You are here
Home > Koppal News > ಇಂದಿರಾಗಾಂಧಿ ರಾಷ್ಟ್ರದ ಧೀಮಂತ ಮಹಿಳೆ- ಕೆ. ಬಸವರಾಜ ಹಿಟ್ನಾಳ

ಇಂದಿರಾಗಾಂಧಿ ರಾಷ್ಟ್ರದ ಧೀಮಂತ ಮಹಿಳೆ- ಕೆ. ಬಸವರಾಜ ಹಿಟ್ನಾಳ

ಕೊಪ್ಪಳ :   ಜಿಲ್ಲಾ ಕಾಂಗ್ರೇಸ ಕಾರ್ಯಾಲಯದಲ್ಲಿ  ಇಂದಿರಾಗಾಂಧಿಯವರ ೯೪ ನೇ ಜನ್ಮದಿನಾಚರಣೆ ಸಂಧರ್ಬದಲ್ಲಿ ಮಾತನಾಡಿದ    ಕೆ. ಬಸವರಾಜ ಹಿಟ್ನಾಳರವರು ಈ ರಾಷ್ಟ್ರಕಂಡ ದೀಮಂತ ಮಹಿಳಾ ಪ್ರಧಾನ ಮಂತ್ರಿ ಇಂದಿರಾಗಾಂಧಿ ಯಾಗಿದ್ದು ಅವರ ೨೦ ಅಂಶಗಳ ಕಾರ್ಯಕ್ರಮಗಳು, ಬ್ಯಾಂಕುಗಳ ರಾಷ್ಟ್ರೀಕರಣ, ಉಳ್ಳುವವನೆ ಒಡೆಯ, ಗರಿಬೀಹಟಾವೋ ಕಾರ್ಯಕ್ರಮಗಳು ರಾಷ್ಟ್ರದ ಅಭಿವೃದ್ದಿಗೆ ಇಂದಿಗೂ ಸಹ ಪೂರಕವಾಗಿವೆ. ಅವರ ಪ್ರsಲವಾದ ಮತ್ತು ಮುತ್ಸದ್ದಿ ನಿರ್ಣಯಗಳು ಭಾರತವನ್ನು ಜಗತ್ತಿನ ಭೂಪುಟದಲ್ಲಿ ವಿಶೇಷ ಸ್ಥಾನ ಮಾನವನ್ನು ಒದಗಿಸಲು ಸಹಕಾರಿಯಾಗಿವೆ. ಭಾರತವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಇವರ ಸಮಯೋಚಿತ ನಿರ್ಣಯಗಳು ಫಲಕಾರಿನೀಡಿ ಜಗತ್ತಿನಲ್ಲಿ ಭಾರತವನ್ನು ಬಲಿಷ್ಟ ರಾಷ್ಟ್ರವನ್ನಾಗಿ ಮಾಡಿದೆ. ಇಂದಿರಾ ಪ್ರೀಯದರ್ಶಿನಿಯವರ ಕಾರ್ಯವೈಖರಿಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಎಸ್.ಬಿ. ನಾಗರಳ್ಳಿ, ಮರ್ದಾನಲಿ ಅಡ್ಡೆವಾಲಿ, ಜುಲ್ಲುಖಾದರಿ, ಕೆ,. ರಾಘವೇಂದ್ರ ಹಿಟ್ನಾಳ, ಗವಿಸಿದ್ದಪ್ಪ ಕಂದಾರಿ, ದ್ಯಾಮಣ್ಣ ಚಿಲವಾಡಗಿ, ಇಂದಿರಾ ಭಾವಿಕಟ್ಟಿ, ಸುಮಾ ಕಟ್ಟಿಮನಿ, ಕೃಷ್ಣಾ ಇಟ್ಟಂಗಿ, ಗೋಲಿಮಹಮದ್, ಅಕ್ತರ ಫಾರುಕ್, ಶಿವಾನಂದ ಹೊದ್ಲೂರ ಅಕ್ಬರಫಾಷಾ ಪಲ್ಟನ ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು  

Leave a Reply

Top