ಕೃಷಿ ವಿಮೆ ಯೋಜನೆ ವಿಮಾ ಕಂತು ಪಾವತಿ ಅವಧಿ ಸೆ. ೧೫ ರವರೆಗೆ ವಿಸ್ತರಣೆ.

ಕೊಪ್ಪಳ ಸೆ. ೧೧ (ಕ ವಾ)ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ರಾಷ್ಟ್ರೀಯ ಕೃಷಿ ವಿಮೆ ಯೋಜನೆಯಡಿ ಬೆಳೆ ಸಾಲ ಪಡೆಯದ ರೈತರಿಗೆ ಬೆಳೆ ವಿಮಾ ಕಂತು ಪಾವತಿಸುವ ಅವಧಿಯನ್ನು ಸೆ. ೧೫ ರವರೆಗೆ ವಿಸ್ತರಿಸಲಾಗಿದೆ.
     ಸಾಲ ಪಡೆಯದ ರೈತರು ಅರ್ಜಿಯೊಂದಿಗೆ, ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಖಾತೆ/ಪಾಸ್ ಪುಸ್ತಕ/ಕಂದಾಯ ರಸೀದಿಗಳೊಂದಿಗೆ ಬ್ಯಾಂಕಿನಲ್ಲಿ ವಿಮಾ ಕಂತು ಕಟ್ಟಿ, ಅರ್ಜಿಯನ್ನು ಸಲ್ಲಿಸುವಂತೆ ಜಂಟಿಕೃಷಿ ನಿರ್ದೇಶಕ ರಾಮದಾಸ್ ಅವರು ತಿಳಿಸಿದ್ದಾರೆ.

Leave a Reply