You are here
Home > Koppal News > ಕಳಪೆ ಔಷಧಿ : ಸಾರ್ವಜನಿಕರೇ ಎಚ್ಚರ

ಕಳಪೆ ಔಷಧಿ : ಸಾರ್ವಜನಿಕರೇ ಎಚ್ಚರ

 ಕೆಲವು ಕಂಪನಿಗಳು ತಯಾರಿಸಿರುವ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬುದಾಗಿ ಔಷಧ ನಿಯಂತ್ರಣ ಇಲಾಖೆಯ ಔಷಧಿ ವಿಶ್ಲೇಷಕರು ಘೋಷಿಸಿರುವುದರಿಂದ, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ಇಂತಹ ಔಷಧಿಯನ್ನು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಹಾಗೂ ಔಷಧದ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರಿನ ಯಾವುದೇ ಔಷಧಿಗಳನ್ನು ವಿತರಿಸಬಾರದು ಎಂದು ಕೊಪ್ಪಳದ ಔಷಧ ನಿಯಂತ್ರಣಾಧಿಕಾರಿ ರಘುರಾಮ ಭಂಡಾರಿ ಅವರು ತಿಳಿಸಿದ್ದಾರೆ. 

ಈ ಔಷಧಿಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದೆಂದು ಈ ಮೂಲಕ ಎಚ್ಚರಿಸಲಾಗಿದೆ. ಹಾಗೂ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ, ಅಥವಾ ವಿತರಣೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರು- ೦೮೫೩೯-೨೨೧೫೦೧ ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ 

ಕಳಪೆ ಗುಣಮಟ್ಟ ಎಂದು ಕಂಡುಬಂದಿರುವ ಔಷಧಿಯ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರು ಇಂತಿದೆ. ಎಲ್ಡಾಪ್ರಿಲ್-೫ (ರಾಮಿಪ್ರಿಲ್ ಟ್ಯಾಬ್ಲೆಟ್ಸ್ ಐಪಿ) ಎಆರ್‌ಕೆಬಿ-೩೦೧೯, ಮೆ. ಕಾನ್ಹಾ ಬಯೋಜೆನಿಟಿಕ್ ಲ್ಯಾಬೋರೇಟರೀಸ್. ಕಾರ್ಡೆಮ್-೩೦ ಟ್ಯಾಬ್ಲೆಟ್ಸ್ (ಡಿಲ್ಟಿಯಾಜೆಮ್ ಟ್ಯಾಬ್ಲೆಟ್ಸ್ ಐ.ಪಿ) ೦೨೩೦೧ಪಿ, ಮೆ.ಎಎಫ್‌ಡಿ ಲ್ಯಾಬ್ ಪ್ರೈ.ಲಿ. ಬೆಂಗಳೂರು. ಮೋಫ್ಲೋಕ್ಸ್-೨೦೦ (ಓಫ್ಲೋಕ್ಸಾಸಿನ್ ಟ್ಯಾಬ್ಲೆಟ್ಸ್ ಐ.ಪಿ. ೨೦೦ ಎಮ್.ಜಿ.) ೧೩೦೬೮೦, ಮೆ. ಮೋದಿ ಲೈಫ್ ಕೇರ್ ಇಂಡಸ್ಟ್ರೀಸ್ ಲಿಮಿಟೆಡ್, ಅಹಮದಾಬಾದ್. ಪಾಜೆಮೋಲ್ (ಪ್ಯಾರಾಸಿಟಾಮೋಲ್ ಇಂಜೆಕ್ಷನ್) ವಿ-೫೯೨೬, ಮೆ.ಅಲ್ಪಾ ಲ್ಯಾಬೋರೇಟರೀಸ್ ಲಿ., ಪಿಗ್ದಂಬರ್. ವಿಗೋರ (ಮಲ್ಟಿ ಟೆಕ್ಸಚರ್ ಕಾಂಡೋಮ್ಸ್) ಎ-೧೩೧೨೧೧-ಎಂಟಿ, ಮೆ.ಅನೋನ್ದಿತಾ ಹೇಲ್ತ್‌ಕೇರ್, ನೋಯ್ಡಾ (ಯುಪಿ). ಎಂಟ್ರಿಕ್ ಕೋಟೆಡ್ ಆಸ್ಪಿರಿನ್ ಟ್ಯಾಬ್ಲೆಟ್ಸ್ ಬಿ.ಪಿ. (ಎಲಿಸ್ಪಿರಿನ್ ೧೫೦) ಇಎಲ್‌ಪಿ-೧೨೨, ಮೆ.ಲ್ಯಾಬೋರೇಟರೀಸ್ (ಪ್ರೈ) ಲೀ., ಬೆಂಗಳೂರು.  

Leave a Reply

Top