ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಕಟಣೆ

ಕೊಪ್ಪಳ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಯಪಡಿಸುವದೇನಂದರೆ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿಯ) (ಸ್ಥಳಿಯ ವೃಂದಗಳ ರಚನೆ ,ಹಂಚಿಕೆ ಮತ್ತು ವ್ಯಕ್ತಿಗಳ ವರ್ಗಾವಣೆ ) ನಿಯಮಗಳು ೨೦೧೩ ರಡಿಯಲ್ಲಿ ಕೊಪ್ಪಳ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾದೇಶಿಕ ಸ್ಥಳಿಯ ವೃಂದಕ್ಕೆ ಸೇರಲು ಇಚ್ಚಿಸುವ ಅಧಿಕಾರಿ/ನೌಕರರು ಅನುಭಂದ ’ಸಿ’ ಯಲ್ಲಿ ನಿರ್ದಿಷ್ಟವಾದ ನಮೂನೆಯಲ್ಲಿ ಈ ಕಾರ‍್ಯಾಲಯದ ಸುತ್ತೋಲೆ ಸಂಖ್ಯೆ ಸಿವಿ೧/ಪ್ರಾಶಾ /ಹೈ.ಕ.ಮಿ/೨೦೧೪-೧೫ ದಿನಾ೦ಕ ೨೭-೧-೨೦೧೫ ರ೦ದು ಹೊರಡಿಸಿದ ಸುತ್ತೋಲೆ ದಿನಾ೦ಕ ದಿ೦ದ ೪೫ ದಿನಗಳೊಳಗೆ ಅಭಿಮತ ಪತ್ರವನ್ನು ಸಕ್ಷಮ ಪ್ರಾಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪಳ ಇವರಿಗೆ ಸಲ್ಲಿಸಲು ಸೂಚುಸುದೆ, ಪ್ರಾದೇಶಿಕ ಸ್ಥಳೀಯ ವೃ೦ದದ ಅಧಿಕಾರಿ/ನೌಕರರು ಸಹ “ಉಳಿದ ಮೂಲ ವೃ೦ದ” ಕ್ಕೆ ಸೇರಲು ಇಚ್ಚಿಸುವವರು ಸಹ ಅಭಿಮತ ಪತ್ರ  ಸೇರಲಿಚ್ಚಿಸುವ ನೌಕರರಿಗೆ ಸೇವಾ ಅವಧಿಯಲ್ಲಿ ಪ್ರಸ್ತುತ ಒ೦ದು ಬಾರಿಗೆ ಮಾತ್ರ ಅವಕಾಶವಿರುತ್ತದೆ ಹಾಗೂ ದಿನಾ೦ಕ ೨೭-೧-೨೦೧೫ ರ೦ದು ಹೊರಡಿಸಿದ ಸುತ್ತೋಲೆ ದಿನಾ೦ಕದಿ೦ದ ೪೫ ದಿನಗಳೊಳಗೆ ಅಭಿಮತ ಪತ್ರವನ್ನು ಸಲ್ಲಿಸಲು ಸೂಚಿಸಿದೆ. ನ೦ತರ ಬ೦ದ ಮನವಿಗಳನ್ನು ಪುರಸ್ಕರಿಸಲು ಅವಕಾಶವಿರುವದಿಲ್ಲ. ಅಧಿಕಾರಿ/ ನೌಕರರು ನಿಗದಿತಾವಧಿಯಲ್ಲಿ ಅಭಿಮತ ಪತ್ರವನ್ನು ಸಲ್ಲಿಸದಿರುವ ಸ೦ದರ್ಭದಲ್ಲಿ ಸ್ಥಳೀಯ ವೃ೦ದವನ್ನು ಸೇರಲು ಇಚ್ಚೆ ಹೊ೦ದಿಲ್ಲವೆ೦ದು ಪರಿಗಣಿಸಲಾಗುವುದು. ತದನ೦ತರ ಕಾರ್ಯನಿರತ ಅಧಿಕಾರಿ/ ನೌಕರರ ವೃ೦ದವಾರು ಪ್ರತ್ಯೇಕವಾಗಿ ಬ೦ದರೆ ಪ್ರಾದೇಶಿಕ ಸ್ಥಳೀಚಿi ವೃ೦ದ ಹಾಗೂ ಉಳಿದ ಮೂಲ ವೃ೦ದಗಳಿಗೆ ವ್ಯಕ್ತಿಗಳ ಹ೦ಚಿಕೆ ಮಾಡಲಾಗುವುದು.  
Please follow and like us:
error