fbpx

ನೇತಾಜಿ ಸುಭಾಷಚಂದ್ರ ಬೋಸ್ ರವರ ಜನ್ಮ ದಿನಾಚಾರಣೆ

ಬ್ರಿಟಿಷ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಅಪ್ರತೀಮ ಹೋರಾಟಗಾರ,  ನಾಯಕರ ನಾಯಕ, ಭ್ರಿಟಿಷರ ಸಿಂಹಸ್ವಪ್ನ ನೇತಾಜಿ ಸುಭಾಷಚಂದ್ರ ಬೋಸ್ ರವರ ಜನ್ಮ ದಿನಾಚಾರಣೆ

ಯನ್ನು ಎ ಐ ಡಿ ವೈ ಓ (ಆಲ್ ಇಂಡಿಯಾ ಡೆಮಾಕ್ರಡಿಕ್ ಯೂತ್ ಆರ್ಗನೈಸೆಷನ್) ಸಂಘಟನೆಯಿಂದ ಆಚರಿಸಲಾಯಿತು.

ಇದರ ಅಂಗವಾಗಿ ಬನ್ನಿಕಟ್ಟಿಯಿಂದ ಬಸ್ ನಿಲ್ದಾಣಮಾರ್ಗವಗಿ ರೈಲ್ವೇ ನಿಲ್ದಾಣದ ವರೆಗೂ ಪ್ರಭತ್ ಪೆರಿಯನ್ನು ಕೈಗೊಂಡಿತ್ತು. ಮೆರವನಿಗೆಯ ಉದ್ದಕ್ಕೂ ನೇತಾಜಿ ನಮ್ಮ ಸ್ಪೂರ್ತಿ, ನೇತಾಜಿಯವರ ನೆನಪು ಅಮರವಾಗಲಿ, ಅವರ ವಿಚಾರಗಳೂ ಎಲ್ಲಲ್ಲೂ ಹರಡಲಿ ಎಂಬ ಘೋಷಣೆಗಳು ಮನಮುಟ್ಟುವಂತಿದ್ದವು. ಈ ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುವದರೊಂದಿಗೆ ಕೊಪ್ಪಳ ನಗರದಲ್ಲಿ ಹೊಸ ಚೈತನ್ಯವನ್ನು ತುಂಬಿತು.
ನಂತರ ಎಲ್ಲಾ ವಿದ್ಯಾರ್ಥಿಗಳನ್ನು ಉದ್ದೇಶಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿಗಳಾದ ರಮೇಶ ವಂಕಲಕುಂಟಿ,  ನೇತಾಜಿಯವರು ಯುವಕರಿಗೆ ’ನಿವು ನನಗೆ ರಕ್ತವನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೆನೆ’ ಎನ್ನುವುದರ ಮೂಲಕ ಸ್ಪೂರ್ತಿಯ ಸೆಲೆಯಾಗಿದ್ದರು.  ದೇಶಕ್ಕಾಗಿ ಸರ್ವವನ್ನು ತ್ಯಾಗಮಾಡಿ ಸ್ವತಂತ್ರ ಹೊರಾಟದಲ್ಲಿ ಧುಮುಖಿದವರು. ಆದರೆ ಇಂದು ಉದ್ದೇಶ ಪೂರ್ವಕವಾಗಿ ಕ್ರಾಂತಿಕಾರಿಗಳ ಮತ್ತು ಅವರ ಹೋರಾಟವನ್ನು ಮುಚ್ಚಿಡಲಾಗುತ್ತಿದೆ. ನೇತಾಜಿ, ಭಗತ್ ಸಿಂಗ್, ಅಶ್ವಖುಲ್ಲಾಖಾನ, ರಾಮಪ್ರಸಾದ ಬಿಸ್ಮಿಲ್, ರವರು ಕನಸು ದುಡಿವಜನತೆಗೆ ಬಡವರಿಗೆ ಸ್ವಾತಂತ್ರ್ಯಬರಿಲಿ ಎಂದು. ಆದರೆ ಅವರ ಕನಸು ಅಪೂರ್ಣವಾಗಿದೆ ಅದನ್ನು ಪೂರ್ತಿಮಾಡಲು ನಾವು ಮತ್ತೋಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜಗಬೇಕೇಂದು ಕರೆನೀಡಿದರು.
ಇನ್ನೋಬ್ಬ ಸಂಘಟನಾಕಾರರಾದ ಶರಣು ಗೀಣಗೇರಾ ಮಾತನಾಡಿ ನಮ್ಮ ಸಂಘಟನೆ ಸ್ವತಂತ್ರ್ಯ ಹೊರಾಟಗಾರರ ಜನ್ಮದಿನವನ್ನು ಆಚರಣೆಮಾಡುವುದೋಂದೆ ಅಲ್ಲದೆ, ಅವರ ವಿಚಾರಗಳನ್ನು ಮತ್ತು ತತ್ವಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಲು ಪ್ರೇರೆಪಿಸುತ್ತದೆ. ಇಂತ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ಹೆಚ್ಚು ಹೆಚ್ಚು ಭಗವಹಿಸಬೇಕು. ಎಂದರು 
ಎ ಐ ಡಿ ವೈ ಓ ನ ಸಂಘಟನಕಾರರಾದ ಶಿವುಕುಮಾರಾ ಗೀಣಗೇರಾ, ಕಿರಣ ಭಾಗ್ಯನಗರ, ರಫಿಕ್ ಮುಂತಾದವರು ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!