fbpx

ಭಾಗ್ಯನಗರ : ಕುವೆಂಪು ವೃತ್ತಕ್ಕೆ ಗ್ರಾ,ಪಂ ಅಧ್ಯಕ್ಷ ಹೊನ್ನೂರುಸಾಬ ಚಾಲನೆ

ಕೊಪ್ಪಳ ಮಾ,೨೩ : ಭಾಗ್ಯನಗರದ ಪದ್ಮಾವತಿ ಕಾಲೋನಿಯ ಬಳಿ ರಾಷ್ಟ್ರ ಕವಿ ಕುವೆಂಪು ವೃತ್ತಕ್ಕೆ ಭಾಗ್ಯನಗರ ಗ್ರಾ.ಪಂ ಅಧ್ಯಕ್ಷ ಹೊನ್ನೂರುಸಾಬ ಚಾಲನೆ ನೀಡಿದರು.ನಂತರ ಮಾತನಾಡಿ ಇಂದು ಕುವೆಂಪು ವೃತ್ತ ಎಂದು ನಾಮಕರಣ ಮಾಡಿರುವುದು ಅತೀವ ಸಂತಸವೆನಿಸುತ್ತದೆ, ಇಂಥಹ ಕವಿಗಳನ್ನು ಎಂದೆಂದಿಗೂ ನೆನೆಯಲು ಈ ವೃತ್ತಕ್ಕೆ ಇಟ್ಟಿರುವುದರಿಂದ ಅವರನ್ನು ನಿತ್ಯ ನೋಡುವ ಭಾಗ್ಯ ಎಂದು ಹೇಳಬಹುದು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಸೋಮಲಿಂಗಪ್ಪ ಮೆಣಸಿನಕಾಯಿ,ಜಗದೀಶ ಮಾಲಗಿತ್ತಿ, ಗಂಗಮ್ಮ ಪಟ್ಟಣಶೆಟ್ಟಿ, ವಾರ್ಡಿನ ಬಸವರಾಜ್ ಶೀಲವಂತರ್, ವೀರಣ್ಣ ವಾಲಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!