ಪಿಯುಸಿಎಲ್ ನೂತನ ಪದಾಧಿಕಾರಿಗಳ ಆಯ್ಕೆ

 ಹೊಸ ಅವಧಿಗೆ ಕೊಪ್ಪಳ ಜಿಲ್ಲಾ ಪಿಯುಸಿಎಲ್ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಭಾಗ್ಯನಗರದ ವಿಠ್ಠಪ್ಪ ಗೋರಂಟ್ಲಿಯವರ ಲೈಬ್ರರಿಯಲ್ಲಿ ನಡೆದ ಸಭೆಯಲ್ಲಿ ಪಿಯುಸಿಎಲ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ವಿಠ್ಠಪ್ಪ ಗೋರಂಟ್ಲಿ, ಉಪಾಧ್ಯಕ್ಷ- ಅಲ್ಲಾಗಿರಿರಾಜ್ ,ರಘು, ಪ್ರಧಾನ ಕಾರ್ಯದರ್ಶಿ- ಸಿರಾಜ್ ಬಿಸರಳ್ಳಿ ,ಸಹ ಕಾರ್ಯದರ್ಶಿ- ರಾಜಶೇಖರ ಮುಳಗುಂದ, ಖಜಾಂಚಿಯಾಗಿ ರಾಜಾಬಕ್ಷಿ ಎಚ್.ವಿ ಆಯ್ಕೆಯಾದರು.
ಮೈಸೂರಿನಲ್ಲಿ ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆಗೆ ಜಿಲ್ಲೆಯಿಂದ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಕಳುಹಿಸಲು ನಿರ್ಧರಿಸಲಾಯಿತು. ಮರಕುಂಬಿ ಗ್ರಾಮದಲ್ಲಿ ಕ್ಷೌರದ ಕುರಿತು ದಲಿತರಿಗೆ ಹಾಕಲಾಗಿರುವ ಬಹಿಷ್ಕಾರವನ್ನು ಖಂಡಿಸಲಾಯಿತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತಕ್ಕೆ ಒತ್ತಾಯಿಸಲು ನಿರ್ಧರಿಸಲಾಯಿತು. 
ಈ ಸಂದರ್ಭದಲ್ಲಿ  ವಿಠ್ಠಪ್ಪ ಗೋರಂಟ್ಲಿ, ಜೆ.ಭಾರದ್ವಾಜ,ಬಸವರಾಜ ಶೀಲವಂತರ, ಶರಣಪ್ಪ ಕೊತಬಾಳ, ಅಲ್ಲಾಗಿರಿರಾಜ್, ರಾಜಾಬಕ್ಷಿ ಎಚ್.ವಿ, ಸಿರಾಜ್ ಬಿಸರಳ್ಳಿ, ರಾಜಶೇಖರ ಮುಳುಗುಂದ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Leave a Reply