fbpx

ಡಿ.೦೫ ರಿಂದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ

ಕೊಪ್ಪಳ,
ನ.೨೦ (ಕರ್ನಾಟಕ ವಾರ್ತೆ) ಕೊಪ್ಪಳ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ
ಕ್ರೀಡಾಕೂಟ ಡಿ.೦೫ ಮತ್ತು ೦೬ ರಂದು ಎರಡು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ
ನಡೆಸಲಾಗುವುದು ಹಾಗೂ ಇದೇ ಕ್ರೀಡಾಕೂಟದ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು
ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ
ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. 
     ಸ್ಪರ್ಧೆಗಳ ವಿವರ ಇಂತಿದೆ. 
ಕ್ರೀಡಾಕೂಟದ ಪುರುಷ ವಿಭಾಗದಲ್ಲಿ ೪೫ ವರ್ಷದೊಳಗಿನವರಿಗೆ ೧೦೦ ಮೀ, ೨೦೦ ಮೀ, ೪೦೦, ೮೦೦,
೧೫೦೦ ಮೀ. ಓಟ, ಹರ್ಡಲ್ಸ್, ೫೦೦೦ ಮತ್ತು ೧೦,೦೦೦ ಮೀ.ಓಟ, ಉದ್ದ ಜಿಗಿತ, ಎತ್ತರ
ಜಿಗಿತ, ಗುಂಡು, ಚಕ್ರ, ಜಾವೆಲಿನ್ ಎಸೆತ, ೪*೧೦೦ ಮತ್ತು ೪*೪೦೦ ರಿಲೇ. ಗುಂಪು
ಸ್ಪರ್ಧೆಗಳಲ್ಲಿ ವಾಲಿಬಾಲ್, ಕಬ್ಬಡ್ಡಿ, ಟೇಬಲ್ ಟೆನ್ನಿಸ್ (ಸಿಂಗಲ್ಸ್ ಮತ್ತು
ಡಬಲ್ಸ್), ಬ್ಯಾಡ್ಮಿಂಟನ್, ಕೇರಂ, ಕ್ರಿಕೆಟ್ ಕ್ರೀಡೆಗಳನ್ನು ಹಾಗೂ ೪೫ ವರ್ಷ
ಮೇಲ್ಪಟ್ಟವರಿಗೆ ೧೦೦, ೨೦೦ ಮತ್ತು ೪೦೦ ಮೀ.ಓಟ, ಗುಂಡು, ಚಕ್ರ ಎಸೆತ ಕ್ರೀಡೆಗಳನ್ನು
ಆಯೋಜಿಸಲಾಗುವುದು. 
     ಅದೇ ರೀತಿ ಮಹಿಳಾ ವಿಭಾಗದಲ್ಲಿ ೪೦ ವರ್ಷದೊಳಗಿನವರಿಗೆ
೧೦೦ ಮೀ, ೨೦೦ ಮೀ, ೪೦೦, ೮೦೦ ಮೀ. ಓಟ, ಹರ್ಡಲ್ಸ್, ಉದ್ದ ಜಿಗಿತ, ಎತ್ತರ ಜಿಗಿತ,
ಗುಂಡು, ಚಕ್ರ, ಜಾವೆಲಿನ್ ಎಸೆತ, ೪*೧೦೦ ಮತ್ತು ೪*೪೦೦ ರಿಲೇ ಹಾಗೂ ೪೦ ವರ್ಷ
ಮೇಲ್ಪಟ್ಟವರಿಗೆ ೧೦೦ ಮೀ, ೨೦೦ ಮೀ, ೪೦೦ ಮೀ. ಓಟ, ಗುಂಡು, ಚಕ್ರ ಎಸೆತ, ಗುಂಪು
ಆಟಗಳಲ್ಲಿ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ (ಸಿಂಗಲ್ಸ್ ಮತ್ತು ಡಬಲ್ಸ್), ಕೇರಂ,
ಟೆನಿಕಾಯ್ಟ್, ಥ್ರೋಬಾಲ್ ಕ್ರೀಡೆಗಳನ್ನು ಹಾಗೂ ೪೦ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ೧೦೦,
೨೦೦ ಮತ್ತು ೪೦೦ ಮೀ. ಓಟ, ಗುಂಡು, ಚಕ್ರ ಎಸೆತ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್
ಸಿಂಗಲ್ಸ್ ಮತ್ತು ಡಬಲ್ಸ್, ಟೆನ್ನಿಕಾಯ್ಡ್ ಸಿಂಗಲ್ಸ್ ಸ್ಪರ್ಧೆಗಳನ್ನು
ಏರ್ಪಡಿಸಲಾಗುವುದು.
