fbpx

ಜೇಡರ ದಾಸೀಮಯ್ಯನೇ ವಚನಕಾರ -ತಿಪ್ಪೇರುದ್ರ ಸ್ವಾಮಿ

ಗಂಗಾವತಿ,೨೯- ಜೇಡರ ದಾಸಿಮಯ್ಯನೇ ವಚನಕಾರ.ರಾಮನಾಥ ಅಂಕಿತನಾಮ ವಿರುವ ವಚನಗಳು ಜೇಡರ ದಾಸಿಮಯ್ಯನವರದೇ ಎಂಬುದಕ್ಕೆ ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ,ಹಿರಿದಪ್ಪ ರಾಜ್ಯವನ್ನಿತ್ತಡೆ ಒಲ್ಲೆ,ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತಡೆ,ನಿಮ್ಮನಿತ್ತಂತೆ ಕಾಣಾ ರಾಮನಾಥ! ಇದು ಜೇಡರ ದಾಸಯ್ಯನ ಅತ್ಯಂತ ಪ್ರಸಿದ್ಧ ಮತ್ತು ಜನಪ್ರಿಯ ವಚನ; ಇಲ್ಲಿ ಬರುವ ಒಂದು ವಾಕ್ಯವು ಬಹಳ  ಮಹತ್ವಪೂರ್ಣ. ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತಡೆ ಎಂಬ ವಾಕ್ಯದಲ್ಲಿ ಶರಣರು ಮತ್ತು ಅವರ ಸೂಳ್ನುಡಿಗಳು ಆಗಲೇ ಅಭ್ಯವಾಗುತ್ತಿದ್ದವು ಎಂಬ ಬಗ್ಗೆ ಸೂಚನೆ ದೊರೆಯುತ್ತಿದೆ. ಶರಣ ಪದವು ವಚನ ಧರ್ಮದ ಕೊಡುಗೆ. ಅದಕ್ಕೆ ಮೊದಲಿಗೆ ಭಕ್ತರನ್ನ ಶಿವಭಕ್ತರು ಎಂದು ಕರೆಯಲಾಗುತ್ತಿತ್ತು. ಶರಣರ ಸೂಳ್ನುಡಿಗಳಿಗೆ ಜೇಡರ ದಾಸಯ್ಯನವರ ಹಂಬಲಿಸುತ್ತಿದ್ದರು ಎಂಬುದು ಈ ಮಾತಿನಿಂದ ವ್ಯಕ್ತವಾಗುತ್ತದೆ.ಈವಚನ ನೊಡಿದರೆ ತಿಳಿಯುತ್ತದೆ.ಎಂದು ಬಿಜೆಪಿಯ ರಾಜ್ಯ ರೈತ  ಮುಖಂಡ ತಿಪ್ಪೇರುದ್ರ ಸ್ವಾಮಿ ವಕೀಲರು ಅಭಿಪ್ರಾಯ ಪಟ್ಟರು.
