ದಾಸೋಹಕ್ಕಾಗಿ ೧೧೧ ಕ್ವಿಂಟಾಲ್ ಮಾದಲಿ

 ದಾಸೋಹಕ್ಕಾಗಿ ದವಸ-ಧಾನ್ಯಗಳು ಹಾಗೂ ರೊಟ್ಟಿಗಳು,
 ಕೊಪ್ಪಳ; ಸಂಸ್ಥಾನ ಶ್ರೀ ಗವಿಮಠದ  ಜಾತ್ರೆಯ ಅಂಗವಾಗಿ ನಡೆಯುವ ಮಹಾದಾಸೋಹಕ್ಕಾಗಿ ಜಿಲ್ಲೆಯಾಧ್ಯಂತ ಧವಸ-ಧಾನ್ಯಗಳು,ರೊಟ್ಟಿಗಳು ಶ್ರೀಮಠಕ್ಕೆ ಅರ್ಪಿತವಾಗುತ್ತಲಿವೆ. 
ದವಸ-ಧಾನ್ಯಗಳು -. ಕನಕಗಿರಿಯಿಂದ ೧೭೭ ಪಾಕೇಟು ಸಜ್ಜಿ, ೪ ಪಾಕೇಟು ಜೋಳ, ೧ ಪಾಕೇಟು ಸಕ್ರಿ, ೧ ಪಾಕೇಟು ಬೆಲ್ಲ, ೨೫ ಪಾಕೇಟು ಅಕ್ಕಿ, ಕಟಗಿಹಳ್ಳಿ ಗ್ರಾಮದಿಂದ  ೨ ಚೀಲ ಸಜ್ಜೆ, ನಿಲೋಗಲ್ ಗ್ರಾಮದಿಂದ, ೨ ಚೀಲ ಸಜ್ಜೆ, ೧ ಚೀಲ ಮೆಕ್ಕೆ ಜೋಳ, ೨ ಪಾಕೇಟ ಅಕ್ಕಿ,  ಯಡ್ಡೋಣಿ ಗ್ರಾಮದಿಂದ ೮ ಚೀಲ ನೆಲ್ಲು, ನರೇಗಲ್ ಗ್ರಾಮದಿಂದ ೩೦ ಚೀಲ ನೆಲ್ಲು, ೬ ಚೀಲ ಮೆಕ್ಕೆ ಜೋಳ,ಕಂಪಸಾಗರ ಗ್ರಾಮದಿಂದ ೧೧ ಚೀಲ ನೆಲ್ಲು, ಅಗಳಕೇರಾಗ್ರಾಮದಿಂದ ೨೦ ಚೀಲ ನೆಲ್ಲು, ಹಿಟ್ನಾಳ ಗ್ರಾಮದಿಂದ ೪೭ ಚೀಲ ನೆಲ್ಲು,ಹುಣಸಿಹಾಳ ಗ್ರಾಮದಿಂದ ೨ ಪಾಕೇಟು ಅಕ್ಕಿ, ೬ ಪಾಕೇಟು ಉಳ್ಳಾಗಡ್ಡಿ, ಶ್ರೀ ಗವಿಸಿದ್ಧೇಶ್ವರ ಶೆಂಗಾಬೀಜ ವರ್ತಕರ ಸಂಘವು ೪ ಕ್ವಿಂಟಾಲ್ ೨೦ ಕೆ.ಜಿ ಶೇಂಗಾ ಬೀಜ,ಶಿವಪೂ ಗ್ರಾಮದಿಂದ ೨೪ ಚೀಲ ನೆಲ್ಲು, ೩ ಪಾಕೇಟು ಅಕ್ಕಿ, ಮುಸಲಾಪುರ ಗ್ರಾಮದಿಂದ ೪೦ ಪಾಕೇಟು ದವಸ-ಧಾನ್ಯ ನಿಟ್ಟಾಲಿ ಗ್ರಾಮದಿಂದ ೩೦ ಚೀಲ ದವಸಧಾನ್ಯಗಳು,೨ ಚೀಲ ಹಸೆಮೆಣಸಿನಕಾಯಿ, ೧ ಚೀಲ ತೆಂಗಿನಕಾಯಿ, ೬ ಪಾಕೇಟು ಈರುಳ್ಳಿ, ಶ್ರೀಮಠಕ್ಕೆ ಅರ್ಪಿಸಿದ್ದಾರೆ.