     ಕ್ರೀಡಾಕೂಟದ ಅಂಗವಾಗಿ ಏರ್ಪಡಿಸಲಾಗಿರುವ ಸಾಂಸ್ಕೃತಿಕ
ಸ್ಪರ್ಧೆಗಳ ಹಿಂದುಸ್ತಾನಿ ಸಂಗೀತ ಸ್ಪರ್ಧೆ ವಿಭಾಗದಲ್ಲಿ ಮೌಖಿಕ, ಲಘು ಶಾಸ್ತ್ರೀಯ
ಸಂಗೀತ, ಕರ್ನಾಟಕ ಸಂಗೀತ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ,
ನೃತ್ಯ ವಿಭಾಗದಲ್ಲಿ ಜಾನಪದ ನೃತ್ಯ, ಭರತನಾಟ್ಯ, ವಾದ್ಯ ಸಂಗೀತ, ಜಾನಪದ ಗೀತೆ, ಕರಕುಶಲ
ವಸ್ತುಗಳ ಪ್ರದರ್ಶನ ಮತ್ತು ಕಿರು ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
    
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಯಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಎರಡು ಪಾಸ್‌ಪೋರ್ಟ್
ಅಳತೆಯ ಭಾವಚಿತ್ರ ಹಾಗೂ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳಿಂದ ಸೇವಾ
ಪ್ರಮಾಣ ಪತ್ರದೊಂದಿಗೆ ಡಿ.೦೩ ರ ಸಂಜೆ ೪.೩೦ ರೊಳಗಾಗಿ ತಮ್ಮ ಹೆಸರನ್ನು
ನೊಂದಾಯಿಸಿಕೊಳ್ಳಬೇಕು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು
ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಲ್ಲಿ ಹೆಸರು
ನೊಂದಾಸಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ನೌಕರರ ಸಂಘದ
ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ, ಮೊ :೯೮೮೦೬೭೦೯೨೫ ಅಥವಾ ಯುವ ಸಬಲೀಕರಣ ಮತ್ತು
ಕ್ರೀಡಾ ಇಲಾಖೆಯ ಕಛೇರಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ನ್ನು ಸಂಪರ್ಕಿಸಬಹುದಾಗಿದೆ
ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಯಲಬುರ್ಗಾ ಪಟ್ಟಣ ಪಂಚಾಯತಿಯಿಂದ ವಿವಿಧ ಸೌಲಭ್ಯ ಅರ್ಜಿ ಆಹ್ವಾನ.
ಕೊಪ್ಪಳ,
ನ.೨೦ (ಕರ್ನಾಟಕ ವಾರ್ತೆ)  ಪಟ್ಟಣ ಪಂಚಾಯತ್ ಕಾರ್ಯಾಲಯ, ಯಲಬುರ್ಗಾ ಇವರಿಂದ ಪ್ರಸಕ್ತ
ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಶೇಕಡಾ ೭.೨೫ ರ ವೈಯಕ್ತಿಕ ಯೋಜನೆಯಡಿ ಪಟ್ಟಣದ
ವಾರ್ಡ್ ನಂ.೫ ಮತ್ತು ೮ ರಲ್ಲಿ ೨ ಪಕ್ಕಾ ಮನೆ ಹಾಗೂ ೧ ವೈಯಕ್ತಿಕ ಶೌಚಾಲಯ
ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯಡಿ ಯಲಬುರ್ಗಾ ಪಟ್ಟಣದ
ವಾರ್ಡ್ ನಂ.೫ ಮತ್ತು ೮ ರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಲ್ಪಸಂಖ್ಯಾತ ಹಾಗೂ ಇತರೆ
ವರ್ಗದ ಜನರು ಆಸ್ತಿ ದಾಖಲಾತಿ, ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್
ಬುಕ್, ಪಡಿತರ ಚೀಟಿ, ೪ ಸ್ಟಾಂಪ್‌ಸೈಜ್ ಅಳತೆಯ ಭಾವಚಿತ್ರ, ಜಾತಿ ಮತ್ತು ಆದಾಯ
ಪ್ರಮಾಣಪತ್ರ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ, ಪ್ರಕಟಣೆಗೊಂಡ ೭ ದಿನಗಳೊಳಗಾಗಿ
ಪಟ್ಟಣ ಪಂಚಾಯತ್ ಕಾರ್ಯಾಲಯ ಯಲಬುರ್ಗಾ ಇವರಿಗೆ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ
ಮಾಹಿತಿಗಾಗಿ ಕಾರ್ಯಾಲಯವನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು
ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಖ್ಯಾಧಿಕಾರಿ ನಾಗೇಶ ತಿಳಿಸಿದ್ದಾರೆ.   