ಅವರು ರವಿವಾರ ಸರೋಜಾನಗರದಲ್ಲಿರುವ  ಬಸವಮಂಟಪದಲ್ಲಿ ರಾಷ್ಟ್ರೀಯ ಬಸವದಳದವರಿಂದ ಬಸವಣ್ಣನವರ ಹಿರಿಯ ಸಮಕಾಲಿನ ಶರಣ ಆಧ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿಕಾರ್ಯಕ್ರಮದಲ್ಲಿ ಮಾತನಾಡುತ್ತ  ದೇವರ ದಾಸಿಮಯ್ಯ ಸ್ಥಾವರ ಲಿಂಗ ವಿರೋಧಿಯಲ್ಲ. ಬಹಳ ಕಡೆ ವಿಷ್ಣುಮೂರ್ತಿಯನ್ನು ತೆಗೆದು ರಾಮನಾಥ ಲಿಂಗವನ್ನು ಜೀನಾಲಯಗಳಲ್ಲಿ ಜೀನಮೂರ್ತಿ ತೆಗೆದು ಸ್ಥಾವರ ಲಿಂಗಗಳನ್ನು ಸ್ಥಾಪಿಸಿದ್ದಾನೆ. ಆದರೆ ಜೇಡರ ದಾಸಿಮಯ್ಯನು ಲಿಂಗಾಯತ ಧರ್ಮ ಸ್ವೀಕರಿಸಿ ಊರಿಗೆ ಬಂದಾಗ ಕುತೂಹಲದಿಂದ ಬಾಲ್ಯದಲ್ಲಿ ತನ್ನ ಆರಾಧ್ಯ ದೇವತೆಯಾಗಿದ್ದ ರಾಮನಾಥನ ಗುಡಿಗೆ ಸಂದರ್ಶನಕ್ಕೆ ಬಂದು ನಮಸ್ಕರಿಸದೆ ಇದ್ದಾಗ ವಿಪ್ರರು ವ್ಯಂಗ್ಯವಾಡಿರುವುದನ್ನು ಗಮನಿಸಿದರೆ ದೇವರ ದಾಸಿಮಯ್ಯ ಶೈವ / ವೀರಶೈವ;ಮ ಜೇಡರ ದಾಸಿಮಯ್ಯ ಇಷ್ಟಲಿಂಗ ನಿಷ್ಠಾಪರ ಲಿಂಗಾಯತ ಶರಣ ಎಂಬುದು ಮನದಟ್ಟಾಗುತ್ತದೆ. ಬಸವಾದಿಶರಣರ  ಅನುಭವ ಮಂಟಪ ಇಂದಿನ ಪಾರ್ಲಮೆಂಟ್ ಅನುಭವ ಮಂಟಪದಲ್ಲಿ ಸಮಾಜವನ್ನ ಹೇಗೆ ಕಟ್ಟಬೇಕು ಜೀವನ ಹೇಗಿರಬೇಕು,ಎಭ ವಿಚಾರಚಿಂತನ ಮಂತನ ನಡೆಸಿ ವಚಣಗಳಮೂಕ  ಸಂವಿಧಾನವನ್ನ  ರಚಿಸುತಿದ್ದರು.ಆವಚನಗಳು ಯುಗಯುಗಾಂತ ಸತ್ಯವಾಗಿತ್ತವೆ ಈಗಿನ ಸರಕಾರ ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ಇಲ್ಲ ಬಸವಣ್ಣನವರು ಸಮಬಾಳು ಸಮಪಾಲು ಎಂಬ ತ್ವವನ್ನು ಸಾರಿ ಸಾದಿಸಿ ತೊರಿಸಿದರುಎಂದರು.
