You are here
Home > Koppal News > ಯತ್ನಟ್ಟಿ ಹಳ್ಳಕ್ಕೆ ಸೇತುವೆ ಕಾರ್ಯಕ್ಕೆ ಅಭಿನಂದನೆ – ಅರ್ಜುನಸಾ ಕಾಟವಾ

ಯತ್ನಟ್ಟಿ ಹಳ್ಳಕ್ಕೆ ಸೇತುವೆ ಕಾರ್ಯಕ್ಕೆ ಅಭಿನಂದನೆ – ಅರ್ಜುನಸಾ ಕಾಟವಾ

 ಕೊಪ್ಪಳ ತಾಲೂಕಿನ ಭಾಗ್ಯನಗರ ಯತ್ನಟ್ಟಿ ಮಧ್ಯ ಹಿರೆಹಳ್ಳವು ಮಳೆಗಾಲದಲ್ಲಿ ತುಂಬಿ ಹರೆಯುತ್ತಿದ್ದಾಗ, ಯತ್ನಟ್ಟಿಯಿಂದ ಕೊಪ್ಪಳಕ್ಕೆ ಬರುವ ಹೋಗುವ ಶಾಲಾ ವಿದ್ಯಾರ್ಥಿಗಳು ರೈತರು ಕೂಲಿ ಕಾರ್ಮಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ವಾಹನ ಇದ್ದವರೂ ಕೂಡಾ ಕಾಲು ಕಿಲೋಮೀಟರ್ ದೂರದ ರಸ್ತೆ ಬದಲಾಗಿ ಹಳ್ಳವನ್ನು ದಾಟಲಾರದೆ ಮಾದ್ನೂರು ರಸ್ತೆ ಮುಖಾಂತರ ಸುತ್ತಿ ಬಳಸಿ ಕೊಪ್ಪಳಕ್ಕೆ ತಲುಪುತ್ತಿದ್ದರು. 
ಈ ತೊಂದರೆ ಕಂಡ ಆಗಿನ ಶಾಷಕರಾದ ಎಂ. ಬಿ. ದಿವಟರ್ ರವರು ೧೯೯೩ – ೯೪ ರಲ್ಲಿ ನಮ್ಮೂರ ಬಾಂದಾರ್ ಎಂಬ ಯೋಜನೆಯಲ್ಲಿ ಈ ಯೋಜನೆ ಸೇರಿಸಿ ಕಾರ್ಯಗೊಳಿಸಲೂ ತುಂಬಾ ಪ್ರಯತ್ನ ಪಟ್ಟರೂ ಮುಂದೆ ಶಾಸಕರಾದ  ಕರಡಿ ಸಂಗಣ್ಣರವರೂ ಕೂಡಾ ಈ ಸೇತುವೆಯ ಅವಶ್ಯಕತೆ ಬಗ್ಗೆ ವಿಧಾನ ಸಭಾ ಸಾಕಷ್ಟು ಸಲ ಪ್ರಸ್ತಾಪಿಸಿದ್ದಾರೆ. 
ಈಗ ಸಚಿವರಾದ  ಶಿವರಾಜ್ ತಂಗಡಗಿ ಹಾಗೂ ಶಾಸಕರಾದ ರಾಘವೇಂದ್ರ ಹಿಟ್ನಾಳ ರವರು ಈ ಸೇತುವೆ ಕಾಮಗಾರಿ ಮಂಜೂರು ಮಾಡಿಸಿ ಏಳುವರೆ ಕೋಟಿ ವೆಚ್ಚದಲ್ಲಿ ಕಾರ್ಯಕ್ಕೆ ಅಡಿಗಲ್ಲು ಹಾಕಿದ್ದಾರೆ.
ಮಾಜಿ ಶಾಸಕರಾದ ಎಂ.ಬಿ. ದಿವಟರ ರವರ ಕನಸನ್ನು ಸಾಕಾರ ಗೊಳಿಸಿದಕ್ಕೆ ಅವರ ಅಭಿಮಾನಿ ಬಳಗ ಅರ್ಜುನಸಾ ಕಾಟವಾ, ಜಾಕಿರ ಹುಸೇನ್ ಕಿಲ್ಲೆದಾರ, ನಾಗರಾಜ ಬಳ್ಳಾರಿ, ಪ್ರಶಾಂತ, ರಾಯ್ಕರ್, ಯಲಲ್ಲಪ್ಪ ಕಾಟ್ರಳ್ಳಿ, ಪರಮಾನಂದ ಯಾಳಗಿ, ಶರಣಬಸವರಾಜ್ ಮಾಲಿಪಾಟೀಲ್, ರೇಣುಕಾ ಪ್ರಸಾದ, ಕಾಟ್ರಳ್ಳಿ, ಶಬ್ಬೀರ್ ಸಿದ್ದಿಖಿ ಸಂತಸ ವ್ಯಕ್ತ ಪಡಿಸಿದ್ದಾರೆ. 

Leave a Reply

Top