ನ. ೨೨ ರಂದು ಈಶಾನ್ಯದ ಐಸಿರಿ ೧೦ ನೇ ಸಂಚಿಕೆ ಪ್ರಸಾರ.
ಕೊಪ್ಪಳ
ನ. ೨೦ (ಕರ್ನಾಟಕ ವಾರ್ತೆ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ
ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು
ಮುಂತಾದ ಸಂಗತಿಗಳನ್ನು ಪರಿಚಯಿಸುವ ಈಶಾನ್ಯದ ಐಸಿರಿ ಸರಣಿಯ ೧೦ ನೇ ಸಂಚಿಕೆ ನ. ೨೨ ರಂದು
ಬೆಳಿಗ್ಗೆ ೧೦ ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ
ಏಕಕಾಲಕ್ಕೆ ಪ್ರಸಾರವಾಗಲಿದೆ.
      ೧೦ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ
ಕಾರ್ಯಕ್ರಮದ ವಿವರಗಳು ಹೀಗಿವೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ, ಹೈ.ಕ.
ಪ್ರದೇಶಾಭಿವೃಧ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಡಾ. ಖಮರುಲ್ ಇಸ್ಲಾಂ ಅವರು ಭಾಗವಹಿಸಿ
ಕ್ಷೀರಭಾಗ್ಯ ಯೋಜನೆಯ ಕುರಿತು ಮಾತನಾಡಲಿದ್ದಾರೆ. ಬಳ್ಳಾರಿ ಜಿಲ್ಲೆ ವಿಜಯನಗರದ ಶಾಸಕ
ಆನಂದ ಸಿಂಗ್ ಅವರು ತಮ್ಮ ಮತಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತಾವು ಕಂಡಿರುವ ಕನಸುಗಳನ್ನು
ಹಂಚಿಕೊಳ್ಳಲಿದ್ದಾರೆ.  ಪರಿಣಿತಾ ಗುಂಪಿನ ಮಹಿಳೆಯರು ಬೀಟರೂಟ್‌ನ ಸೌಂದರ್‍ಯ ಹಾಗೂ
ಔಷಧೀಯ ಗುಣಗಳನ್ನು ತಿಳಿಸಿಕೊಡಲಿದ್ದಾರೆ.  ಕಾಂದಾ ಭಜಿ ಮಾಡುವ ವಿಧಾನವನ್ನು
ಹೇಳಿಕೊಡಲಿದ್ದಾರೆ.  ನಿವೃತ್ತ ನ್ಯಾಯ ಮೂರ್ತಿ ಎಂ.ಬಿ. ಬಿರಾದಾರ ಅವರು ಆಸ್ತಿ
ವರ್ಗಾವಣೆ (ಮ್ಯುಟೇಶನ್) ಮಾಡುವ ವಿಧಾನಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.  ಯಾದಗಿರಿಯ
ಸಾಹೇಬಗೌಡ ವಾಯ್. ಬಿರಾದಾರ ಅವರು ಸೂತ್ರಗಳ ಮೂಲಕ ಭೂಗೋಳದ ಕಲಿಕೆಯನ್ನು ಸುಲಭ ಮಾಡುವ
ಬಗೆಯನ್ನು ಕಲಿಸಲಿದ್ದಾರೆ.  ಸೇಡಂ ತಾ. ಕೋಡ್ಲಾ ಗ್ರಾಮದ ಸಾವಯವ ಕೃಷಿಕರಾಗಿರುವ ಸೋಮನಾಥ
ರೆಡ್ಡಿಯವರು ತಾವು ಕೃಷಿಯಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ಹೇಳಲಿದ್ದಾರೆ.  ಹೊಸಪೇಟೆಯ
ಹಾಸ್ಯ ಕಲಾವಿದ, ದಂತ ವೈದ್ಯರಾಗಿರುವ ಡಾ.ರಾಘವೇಂದ್ರ ಕಟ್ಟಿಯವರು ನಗೆಹನಿಗಳನ್ನು
ಪ್ರಸ್ತುತ ಪಡಿಸಲಿದ್ದಾರೆ.  ಬುಧವಾರ ನ. ೨೫ ರಂದು ಗುರುನಾನಕ್ ಜಯಂತಿ ಇರುವುದರಿಂದ ಈ
