ಬನ್ನಿಕಟ್ಟಿ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಗೈಡ್ಸ್ ಮಕ್ಕಳ ರಾಜ್ಯಪಾಲರ ಅವಾರ್ಡ ಪೂರ್ವಸಿದ್ಧತಾ ಶಿಬಿರ ಯಶಸ್ವಿ

 ಕೊಪ್ಪಳ,ಜೂ,೧೯: ನಗರದ ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಭಾರತ ಸ್ಕೌಟ್ಸ್ ಗೈಡ್ಸ್ ಮಕ್ಕಳ ರಾಜ್ಯಪಾಲರ ಅವಾರ್ಡ ಪೂರ್ವಸಿದ್ಧತಾ ಶಿಬಿರ ಇತ್ತೀಚಿಗೆ. ಜರುಗಿತು. ಬನ್ನಿಕಟ್ಟಿ ಪೌಢಶಾಲೆ ಹಾಗೂ  ಭಾರತ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆಯು ಜಂಟಿಯಾಗಿ ಕಾರ್ಯಕ್ರಮವನ್ನು ಸಂಯೋಜಿಸಿದ್ದವು.
   ಶಿಬಿರದಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.  ಬನ್ನಿಕಟ್ಟಿ ಪ್ರೌಢಶಾಲೆಯ ಮುಖ್ಯಗುರು  ಕರಿಬಸಪ್ಪ ಪಲ್ಲೇದ ಶಿಬಿರವನ್ನು ಉದ್ಘಾಟಸಿದರು. ಭಾರತ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಹಕಾರ್ಯದರ್ಶಿ ಜಯರಾಜ್ ಬೂಸದ, ಶಿಬಿದರ ನಾಯಕರುಗಳಾಗಿ ಎ.ಯರ್ರೆಣ್ಣ, ಶ್ರೀಮತಿ ಸರೋಜಾ, ಎಎಸ್‌ಡಿಸಿಗಳಾದ  ಶಿವಕುಮಾರ್ ಮತ್ತು ಜಿಲ್ಲಾ ಪ್ರತಿನಿಧಿಗಳಾದ ಪ್ರಲ್ಹಾದ್, ಮತ್ತು ಚಿತ್ರಕಲಾ ಶಿಕ್ಷಕರಾದ ವೀರಯ್ಯ ಒಂಟಿಗೋಡಿಮಠ ಮುಂತಾದವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .
Please follow and like us:

Leave a Reply