You are here
Home > Koppal News > ಕೊಪ್ಪಳ ಮೀಡಿಯಾ ಕ್ಲಬ್‌ನಿಂದ ಶ್ರದ್ಧಾಂಜಲಿ :ಮೀಡಿಯಾ ಕ್ಲಬ್‌ನಿಂದ ಮೃತನ ಕುಟುಂಬಕ್ಕೆ ೫ ಸಾವಿರ ರೂ.

ಕೊಪ್ಪಳ ಮೀಡಿಯಾ ಕ್ಲಬ್‌ನಿಂದ ಶ್ರದ್ಧಾಂಜಲಿ :ಮೀಡಿಯಾ ಕ್ಲಬ್‌ನಿಂದ ಮೃತನ ಕುಟುಂಬಕ್ಕೆ ೫ ಸಾವಿರ ರೂ.

 ಕೊಪ್ಪಳ : ಮಂಗಳವಾರ ಬೆಳಿಗ್ಗೆ ನಗರದಲ್ಲಿ ಪತ್ರಿಕೆ ಹಂಚುತ್ತಿದ್ದ ಕಾರ್ತಿಕ್ ಕಲಾಲ್ (೧೫) ಗೆ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದ. ಬುಧವಾರ ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ಸಭೆ ಸೇರಿ ಮೃತನ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ಮೀಡಿಯಾ ಕ್ಲಬ್‌ನ ಅಧ್ಯಕ್ಷ ಸೋಮರಡ್ಡಿ ಅಳವಂಡಿಯವರು, ಪತ್ರಿಕೆಯಲ್ಲಿ ಕೆಲಸ ಮಾಡುವ ನಾವು ಬರೆಯುವ ಸುದ್ದಿ, ವರದಿ, ವಿಶೇಷ ವರದಿಗಳು ವಿವಿಧ ಭಕ್ಷ್ಯಗಳಿದ್ದಂತೆ. ಅದನ್ನು ಗ್ರಾಹಕರಿಗೆ ತಲುಪಿಸುವ ಹೊಣೆಗಾರಿಕೆ ಪತ್ರಿಕೆ ಹಂಚುವ ಹುಡುಗರದ್ದು. ನಾವು ಎಲ್ಲ ವರ್ಗಗಳ ಆಶೋತ್ತರಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಾಡುತ್ತೇವೆ. ನಮ್ಮ ಕುಟುಂಬದಂತಿರುವ ಪತ್ರಿಕೆ ಹಂಚುವವರ ಬಗ್ಗೆ ನಿಷ್ಕಾಳಜಿ ವಹಿಸಿದ್ದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಬರುವ ದಿನಗಳಲ್ಲಿ ಪತ್ರಿಕೆ ಹಂಚುವ ಹುಡುಗರ ಬಗ್ಗೆ ಪತ್ರಿಕಾ ಸಂಸ್ಥೆಗಳು ಗಮನ ಹರಿಸಲಿ ಎಂದು ಕೋರಿದರು. ಈ ಸಂದರ್ಭದಲ್ಲಿ ಮೀಡಿಯಾ ಕ್ಲಬ್‌ನಿಂದ ಮೃತನ ಕುಟುಂಬಕ್ಕೆ ೫ ಸಾವಿರ ರೂ. ಪರಿಹಾರ ನೀಡಲು ಸಭೆ ತೀರ್ಮಾನಿಸಿತು. ಸಭೆಯಲ್ಲಿ ಪತ್ರಕರ್ತರಾದ ಶರಣಪ್ಪ ಬಾಚಲಾಪೂರ, ಬಸವರಾಜ ಕರುಗಲ್, ದೊಡ್ಡೇಶ ಯಲಿಗಾರ, ದೇವು ನಾಗನೂರು, ಭರತ್ ಕಂದಕೂರ, ಶಂಕರ ಕೊಪ್ಪದ, ಗಂಗಾಧರ ಬಂಡಿಹಾಳ, ಅಶೋಕ, ಮೌನೇಶ ಬಡಿಗೇರ, ಮುಕ್ಕಣ್ಣ ಕತ್ತಿ, ಶರಣಪ್ಪ ಕೊತಬಾಳ, ಮಹೇಶಗೌಡ ಭಾನಾಪೂರ, ದತ್ತು ಕಮ್ಮಾರ, ಶಿವರಾಜ್ ನುಗಡೋಣಿ, ಪರಮೇಶರೆಡ್ಡಿ, ಮಾರುತಿ ಕಟ್ಟಿಮನಿ, ಸಮೀರ್ ಪಾಟೀಲ್, ಬಸವರಾಜ ಬಿನ್ನಾಳ, ತಿಪ್ಪನಗೌಡ ಮಾಲೀಪಾಟೀಲ್, ಸಂತೋಷ ದೇಶಪಾಂಡೆ, ಜಗದೀಶ, ಬಸವರಾಜ, ಗಣೇಶ, ನಾಭಿರಾಜ ದಸ್ತೇನವರ್ ಇತರರು ಇದ್ದರು.
         

Leave a Reply

Top