ರೊಟ್ಟಿಗಳು – ಯಡ್ಡೋಣಿ ಗ್ರಾಮದ ಭಕ್ತರಿಂದ ೫೦೦೦,ಕೋನಸಾಗರ ಗ್ರಾಮದಿಂದ ೨೩೫೦,ನಿಲೂಗಲ್ ಗ್ರಾಮದಿಂದ ೨೫೦೦, ಕಟಗಿಹಳ್ಳಿ ಗ್ರಾಮದಿಂದ ೩೫೦೦, ಬೆಟಗೇರಿ ಗ್ರಾಮದಿಂದ ೨೦೦೦, ಗುತ್ತೂರು ಗ್ರಾಮದಿಂದ ೧೧೦೦೦, ಗುನ್ನಾಳ ಗ್ರಾಮದಿಂದ ೩೦೦೦, ಚಂಡೂರ ಗ್ರಾಮದಿಂದ ೨೫೦೦, ಅರಕೇರಿ ಗ್ರಾಮದಿಂದ ೨೫೦೦,ಚಂಡಿಹಾಳ ಗ್ರಾಮದಿಂದ ೨೦೦,ಹುಣಸಿಹಾಳ ಗ್ರಾಮದಿಂದ ೧೦೦೦೦, ಮುಸಲಾಪುರ ಗ್ರಾಮದಿಂದ ೧೨೦೦೦, ನಿಟ್ಟಾಲಿ ಗ್ರಾಮದಿಂದ ೪೦೦೦  ರೊಟ್ಟಿಗಳನ್ನು ಶ್ರೀಮಠಕ್ಕೆ ಅರ್ಪಿಸಿದ್ದಾರೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗವಿಸಿದ್ಧೇಶ್ವರ ಶ್ರೀಗಳು ಆಶಿರ್ವದಿಸಿದ್ದಾರೆ. 
– ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯು ವರ್ಷದಿಂದ ವರ್ಷಕ್ಕೆ ನೂತನ ಕಳೆಯಿಂದ ಕಂಗೊಳಿಸುತ್ತಿರುವದು ನಿಜಕ್ಕ್ಕೂ ಅಚ್ಚರಿಯಾಗಿದೆ. ಈ ಭಾಗದ ಸಿದ್ದಗಂಗೆಯೆಂದು ಹೆಸರಾಗುತ್ತಿರುವ ಶ್ರೀ ಗವಿಮಠದ ಮಹಾದಾಸೋಹವು ಭಕ್ತಕುಲಕ್ಕೆ ಒಂದು ಪವಾಡ ಎನ್ನುವಂತಿದೆ. ದಿನಾಲು ೧೫ ರಿಂದ ೨೦ ಸಾವಿರದಷ್ಟು ಭಕ್ತರು ಪ್ರಸಾದದ ಸವಿಯನ್ನು ಅನುಭವಿಸುತಾರೆ. ಈ ಮಹಾದಾಸೋಹಕ್ಕಾಗಿ  ಅನೇಕ ಭಕ್ತರು ತನುಮನಧನದಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಗರದ ನಂದಿನಗರದ ಶ್ರೀ ಶಿವಪ್ಪ ಶೆಟ್ಟರ್ ಮಿಲ್ಲ್ನಲ್ಲಿ ಶ್ರೀ ಗವಿಸಿದ್ಧೇಶ್ವರ ಸೇವಾಸಮಿತಿಯ ಗೆಳೆಯರ ಬಳಗವು ಸೇರಿಕೊಂಡು ಭಕ್ತಾಧಿದಳಿಗೆ ಒಟ್ಟು ೧೧೧ ಕ್ವಿಂಟಾಲ್ ಮಾದಲಿಯನ್ನು ತಯಾರಿಸುವ ಹೊಣೆ ಹೊತ್ತಿದೆ.
ಬಳಸಲ್ಪಟ್ಟ ವಸ್ತುಗಳು: ೪೧ ಕ್ವಿಂಟಾಲ್ ಗೋಧಿ, ೨ ಕ್ವಿಂಟಾಲ್ ಕಡ್ಲಿಬೇಳೆ,೬೪ ಕ್ವಿಂಟಲ್ ಬೆಲ್ಲ,೭೦ ಕೆ.ಜಿ. ಕಸಕಸಿ,೨೫ ಕೆ.ಜಿ. ಸೊಂಟಿ,೧೦ ಕೆ.ಜಿ.ಯಾಲಕ್ಕಿ, ೨ ಕ್ವಿಂಟಾಲ್ ಗಿಟುಗ ಕೊಬ್ಬರಿ, ೧ಕ್ವಿಂಟಾಲ್ ೨೦ ಕೆ.ಜಿ ಪುಠಾಣಿ ಈ ಎಲ್ಲ ವಸ್ತುಗಳನ್ನು ಬಳಸಿಕೊಂಡು ಒಟ್ಟು ೧೧೧ ಕ್ವಿಂಟಾಲ್ ಮಾದಲಿಯನ್ನು ತಯಾರಿಸುವ ಗುರುತರ ಜವಾಬ್ದಾರಿಯನ್ನು ಶ್ರೀ ಗವಿಸಿದ್ಧೇಶ್ವರ ಸೇವಾಸಮಿತಿಯ ಗೆಳೆಯರ ಬಳಗವು ಹೊಂದಿದೆ. ತಯಾರಿ: ಹಲಗೇರಿ,ಕೋಳುರು,ಬನ್ನಿಕೊಪ್ಪ,ವದ್ನಾಳ.ಕಾಟ್ರಳ್ಳಿ,ಕವಲೂರು,ಮೈನಳ್ಳಿ, ಹಿರೇಸಿಂಧೋಗಿ, ಹಂದ್ರಾಳ ಈಮೊದಲಾದ ಗ್ರಾಮಗಳ ಸದ್ಭಕ್ತರು ಹಿಟ್ಟನ್ನು ಮಾಡಿಕೊಂಡು ರೊಟ್ಟಿಗಳನ್ನು ತಯಾರಿಸಿಕೊಂಡು ಶಿವಪ್ಪ ಶೆಟ್ಟರ ಮಿಲ್ಲಿನಲ್ಲಿ ತಂದುಕೊಡುತ್ತಾರೆ. ಅಲ್ಲಿ ದಿನಾಲೂ ನೂರಾರು ಮಹಿಳೆಯರು ಉಚಿತವಾಗಿ ಪುಡಿಮಾಡಿ ಬೆಲ್ಲವನ್ನು ಬೆರೆಸಿ,ಇತರೇ ಪದಾರ್ಥಗಳನ್ನು ಸಮ್ಮಿಶ್ರಣ ಮಾಡಿ ಸಿಹಿಯಾದ ಮಾದಲಿಯನ್ನು ತಯಾರಿಸುವ ಕಾರ್ಯ ಚುರುಕಾಗಿ ನಡೆಯುತ್ತಿದೆ. ಶ್ರೀಗವಿಸಿದ್ಧೇಶ್ವರ ಸೇವಾಸಮಿತಯ ಗೆಳೆಯರ ಬಳಗದ ಗವಿ ಸಿದ್ದಪ್ಪತಳಕಲ್,ರಾಜುಶೆಟ್ಟರ್, ಪತ್ರೆಪ್ಪಪಲ್ಲೇದ, ರೇಣುಕಾರಾಧ್ಯಕೊಂಡದಕಟ್ಟಿಮಠ,ಬಸವರಾಜರಾಜೂರು,ಅಶೋಕಬಜಾರಮಠ, ಚಂದ್ರಶೇಖರಕವಲೂರ, ಮಹೇಂದ್ರಚೋಪ್ರಾ ಈ ಮೊದಲಾದ ಗೆಳೆಯರಬಳಗವು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಈ ಸಿಹಿಯಾದ ಮಾದಲಿಯನ್ನು ದಿನಾಂಕ ೦೯-೦೧-೨೦೧೨ ರಂದು ಸೋಮವಾರ ಶ್ರೀಮಠಕ್ಕ ತಲುಪಿಸಲಾಗುವದೆಂದು ಯಜಮಾನರಾದ ಶಿವಪ್ಪಶೆಟ್ಟರು, ಮತ್ತು ಗವಿಸಿದ್ದಪ್ಪ ತಳಕಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.  
Please follow and like us:
error