ಡಿಸೆಂಬರ್‌ನಲ್ಲಿ ಕೊಪ್ಪಳ ಜಿಲ್ಲಾ ೭ನೇ ಚುಟುಕು ಸಾಹಿತ್ಯ ಸಮ್ಮೇಳನ.

ಕೊಪ್ಪಳ-13- ಡಿಸೆಂಬರ್ ಕೊನೆಯ ವಾರದಲ್ಲಿ ಕೊಪ್ಪಳ ಜಿಲ್ಲಾ ೭ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
   ಕೊಪ್ಪಳ ಜಿಲ್ಲೆಯ ಇದುವರೆಗೂ ವೇದಿಕೆಗಳ ಅವಕಾಶಗಳಿಂದ ವಂಚಿತರಾದ ಯುವ ಕವಿಗಳಿಗೆ ಅವಕಾಶ ಒದಗಿಸಲಾಗುತ್ತಿದೆ. ಆದ್ದರಿಂದ ಯುವ ಕವಿಗಳು ತಮ್ಮ ಚುಟುಕು,ಕವನಗಳನ್ನು ಅಕ್ಟೋಬರ್ ೨೫ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.ವಿಳಾಸ:ಹನುಮಂತಪ್ಪ ಅಂಡಗಿ ಚಿಲವಾಡಗಿ,ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು,ಅಂಚೆ ಪಟ್ಟಿಗೆ ಸಂಖ್ಯೆ -೩೦ ಕೊಪ್ಪಳ.೫೮೩೨೩೧. ಸನಿಹವಾಣಿ:೯೦೦೮೯೪೪೨೯೦,೯೦೦೮೭೬೦೪೦೧
Please follow and like us:
error