ಅನಧಿಕೃತ ಕಟ್ಟಡ ತೆರವಿಗೆ ೭ ದಿನಗಳ ಗಡುವು

  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ವಾರ್ಡ್ ನಂ.೧೨ ರಲ್ಲಿ ರಸ್ತೆಯ ಎರಡು ಬದಿಯಲ್ಲಿರುವ ಅನಧಿಕೃತ ಕಟ್ಟಡಗಳನ್ನು ಏಳು ದಿನಗಳ ಒಳಗಾಗಿ ತೆರವುಗೊಳಿಸಬೇಕು ಎಂದು ನಗರಸಭೆಯ ಪೌರಾಯುಕ್ತರು ಸೂಚನೆ ನೀಡಿದ್ದಾರೆ.
  ವಾರ್ಡ್ ಸಂ. ೧೨ ರಲ್ಲಿ ಜಗಜೀವನರಾಮ್ ವೃತ್ತದಿಂದ ಗವಿಮಠದ ಕಂಪೌಂಡ್‌ವರೆಗೆ ೨೦೧೨-೧೩ನೇ ಸಾಲಿನ ಎಸ್.ಎಫ್.ಸಿ. ಶೇ.೨೨.೭೫% ರ ಅನುದಾನದ ಅಡಿಯಲ್ಲಿ ರಸ್ತೆಯ ಎರಡು ಬದಿಯಲ್ಲಿರುವ ಅನಧಿಕೃತ ಕಟ್ಟಡಗಳನ್ನು ೭ ದಿನಗಳ ಒಳಗಾಗಿ ತೆರವುಗೊಳಿಸಬೇಕು.
ಈ ಎರಡು ರಸ್ತೆಯ ಬದಿಯಲ್ಲಿ ಆರ್.ಸಿ.ಸಿ. ಚರಂಡಿ ನಿರ್ಮಾಣ ಹಾಗೂ ಸ್ಲ್ಯಾಬ್ ಅಳವಡಿಸುವ ಕಾಮಗಾರಿಯನ್ನು ನಿರ್ವಹಿಸಬೇಕಾಗಿದ್ದು, ಈ ರಸ್ತೆಗೆ ಹೊಂದಿಕೊಂಡಿರುವ ಆಸ್ತಿ ಮಾಲೀಕರಿಗೆ ಈಗಾಗಲೇ ನಗರಸಭೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.  ಅಲ್ಲದೆ  ಮೌಖಿಕವಾಗಿ ಕಟ್ಟಡ ತೆರವುಗೊಳಿಸಲು ತಿಳಿಸಲಾಗಿದ್ದು, ಇದುವರೆಗೂ ಕಟ್ಟಡಗಳನ್ನು ತೆರವು ಮಾಡಿಕೊಂಡಿಲ್ಲ.  ಈ ಕಾಮಗಾರಿಗೆ ಎರಡು ಬದಿ ಹೊಂದಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವುದು ಅಗತ್ಯವಾಗಿದ್ದು, ತಪ್ಪಿದಲ್ಲಿ, ನಗರಸಭೆಯಿಂದಲೇ ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟವರ ಆಸ್ತಿ ತೆರಿಗೆಯಲ್ಲಿ ಸೇರಿಸಿ ವಸೂಲಿ ಮಾಡಲಾಗುವುದು ಎಂದು ಕೊಪ್ಪಳ ನಗರಸಭೆಯ ಪೌರಾಯುಕ್ತ ರುದ್ರಮುನಿ ಅವರು ಎಚ್ಚರಿಕೆ ನೀಡಿದ್ದಾರೆ.

Leave a Reply