ಗ್ರಾಮೀಣ ಪ್ರದೇಶಗಳಲ್ಲಿ ಆಧಾರ್ ನೋಂದಣಿ ಪ್ರಾರಂಭ- ಡಾ. ಪ್ರವೀಣ್‌ಕುಮಾರ್.

ಕೊಪ್ಪಳ
ಸೆ. ೧೬ (ಕ
     ಕೊಪ್ಪಳ ಜಿಲ್ಲೆಯಲ್ಲಿ
ಈಗಾಗಲೆ ಎಲ್ಲ ನಾಡ ಕಾರ್ಯಾಲಯಗಳಲ್ಲಿರುವ ಅಟಲ್‌ಜಿ ಕೇಂದ್ರಗಳಲ್ಲಿ ಆಧಾರ್ ನೋಂದಣಿ
ಮಾಡಲಾಗುತ್ತಿದೆ.  ಆಧಾರ್ ಕಾರ್ಡ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳಾದ
ಪಡಿತರ ಚೀಟಿ, ಗ್ಯಾಸ್ ಸಂಪರ್ಕ, ಬ್ಯಾಂಕ್ ಖಾತೆ ತೆರೆಯಲು, ಸರ್ಕಾರದ ವಿವಿಧ ಯೋಜನೆಗಳ
ಸಬ್ಸಿಡಿ ಪಡೆಯಲು, ಸರ್ಕಾರದ ಪರಿಹಾರ ಧನ ಪಡೆಯಲು, ವೃದ್ಧಾಪ್ಯ ಯೋಜನೆ,
ಸಂಧ್ಯಾಸುರಕ್ಷಾ, ಅಂಗವಿಕಲತೆ ಮಾಸಾಶನ, ಮನಸ್ವಿನಿ, ಮೈತ್ರಿ ಮಾಸಾಶನ ಪಡೆಯಲು ಅಲ್ಲದೆ
ವಿದ್ಯಾರ್ಥಿ ವೇತನ ಪಡೆಯಲು ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ.  ಎಲ್ಲ ಜನರಿಗೂ ಆಧಾರ್
ನೋಂದಣಿ ಅವಶ್ಯವಿರುವುದರಿಂದ ಆಧಾರ್ ನೋಂದಣಿಗೆ ಕೊಪ್ಪಳ ಜಿಲ್ಲಾಡಳಿತ ಕ್ರಮವನ್ನು
ಕೈಗೊಂಡಿದ್ದು, ಈಗಾಗಲೆ ಎಲ್ಲ ಗ್ರಾಮಗಳಿಗೆ ನೇರವಾಗಿ ತೆರಳಿ ಆಧಾರ್ ನೋಂದಣಿ ಕೈಗೊಳ್ಳಲು
ಅನುಕೂಲವಾಗುವಂತೆ ಸಂಚಾರಿ ಕಿಟ್ಸ್‌ಗಳನ್ನು ಒದಗಿಸಲಾಗಿದೆ.  ಕೊಪ್ಪಳ ಜಿಲ್ಲೆಯ ಮರಳಿ
ಗ್ರಾಮ ಪಂಚಾಯತಿ, ಕೊಪ್ಪಳ- ಹೆಚ್‌ಪಿಎಸ್ ಶಾಲೆ, ಗಂಗಾವತಿ-ಸಿಪಿಎಸ್ ಕನ್ನಡ ಉರ್ದು
ಪ್ರಾ.ಶಾಲೆ.  ತಾವರಗೇರಾ ನಾಡಕಚೇರಿ, ಹುಳ್ಕಿಹಾಳ, ಬೋಚನಹಳ್ಳಿ, ಬೇವೂರು ಸರ್ಕಾರಿ
ಪ್ರಾ.ಶಾಲೆಗಳು.  ಕುಷ್ಟಗಿ ಬಾಲಕಿಯರ ಪ್ರಾ.ಶಾಲೆ.  ಕನಕಗಿರಿ ಸರ್ಕಾರಿ ಪ್ರೌಢಶಾಲೆ. 
ವಜ್ರಬಂಡಿ, ದಮ್ಮೂರು, ಬೂದಗುಂಪಾ ಗ್ರಾಮ ಪಂಚಾಯತಿ ಕಾರ್ಯಾಲಯಗಳಲ್ಲಿ ಹಾಗೂ ಪರಸಾಪುರ
ಸರ್ಕಾರಿ ಶಾಲೆಯಲ್ಲಿ ಆಧಾರ್ ನೋಂದಣಿ ಕಾರ್ಯ ಪ್ರಾರಂಭಿಸಲಾಗಿದೆ.  ಸಾರ್ವಜನಿಕರು ಆಧಾರ್
ನೋಂದಣಿಯ ಸದುಪಯೋಗ ಪಡೆದುಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಗ್ರಾಮ
ಲೆಕ್ಕಿಗರನ್ನು ಸಂಪರ್ಕಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣ್‌ಕುಮಾರ
ಜಿ.ಎಲ್. ಅವರು ಮನವಿ ಮಾಡಿದ್ದಾರೆ.

ವಾ) ಸಾರ್ವಜನಿಕರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು
ಆಧಾರ್ ಕಾರ್ಡ್ ಅತ್ಯಗತ್ಯವಾಗಿದ್ದು, ಇದೀಗ ಕೊಪ್ಪಳ ಜಿಲ್ಲೆಯ ಹಲವು ಗ್ರಾಮಗಳಲ್ಲಿ
ಆಧಾರ್ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.
ಪ್ರವೀಣ್‌ಕುಮಾರ್ ಜಿ.ಎಲ್. ಅವರು ತಿಳಿಸಿದ್ದಾರೆ.

Please follow and like us:
error