ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಕನಕದಾಸ ಜಯಂತಿ ಕಾರ‍್ಯಕ್ರಮ

ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕನಕದಾಸರ ೫೨೭ನೇ ಜಯಂತಿಯನ್ನು ಆಚರಿಸಲಾಯಿತು.
ಕಾರ‍್ಯಕ್ರಮದ ಆರಂಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಜಯಶ್ರೀ ಕುಲಕರ್ಣಿಯವರು ಪೂಜೆ ನೆರವೇರಿಸಿದರು. ಸಹ ಶಿಕ್ಷಕಿ ಅನಿತಾ ಸಿದ್ನೆಕೊಪ್ಪ  ಕನಕದಾಸರ ಜೀವನ ಚರಿತ್ರೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಆಶಾ ದೊಡ್ಡಮನಿ,ರೇಣುಕಾ ಅತ್ತನೂರ ಹಾಗೂ ಶಾಲಾ ಮಕ್ಕಳು ಕನಕದಾಸರ ಕುರಿತು ಮಾತನಾಡಿದರು. 
ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಮಾತನಾಡಿ ಕನಕದಾಸರ ಜೀವನ ಎಲ್ಲರಿಗೂ ಮಾದರಿಯಾಗುವಂತಹದ್ದು. ಅವರ ಆದರ್ಶಗಳು ಎಲ್ಲರಿಗೂ ಮಾದರಿ. ಎಲ್ಲರೂ ಅವರ ಆದರ್ಶಗಳನ್ನು   ಬದುಕಿನಲ್ಲಿ ಅಳವಡಿಸಿಕೊಂಡು  ಯಶಸ್ಸು ಮತ್ತು  ಅಭಿವೃದ್ದಿ ಪಡೆಯುವಂತಾಗಲಿ ಎಂದು ಹೇಳಿದರು.
ಕಾರ‍್ಯಕ್ರಮದ ಸ್ವಾಗತವನ್ನು ರವಿಸೋನಾರ್, ನಿರೂಪಣೆಯನ್ನು ಅನಿತಾ ಸಿದ್ನೆಕೊಪ್ಪ ಮಾಡಿದರೆ ಸವಿತಾ ಹೂಗಾರ ವಂದಿಸಿದರು. ನಂತರ ಎಲ್ಲ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಕಾರ‍್ಯಕ್ರಮದಲ್ಲಿ ಶಾಲೆಯ ಸರ್ವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. 
Please follow and like us:
error