ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ೮೩ ವಿದ್ಯಾರ್ಥಿಗಳು ಗೈರು.

ಕೊಪ್ಪಳ, ಜೂ.೨೨ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಸೋಮವಾರದಂದು ನಡೆದ ಹಿಂದಿ ಪರೀಕ್ಷೆಗೆ ದಾಖಲಾಗಿದ್ದ ಒಟ್ಟು ೬೨೨ ವಿದ್ಯಾರ್ಥಿಗಳ ಪೈಕಿ, ೫೩೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೮೩ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಮತ್ತು ಯಾವುದೇ ಡಿಬಾರ್ ಪ್ರಕರಣಗಳು ದಾಖಲಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ತಿಳಿಸಿದ್ದಾರೆ.
   ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಹಿಂದಿ ವಿಷಯಕ್ಕೆ ಬಾಲಕರು-೩೮೭, ಬಾಲಕಿಯರು-೨೩೫, ಸೇರಿದಂತೆ ಒಟ್ಟು ೬೨೨ ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಪೈಕಿ ಬಾಲಕರು-೩೩೦, ಬಾಲಕಿಯರು-೨೦೯ ಸೇರಿದಂತೆ ಒಟ್ಟು ೫೩೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೫೭-ಬಾಲಕರು, ೨೬-ಬಾಲಕಿಯರು ಸೇರಿದಂತೆ ಒಟ್ಟು ೮೩ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ-೪೨, ಗಂಗಾವತಿ-೨೬, ಕುಷ್ಟಗಿ-೩ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧೨, ಒಟ್ಟು ೮೩ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply