ಡಿ. ೨೩, ೨೪ ರಂದು ಜಿಲ್ಲಾಡಳಿತದಿಂದ ಇಟಗಿ ಉತ್ಸವ ಆಚರಣೆ

ಕೊಪ್ಪಳ ಡಿ. : ಇದೇ ಡಿ. ೨೩ ಮತ್ತು ೨೪ ರಂದು ಎರಡು ದಿನಗಳ ಕಾಲ ಇಟಗಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ಯಲಬುರ್ಗಾ ತಾಲೂಕು ಇಟಗಿಯ ಗ್ರಾಮ ಪಂಚಾಯತಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
  ಇದೇ ಡಿ. ೨೩ ಮತ್ತು ೨೪ ರಂದು ಎರಡು ದಿನಗಳ ಕಾಲ ಇಟಗಿ ಉತ್ಸವವನ್ನು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು.  ಸರ್ಕಾರ ಇಟಗಿ ಉತ್ಸವ ಆಚರಣೆಗೆ ಒಟ್ಟು ೨೦ ಲಕ್ಷ ರೂ. ಗಳ ಅನುದಾನ ಬಿಡುಗಡೆ ಮಾಡಿದೆ.  ಈ ಪೈಕಿ ೧೫ ಲಕ್ಷ ರೂ.ಗಳನ್ನು ಜಿಲ್ಲಾಡಳಿತಕ್ಕೆ ಹಾಗೂ ಉಳಿದ ೫ ಲಕ್ಷ ರೂ.ಗಳನ್ನು ನಾಗರೀಕರ ವೇದಿಕೆಗೆ ಇಟಗಿ ಉತ್ಸವ ನಿಮಿತ್ತ ಬಿಡುಗಡೆ ಮಾಡಿದೆ.  ಇಟಗಿ ಉತ್ಸವ ಆಚರಣೆಗೆ ಎಲ್ಲ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ಈ ಸಂದರ್ಭದಲ್ಲಿ ಗಣ್ಯರಾದ ನವೀನ್ ಗುಳಗಣ್ಣವರ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
itagi utsav
Please follow and like us:
error