ನಿವೃತ್ತ ನಾಡ ತಹಸಿಲ್ದಾರ್ ಕೆ.ಬಾಲಪ್ಪ ಮಾತನಾಡಿ ಜೇಡರ ದಾಸಿಮಯ್ಯನವರೇ ವಚನಕಾರು ಅದರಲ್ಲಿ ಎರಡುಮಾತಿಲ್ಲ  ಜೇಡತದಾಸಿಮಯ್ಯನವರ ಕಾಯಕ ನೇಗಿಕಾಯಕ, ಅವರದಾಂಪತ್ಯ ಜೀವನ ಅನ್ನೂನ್ಯ ವಾಗಿತ್ತು. ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಇಬ್ಬರೂ ಒಂದೇ ಊರಿನವರು ಮುದನೂರಿನವರಾಗಿ, ಇದ್ದುದು. ಇಬ್ಬರ ಪತ್ನಿಯರ ಹೆಸರೂ ದುಗ್ಗಳೆ ಎಂದಿರುವುದು. ಇಬ್ಬರೂ ಬಾಲ್ಯದಿಂದಲೂ ತಮ್ಮ ಊರಿನ ಅಧಿದೈವತವಾದ ರಾಮನಾಥನ ಭಕ್ತರೇ ಆದುದು.ಗೊಂದಲಕ್ಕೆ ಕಾರಣವಾಗಿದೆ.ಎಂದರು 
 ಪ್ರಾಸ್ತಾವಿಕವಾಗಿ ನಿಜಲಿಂಗಪ್ಪ ಮೆಣಸಗಿ ಮಾತನಾಡಿ  ದೇವರ ದಾಸಿಮಯ್ಯನು ಜಯಸಿಂಹನ ಪತ್ನಿ ಸುಗ್ಗಲೆಗೆ ಮಾತ್ರ ಶೈವದೀಕ್ಷೆ ಕೊಟ್ಟಿದ್ದ. ಪತಿ ಜಯಸಿಂಹನು ಇನ್ನೂ ಜೈನಧರ್ಮದಲ್ಲಿಯೇ ಇದ್ದ. ಹೀಗೆ ಶಿವಭಕ್ತಿ ವೈಯಕ್ತಿಕ ಆಯ್ಕೆಯಾಗಿತ್ತು. ಶೈವ ಮಾರ್ಗವು ಒಂದು ಆಧ್ಯಾತ್ಮಿಕ ಪಂಥ ವಾಗಿತ್ತು. ಲಿಂಗಾಯತ ಧರ್ಮದಲ್ಲಿ ಹಾಗೆ ಅವಕಾಶವಿರಲಿಲ್ಲ. ಪತಿ, ಪತ್ನಿ ಕುಟುಂಬ ಪರಿವಾರ ಎಲ್ಲರೂ ಒಂದೇ ಆಚರಣೆಯಲ್ಲಿರಬೇಕಾಗಿತ್ತು. ಒಂದು ವೇಳೆ ಒಬ್ಬರು ದೀಕ್ಷೆ ಪಡೆದರೆ ಅವರು ದೀಕ್ಷೆ ಹೊಂದಿದ ಭವಿಗಳಿಂದ ದೂರವಿರಬೇಕಾಗಿತ್ತು.  ಇದರಿಂದ ಮನವರಿಕೆಯಾಗುಇದೆನೆಂದರೆ ದೇವರ ದಾಸಿಮಯ್ಯ ಶಿವಭಕ್ತ, ಶೈವಮಾರ್ಗ ಅನುಸಾರಿಯೇ ವಿನಾ ಲಿಂಗಾಯತ ಶರಣನಾಗಲಿರಲಿಲ್ಲ. ಜೈನರನ್ನು ವಾದದಲ್ಲಿ ಸೋಲಿಸಿದ ದಾಸಿಮಯ್ಯ ಜಯಸಿಂಹನಿಗೆ ಶೈವದೀಕ್ಷೆ ಕೊಟ್ಟ. ಅವನ ರಾಜಧಾನಿಯಾಗಿದ್ದ ಏಳು ನೂರು ಬಸದಿಗಳು ಶಿವಾಲಯಗಳಾದವು.  