ಕೊಪ್ಪಳ ರೋಟರಿ ಕ್ಲಬ್ ಗೆ ೩೧೬೦ ಜಿಲ್ಲಾ ಗರ್ವನರ್ ರೋಟಿ ಭೇಟಿ

ಕೊಪ್ಪಳ : ಇಂಟರನ್ಯಾಶನಲ್ ೩೧೬೦ ಜಿಲ್ಲಾ ಗರ್ವನರ್ ರೋಟೇರಿಯನ್ ಎಂ.ವಿ.ಎನ್. ಪ್ರಭು ಅವರು ಕೊಪ್ಪಳ ರೋಟರಿ ಕ್ಲಬ್ ಗೆ ಭೇಟಿನೀಡಿ ರೋಟರಿ ಕ್ಲಬ್‌ನ ಚಟುವಟಿಕೆಗಳನ್ನು ಶ್ಲಾಘಿಸಿದರು. ರಕ್ತ ದೇಣಿಗೆ, ಆರೋಗ್ಯ ತಪಾಷಣೆ, ಡಯಾಬಿಟಿಸ್ ಕ್ಯಾಂಪ ಮುಂತಾದ ಚಟುವಟಿಕೆಗಳೊಂದಿಗೆ ಈ ವರ್ಷ ಶಾಲೆ ಪ್ರಾರಂಬಿಸುತ್ತಿರುವದು ಸಂತಸದ ವಿಷಯವೆಂದು ತಿಳಿಸಿ ರೋಟರಿ ಕ್ಲಬ್‌ನ ಕೊಪ್ಪಳ ದಿಂದ ಇನ್ನು ಹೆಚ್ಚಿನ ಸೇವೆ ಸಲ್ಲಲಿ ಎಂದು ಹಾರೈಸಿದರು.
ರೋಟರಿ ಭವನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಪ್ಪಳ ರೋಟರಿ ಕ್ಲಬ್ ಅಧ್ಯಕ್ಷ ಡಾ. ಮಹಾಂತೇಶ ಮಲ್ಲನಗೌಡರ ಮಾತನಾಡಿ ಜಿಲ್ಲಾ ಗರ್ವನರ್ ಅವರ ಸಲಹೆಗಳನ್ನು ಸ್ವೀಕರಿ ಇನ್ನೂ ಹೆಚ್ಚಿನ ಚಟುವಟಿಕೆ ಮಾಡಲಾಗುವದು ಎಂದು ತಿಳಿಸಿದಿರು.
ಇದೆ ಸಂದರ್ಭಸಲ್ಲಿ ರೋಟರಿ ಮಾಜಿ ಜಿಲ್ಲಾ ಗರ್ವನರ್ ಡಾ. ಕೆ.ಜಿ. ಕುಲಕರ್ಣಿ ಅವರು ೫೯೯ ಡಾಲರಗಳನ್ನು ರೋಟರಿ ಪೌಡೆಶನ್‌ಗೆ ದೆಣಿಗೆಯಾಗಿ ನೀಡಿದರು. 
ಹೊಸದಾಗಿ ರೋಟರಿ ಸದಸ್ಯತ್ವ ಪಡೆದ ಸೋಮನಾಥ ಜಿ. ಹಾಗು ಕೆ.ಜಿ. ಶ್ರೀನಿವಾಸ ಅವರಿಗೆ ರೋಟರಿ ಪಿನ್ ಹಾಗೂ ಸದಸ್ಯತ್ವ ಪತ್ರನೀಡಿ ಸಗತಿಸಲಾಯಿತು. ರೋಟರಿ ಕ್ಲಬನ ಚಟುವಟಿಕೆಗಳ ವರದಿಯನ್ನು ರೋಟರಿ ಕಾರ್ಯದರ್ಶಿ ಸೈಲಜಾ ಶರಣಪ್ಪ ಅವರು ಓದಿದರು, ರೋಟರಿಯನ್ ೫ ರ ಸಹಾಯಕ ಗರ್ವನರ್ ರೊ.ಎನ್.ಎಂ ಅಗ್ನಿಹೊತ್ರಿ ಯವರು ಮಾತನಾಡಿ ಮಾರ್ಗದರ್ಶನ ನೀಡಿದರು. 
ಕಾರ್ಯಕ್ರಮದ ನಿರೂಪಣೆಯನ್ನು ರೋಟರಿಯನ್ ಶರಣಪ್ಪ ನೆರವೆರಿಸಿದರು. ರೋಟರಿಯನ್ ವಿನಾಯಕ ಗುಮಾಸ್ತೆ ವಂದಿಸಿದರು. 
Please follow and like us:
error