ್ಲ, ಆದ್ದರಿಂದ ಅದನ್ನು ಪಡೆಯುಲು ಉತ್ತಮ ಸೇವೆ ಮಾಡಬೇಕು ಎಂದರು.
    ಶ್ರೀ ಸಿರಸಪ್ಪಯ್ಯಮಠ ಶ್ರೀಗಳು, ಶ್ರೀ ಲೇಬಗೇರಿಮಠದ ಶ್ರೀಗಳು, ಶ್ರೀ ಗಿಣಗೇರಿ ಮಠದ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿದರು. ಶ್ರೀ ಶೇಖಣ್ಣಾಚಾರ್ಯರವರ ಜೀವನ ಸಾಧನೆ ಕುರಿತ ಆಶೀರ್ವಾಣಿ ಕೃತಿಯನ್ನು ಹಿರಿಯ ಚಲನಚಿತ್ರ ನಟ ಡಾ|| ರಾಜೇಶ ಬೆಂಗಳೂರುರವರು ಬಿಡುಗಡೆ ಮಾಡಿ ಮಾತನಾಡಿದರು. ಶ್ರೀ ಸಹಸ್ರಾಂಜನೇಯ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು. ಕೊಪ್ಪಳ ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಸಿದ್ದಲಿಂಗುಯ್ಯ ಹಿರೇಮಠ, ಚಂದ್ರಶೇಖರಯ್ಯ ಹಿರೇಮಠ, ಮಾರುತಿ ಕಾರಟಗಿ, ಡಾ|| ಮಹಾಂತೇಶ ಮಲ್ಲನಗೌಡರ, ಪತ್ರಕರ್ತ ಜಿ. ಎಸ್. ಗೋನಾಳ, ಪಾಲಾಕ್ಷಯ್ಯ ಪೂಜಾರ, ಮಂಜುನಾಥ ಶಿಲ್ಪಿ ಇತರರು ಇದ್ದರು. ಅಂದು ಶ್ರೀ ಆಂಜನೇಯನ ಕಾರ್ತಿಕ ಇಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಖ್ಯಾತ ಸಂಗೀತ ಕಲಾವಿದರಾದ ಪುತ್ತೂರು ನರಸಿಂಹ ನಾಯಕ ಮತ್ತು ತಂಡದಿಂದ ಭಕ್ತಿ ಸಂಗೀತ ಸುಧೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಸುಗಮ ಸಂಗೀತ ಕಾರ್ಯಕ್ರಮವನ್ನು ವಿಜಯಕುಮಾರ ಗೊಂಡಬಾಳ ನಡೆಸಿಕೊಟ್ಟರು. ಶ್ರೀ ಸಹಸ್ರಾಂಜನೇಯನ ಆರಾಧಕರಾದ ಪ್ರಕಾಶ ಶಿಲ್ಪಿಯವರು ಅಂದು ತಮ್ಮ ನಿತ್ಯ ಸೇವೆಯ ೩೩೪೪ ನೇ ಆಂಜನೇಯನ ಮೂರ್ತಿ ಸೇವೆ ನಡೆಯಿತು. ಗಿಣಗೇರಿ ಸುಬ್ಬಣ್ಣಾಚಾರ್ಯರವರ ನೇತೃತ್ವದಲ್ಲಿ ಮಹಾಭಿಷೇಕ ಮಾಡಲಾಯಿತು. ಪರಮೇಶ ಚಕ್ಕಿ ಸ್ವಾಗತಿಸಿದರು, ಸಂಘಟಕ ಮಂಜುನಾಥ ಜಿ. ಗೊಂಡಬಾಳ ನಿರೂಪಿಸಿದರು, ಶಂಕರಗೌಡ್ರ ಹಿರೇಗೌಡ್ರ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು ಕೊನೆಯಲ್ಲಿ ಅಶೋಕ ಬಜಾರಮಠ ವಂದಿಸಿದರು.

Please follow and like us:
error