ಕಾರ್‍ಯಕ್ರಮದಲ್ಲಿ ‘ಶಬದ್’ ಹಾಡನ್ನು ಕೂಡ ಅಳವಡಿಸಲಾಗಿದೆ.  ಇವುಗಳ ಜೊತೆಗೆ. ಕಳೆದ
ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್‍ಯಕ್ರಮಗಳು,
ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’,  ಸಾಮಾಜಿಕ ವಿಷಯಗಳ ಕುರಿತು
ಜಿಂಗಲ್‌ಗಳು ಮೂಡಿ ಬರಲಿವೆ.
     ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ
ಜವಾಬ್ದಾರಿಯನ್ನು ಶ್ರೀs ಸೋಮಶೇಖರ ಎಸ್. ರುಳಿಯವರು  ವಹಿಸಿಕೊಂಡಿದ್ದಾರೆ ಎಂದು
ಕಲಬುರಗಿ ಆಕಾಶವಾಣಿ ಮುಖ್ಯಸ್ಥೆ ಅಂಜನಾ ಯಾತನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಡುಗೆ ಅನಿಲ ಸಿಲಿಂಡರ್, ಒಲೆ ಸೌಲಭ್ಯ : ಅಂಗವಿಕಲರಿಂದ ಅರ್ಜಿ ಆಹ್ವಾನ
ಕೊಪ್ಪಳ,
ನ.೨೦ (ಕರ್ನಾಟಕ ವಾರ್ತೆ) : ಪಟ್ಟಣ ಪಂಚಾಯತ್ ಕಾರ್ಯಾಲಯ, ಯಲಬುರ್ಗಾ ಇವರಿಂದ ಪ್ರಸಕ್ತ
ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಶೇ. ೩ ರ ಅಂಗವಿಕಲರ ಯೋಜನೆಯಡಿ ನೀಡಲಾಗುತ್ತಿರುವ
ಅಡುಗೆ ಅನಿಲ ಸಿಲೆಂಡರ್, ಒಲೆ  ಸೌಲಭ್ಯಕ್ಕಾಗಿ ಅಂಗವಿಕಲರಿಂದ ಅರ್ಜಿ ಆಹ್ವಾನಿಸಲಾಗಿದೆ.
    
ಯೋಜನೆಯಡಿ ಸೌಲಭ್ಯ ಪಡೆಯಲಿಚ್ಛಿಸುವ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯ
ಅಂಗವಿಕಲರು ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಅಂಗವಿಕಲರ ಪ್ರಮಾಣ ಪತ್ರ,  ಆಧಾರ
ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, ಜಾತಿ ಮತ್ತು
ಆದಾಯ ಪ್ರಮಾಣಪತ್ರ, ೪ ಸ್ಟಾಂಪ್‌ಸೈಜ್ ಅಳತೆಯ ಭಾವಚಿತ್ರ  ದಾಖಲೆಗಳನ್ನು ಲಗತ್ತಿಸಿ,
ಪ್ರಕಟಣೆಗೊಂಡ ೭ ದಿನಗಳೊಳಗಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯ ಯಲಬುರ್ಗಾ ಇವರಿಗೆ
ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯವನ್ನು ಕಛೇರಿ
ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ
ಮುಖ್ಯಾಧಿಕಾರಿ ನಾಗೇಶ ತಿಳಿಸಿದ್ದಾರೆ.    
Please follow and like us:
error

Leave a Reply

error: Content is protected !!