ದಲಿತ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ

ಕೊಪ್ಪಳ, ಜೂ. ೮. ದಲಿತ ಸಾಹಿತ್ಯ ಪರಿಷತ್ ನಿಂದ ನಡೆಯುವ ೩ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜೂನ್ ೧೮ ಮತ್ತು ೧೯ ರಂದು ಕೊಪ್ಪಳದಲ್ಲಿ ನಡೆಯಲಿದ್ದು ಇದರ ಲಾಂಛನವನ್ನು ಯುವ ಉದ್ಯಮಿ ಸಮಾಜ ಸೇವಕ ಜಿ. ಟಿ. ಪಂಪಾಪತಿ ಅನಾವರಣಗೊಳಿಸಿದರು.
ಯಲಬುರ್ಗಾ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿಗಳ ಸಾನಿಧ್ಯತೆಯಲ್ಲಿ ಅವರ ಮಠದಲ್ಲಿ ಬಿಡುಗಡೆಗೊಳಿಸಲಾಯಿತು. ಕೊಪ್ಪಳ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಯಲಬುರ್ಗಾ ತಾಲೂಕ ದಸಾಪ ಅಧ್ಯಕ್ಷ ಮಾನಪ್ಪ ಪೂಜಾರ, ಚತ್ರಪ್ಪ ಛಲವಾದಿ, ತಾ. ಪಂ. ಸದಸ್ಯ ಫಕೀರಪ್ಪ ತಳವಾರ, ಭೀಮಣ್ಣ ಹವಳೆ, ಬಸವರಾಜ ಒಂಟೇಲಿ, ಶರಣಪ್ಪ ವಾಲ್ಮೀಕಿ ಇತರರು ಇದ್ದರು.
Please follow and like us:
error