ಶ್ರೀ ಗುರು ಬಸವಣ್ಣನವರು ಗುಡಿಶಾಹಿ  ಮತ್ತು ಪುರೋಹಿತ ಶಾಹಿ  ಎರಡಕ್ಕೂ ವಿರೋಧಿ. ಹೀಗಾಗಿ ಅವರು ಮತ್ತು ಅವರ ಅಮನಕಾಲೀನ ಶರಣ ಮಾರ್ಗಿಗಳು, ನಂತರದ ಬಸವ ಪಥಿಕ ಯೋಗಿಗಳು ಯಾರೂ ವೈಷ್ಣವ ಗುಡಿಯಲ್ಲಿ ಸ್ಥಾವರಲಿಂಗವನ್ನು ಸ್ಥಾಪಿಸುವ, ಜೀನಾಲಯಗಳನ್ನು ಶಿವಾಲಯಗಳನ್ನಾಗಿ ಪರಿವರ್ತಿಸುವ ಹೋರಾಟಕ್ಕೆ ತೊಡಗಿಯೇ ಇಲ್ಲ. ದೇಹವನ್ನು ದೇವಾಲಯವಾಗಿ ಮಾಡಿಕೊಳ್ಳಲು ಇಷ್ಟಲಿಂಗವನ್ನು ಕಟ್ಟಿದರು.  ಆದ್ದರಿಂದ ವಿಷ್ಣ ಜೀನರ ಆಲಯಗಳನ್ನು ಶಿವಾಲಯಶಿವಾಲಯ ಮಾಡುವ ಸಂಘರ್ಷದಲ್ಲಿ ಶೈವರು, ವೀರಶೈವರು ತೊಡಗಿದ್ದರೇ ವಿನಾಃ ಲಿಂಗಾಯತ  ಶರಣರು ಅಲ್ಲ. ದೇವರ ದಾಸಿಮಯ್ಯ ಏಕ ಶಿವೋಪಾಸಕ ಜೇಡರ ದಾಸಿಮಯ್ಯ ಶರಣನಾದ ಏಕದೇವೋಪಾಸಕ ಏಕದೇವೋಪಾಸನೆ ಗುರು ಬಸವಸಂಸ್ಥಾಪಿಸಿದ ಲಿಂಗಾಯತ ಧರ್ಮದ ಮುಖ್ಯತತ್ವ ವಾಗಿದೆ. ಜೇಡರದಾಸಿಮಯ್ಯ,ಮತ್ತು ದೇವರದಾಸಿಮಯ್ಯ ಕಾಲಘಟ್ಟ ಯಾವುದಯ ಚನಗಳು ಯಾವಕಾಲಘಟ್ಟದಿಂದ ಬಂದವು ಎಂಬುದರ ಬಗ್ಗೆ ಸಾಹಿತಿಗಳು ವಿದ್ವಾಂಸರು ಸರಕಾರಕ್ಕೆ ಮನದಟ್ಟ ಮಾಡಿಕೊಡಬೇಕಾಗೆದೆ ಎಂದರು.
ಅಧ್ಯಕ್ಷತೆ ವಹಿಸಿ ರಾ.ಬಸವದಳ ಅಧ್ಯಕ್ಷ ಕೆ.ಪಂಪಣ್ಣ ಮಾತನಾಡಿ  ಜೇಡರ ದಾಸಿಮಯ್ಯನ ಕಾಯಕ ನೇಗಿಕಾಯಕ  ಎರಡು ಶರಣರಬಗಬಗ್ಗೆ ಅದ್ಯಯನನಡೆಯಬೇಕಿದೆ,ಅವರ ವಚನಗಳು ಅದ್ಭುತವಾಗಿವೆ. ತವನಿಧಿಯಮಹಿಮೆ ಬಗ್ಗೆ ತಿಳಿಸಿಕೊಟ್ಟರು ಕಾರ್ಯದರ್ಶಿ ಲಿಂಗಪ್ಪ ತಟ್ಟಿ ಕರ್ಯಕ್ರಮನಡೆಸಿಕೊಟ್ಟರು. ಈಸಂದರ್ಭದಲ್ಲಿ ಜಿ.ತಿಪ್ಪಣ್ಣ,ಮಾಟೂರ ಮಾಮಲ್ಲಪ್ಪ, ಕೆ.ವಿರೇಶ, ದಿಲಿಪಕುಮಾರ,ಪಕುರಸಾಬ್, ಕಂಪ್ಲಿಯ ಪಾಮಯ್ಯ ಶರಣ,ವೀರಭದ್ರಪ್ಪ, ಮಲ್ಲಯ್ಯ ಶ್ರೀನಿವಾಸ,ಮಲ್ಲಿಕಾರ್ಜುನ ಹೊಸಕೇರಾ ಮುಂತಾದವರಿದ್ದರು.
Please follow and like us:
error

Leave a Reply

error: Content is protected !!