ಶ್ರೀ ಗವಿಸಿದ್ಧೇಶ್ವರ ಜಿಲ್ಲಾ ಪ್ರಶಸ್ತಿ ಮತ್ತು ಕನ್ನಡ ಸೇವಾ ರತ್ನ ಪ್ರಶಸ್ತಿ

ಕೊಪ್ಪಳ, ಜು. ೩೧. ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಆಗಸ್ಟ್ ೪ ಮತ್ತು ೫ ರಂದು ನಡೆಯುವ ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಶ್ರೀ ಗವಿಸಿದ್ಧೇಶ್ವರ ಜಿಲ್ಲಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಚಿದು ಸಮ್ಮೇಳನ ಸಂಯೋಜಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ರಾಮಮೂರ್ತಿ ನವಲಿ (ಪತ್ರಿಕೋದ್ಯಮ), ಸಂತೋಷ ದೇಶಪಾಂಡೆ (ಪತ್ರಿಕೋದ್ಯಮ), ಕರಿಯಪ್ಪ ಹಳ್ಳಿಕೇರಿ (ಸಮಾಜ ಸೇವೆ), ಶ್ರೀಶೈಲ ಆರ್. ಬಡಿಗೇರ.  (ಸಂಗೀತ), ಕುಮಾರಿ ಅಂಬಿಕಾ ಉಪ್ಪಾರ (ಸಂಗೀತ), ಶ್ರೀನಿವಾಸ ಪಂಡಿತ (ಕ್ರೀಡೆ), ಚಿದಾನಂದಕೀರ್ತಿ (ಸಾಹಿತ್ಯ), ಜೀವನ್‌ಸಾಬ ಬಿನ್ನಾಳ (ಸಂಕೀರ್ಣ), ಮಹೇಶ ಬಳ್ಳಾರಿ (ಸಾಹಿತ್ಯ), ಬಿ. ಎಸ್. ಪಾಟೀಲ (ನ್ಯಾಯಾಂಗ ಸೇವೆ), ಸಿ. ರವೀಂದ್ರ ಕಂಡಕ್ಟರ್ (ಕಾರ್ಮಿಕ ಸಂಘಟನೆ), ಡಾ|| ವಿ. ಮನೋಹರ (ವೈದ್ಯಕೀಯ), ಡಾ|| ಎಸ್. ಕೆ. ರಾಜೂರ (ವೈದ್ಯಕೀಯ), ಮಲ್ಲಿಕಾರ್ಜುನ ಜಾನೆಕಲ್ (ಸಮುದಾಯ), ವಿ. ಎಂ. ಭೂಸನೂರಮಠ (ಸಮಾಜ ಸೇವೆ), ಆಸೀಫ್ ಅಲಿ (ಸಮಾಜ ಸೇವೆ), ಶ್ರೀಮತಿ ಶೈಲಜಾ ಹಿರೇಮಠ (ಮಹಿಳಾ ಉದ್ಯಮಿ), ದುರಗಪ್ಪ ಹಿರೇಮನಿ (ಸಂಕೀರ್ಣ), ಬಸವರಾಜ ಮಾಲಗಿತ್ತಿ  (ನೃತ್ಯ ನಿರ್ದೇಶನ) ಕ್ಕೆ ಪ್ರಶಸ್ತಿಚಿiನ್ನು ನೀಡಲಾಗುತ್ತಿದೆ.
ಕನ್ನಡ ಸೇವಾ ರತ್ನ ಪ್ರಶಸ್ತಿಯನ್ನು ಬಸವನಗೌಡ ಪಾಟೀಲ (ಕ.ರ.ವೇ), ವಿಜಯಕುಮಾರ ಕವಲೂರ (ಜಯ ಕರ್ನಾಟಕ), ಹನುಮೇಶ ಕಡೇಮನಿ (ಕನ್ನಡಸೇನೆ), ಪಂಪಣ್ಣ ನಾಯಕ (ಕ.ರ.ವೇ), ಶಿವಾನಂದ ಹೊದ್ಲೂರ     (ವೀರ ಕನ್ನಡಿಗ), ಸೈಯದ್ ಹಾಜಿ (ಜೈ ಕರ್ನಾಟಕ ರಕ್ಷಣಾ ವೇದಿಕೆ). ಪ್ರಶಸ್ತಿ ಪ್ರದಾನವನ್ನು ಮಾಜಿ ಸಚಿವ ಇಕ್ಬಾಲ ಅನ್ಸಾರಿ, ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ. ಮಾ. ಸಾಮಗ, ಕೆ. ಎಂ. ಸೈಯ್ಯದ್ ಮುಂತಾದವರು ಮಾಡುವರು ಕಾರ್ಯಕ್ರಮವನ್ನು ಚಲನಚಿತ್ರ ನಿರ್ಮಾಪಕ ಅನಿಲ ಮೆಣಸಿನಕಾಯಿ ಉದ್ಘಾಟಿಸುವರು ಎಚಿದು ತಿಳಿಸಿದ್ದಾರೆ.

Leave a Reply