ಎಪಿಕ್ ನೊಂದಿಗೆ ಆಧಾರ್ ಜೋಡಣೆ ಮತದಾರರಿಗೆ ಸೂಚನೆ.

ಕೊಪ್ಪಳ, ಜು.೧೪ ಭಾರತ ಚುನಾವಣಾ ಆಯೋಗವು ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯ
ಮಾಹಿತಿಯನ್ನು ಆಧಾರ ಕಾರ್ಡಿನ ಮಾಹಿತಿಯೊಂದಿಗೆ ಜೋಡಣೆ ಮಾಡುವ ಪ್ರಕ್ರಿಯೆಯನ್ನು
ಪ್ರಾರಂಭಿಸಿದ್ದು, ಜಿಲ್ಲೆಯ ಎಲ್ಲ ಮತದಾರರು ಈ ಜೋಡಣೆ ಕಾರ್ಯಕ್ಕೆ ಅಗತ್ಯ ಸಹಕಾರ
ನೀಡುವಂತೆ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಮನವಿ ಮಾಡಿದ್ದಾರೆ.
     ಮತದಾನವನ್ನು
ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಮತ್ತು ಅಕ್ರಮ ಮತದಾನವನ್ನು
ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಯ
ಮಾಹಿತಿಯನ್ನು ಆಧಾರ ಕಾರ್ಡಿನ ಮಾಹಿತಿಯೊಂದಿಗೆ ಜೋಡಣೆ ಮಾಡುವ ಪ್ರಕ್ರಿಯೆಯನ್ನು
ಪ್ರಾರಂಭಿಸಿದೆ. ಜಿಲ್ಲೆಯ ಮತದಾರರು ತಮ್ಮ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯ
ವಿವರವನ್ನು ಮತ್ತು ಆಧಾರ ಕಾರ್ಡಿನ ಮಾಹಿತಿಯೊಂದಿಗೆ ಜೋಡಣೆ ಕುರಿತು

ceokarnataka.kar.nic.in ವೆಬ್‌ಸೈಟ್‌ನಲ್ಲಿ ತಮ್ಮ ಮತದಾರರ
ಭಾವಚಿತ್ರವಿರುವ ಗುರುತಿನ ಚೀಟಿಯ ನಂಬರ್ ಹಾಗೂ ಆಧಾರ ನಂಬರ್‌ಗಳನ್ನು ಎಂಟ್ರಿ ಮಾಡಿಸಿ,
ಭಾರತ ಚುನಾವಣಾ ಆಯೋಗದ ಈ ಜೋಡಣಾ ಪ್ರಕ್ರಿಯೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ
ಆರ್.ಆರ್.ಜನ್ನು ಜಿಲ್ಲೆಯ ಎಲ್ಲ ಮತದಾರರಲ್ಲಿ ಮನವಿ ಮಾಡಿದ್ದಾರೆ.

Leave a Reply