ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ-ಸಂಸದ ಶಿವರಾಮಗೌಡ

ಕೊಪ್ಪಳ, ೧೮- ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ಹೈ ಕ. ಭಾಗದಲ್ಲಿ ಕಿನ್ನಾಳ ಕೃಷಿ ಬ್ಯಾಂಕಿನ ಸಾಧನೆ ಎಲ್ಲರು   ಮೆಚ್ಚುವ ಸಂಗತಿಯಾಗಿದು, ಇದು ಇತರ ಬ್ಯಾಂಕಗಳಿಗೆ  ಮಾದರಿ ಎಂದು ಸಂಸದ ಶಿವರಾಮನಗೌಡ ಹೇಳಿದರು.
ಅವರು ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ೬ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸತತವಾಗಿ ೧೫ ವರ್ಷಗಳಿಂದ ಮುಂದುವರೆದಿರುವ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಂಘ ಮಹತ್ವ ಪಾತ್ರ ವಹಿಸುತ್ತಿದ್ದು, ಸಹಕಾರಿ ಬ್ಯಾಂಕ್‌ನ ಮೂಕ ೨.೫ ಕೋಟಿ ಸಾಲ ಪಡೆದಿರುವ ಎಲ್ಲ ಮಹಿಳಾ ಸಂಘಗಳ ಮರುಪಾವತಿಯಲ್ಲಿಯೂ ಸಹ ಮೊದಲನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ ಎಂದರು.
ಬ್ರಿಟಿಷರ ಕಾಲದಲ್ಲಿ ಕಣಗಿನಹಾಳದ ಶಿದ್ದನಗೌಡ ಪಾಟೀಲರ ಈ ಸಹಕಾರ ಚಿಂತನೆ ಇಂದು ವಿಶ್ವ ಮನ್ನಣೆ ಪಡೆದಿದ್ದು, ಕೇಂದ್ರ ಸರ್ಕಾರ ಇತ್ತಿಚಿಗೆ ಸಹಕಾರ ಕ್ಷೇತ್ರಕ್ಕೆ ನೂತನ

ಕಾನೂನುಗಳನ್ನು ಒದಗಿಸಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಲು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷ ಟಿ. ಜನಾರ್ಧನ, ಈ ಕೃಷಿ ಬ್ಯಾಂಕ್ ಹೈ.ಕ. ಭಾಗದಲ್ಲಿ ಮಾದರಿ ಬ್ಯಾಂಕ್ ಆಗಿದ್ದು, ಸಮಾಜಿಕ ಚಿಂತನೆ ರೈತರ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಮೈಲು ಗೆಲ್ಲಾಗಿ  ನಿಂತಿದೆ ಎಂದರು.
ಪುರುಷರ ಸರಿಸಮನಾಗಿ ಮಹಿಳಾ ಸಂಘಗಳಿಗೆ ಈ ಬ್ಯಾಂಕ್ ಸಾಲ ನೀಡಿ ಮರು ಪಾವತಿಯಲ್ಲಿ ಮಹಿಳೆಯರ ಗುರಿ ಪ್ರಸಂಶಿನಿಯ ಸಹಕಾರದ ತತ್ವದಡಿ ಮಹಿಳೆಯರ ಏಳಿಗೆಗೆ ಶ್ರಮಿಸುತ್ತಿದೆ ಎಂದರು.
ತಾ.ಪಂ. ಸದಸ್ಯ ಅಮರೇಶ ಉಪಲಾಪೂರಮಾತನಾಡಿ, ನಮ್ಮ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ೨.೫ ಕೋಟಿ ಸಾಲ ನೀಡಿದ್ಗದು, ೩.೫ ಕೋಟಿ ರೂ. ಕೃಷಿ ಸಾಲ ನೀಡಿದ್ದು, ಮರು ಪಾವತಿಯಲ್ಲಿ ಸಹ ನಮ್ಮ ಸದಸ್ಯರ ಸಾಧನೆ ಮೆಚ್ಚುವಂತಹದ್ದು ಎಂದರು.
ಉದ್ಘಾಟನೆ : ಈ ಸಂದರ್ಭದಲ್ಲಿ ಮಹಿಳಾ ಬ್ಯಾಂಕ್ ಉದ್ಘಾಟನೆಗೊಂಡಿತ್ತು. ಸಿದ್ದನಗೌಡ ಪಾಟೀಲರ ಮೊಮ್ಮಗ ಲಿಂಗನಗೌಡ್ರ ಪಾಟೀಲರಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮಕ್ಕು ಮುನ್ನ ಗ್ರಾಮದಲ್ಲಿ ಶದ್ದನಗೌಡರ ಭಾವಚಿತ್ರ ಮೆರವಣಿಗೆ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕ್‌ನ ಅಧ್ಯಕ್ಷ ಮನೋಹರ್ ಉಕ್ಕಿ ವಹಿಸಿದ್ದರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ವನಿತಾ ಗಡಾದ, ಅಶೋಕ ತೋಟದ, ಕಿನ್ನಾಳ ಗ್ರಾ.ಪಂ. ಅಧ್ಯಕ್ಷ ವೀರಭದ್ರಪ್ಪ ಗಂಜಿ, ಉಪಾಧ್ಯಕ್ಷ ಶೋಭಾ ಯಲಿಗಾರ, ರಾ.ಜ.ಸ. ಕೇಂದ್ರ ಬ್ಯಾಂಕ್ ಅಧ್ಯಕ್ಷ ರಾಜಶೇಖರ ನಾಯಕ, ಉಪಾಧ್ಯಕ್ಷ ಮಂಜುನಾಥ ಸಿದ್ದಾಪೂರ, ಟಿಎಪಿಸಿಎಂಎಸ್ ನಿರ್ದೇಶಕ ಪ್ರಸನ್ನ ಗಡಾದ, ಬಸವರಾಜ ರಾಜೂರ, ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error