ಹಿರಿಯ ಪತ್ರಕರ್ತ ಸುಬ್ಬರಾವ್ ನಿಧನಕ್ಕೆ ಸಂತಾಪ

      ಕೊಪ್ಪಳ : ನಾಡಿನ ಹಿರಿಯ ಪತ್ರಕರ್ತ ವಿ.ಎನ್.ಸುಬ್ಬಾರಾವ್ ನಿಧನ ಪತ್ರಿಕಾರಂಗಕ್ಕೆ ಅಪಾರ ಹಾನಿ ಉಂಟು ಮಾಡಿದೆ ಎಂದು ಕೊಪ್ಪಳ ಮೀಡಿಯಾ ಕ್ಲಬ ಸಂತಾಪ ಮಿಡಿದಿದೆ. ೮೧ ನೇ ವಯಸ್ಸಿನಲ್ಲಿಯೂ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದ ಅವರು, ಪತ್ರಿಕಾರಂಗಕ್ಕೆ ಸಲ್ಲಿಸಿದ ಸೇವೆ ಮಹತ್ವಪೂರ್ಣದ್ದಾಗಿದೆ. ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಅನೇಕ ನೂತನ ಯೋಜನೆಗಳನ್ನು ರೂಪಿಸಿದ ಅವರ ಅಂಕಣ ಬರಹಗಳು ರಾಜಕೀಯದ ಒಳನೋಟಗಳನ್ನು ಸಮರ್ಥವಾಗಿ ಬಿಂಬಿಸುತ್ತಿದ್ದವು.
        ಸಿನಿಮಾ ರಂಗ ಕುರಿತಂತೆ ಸುಬ್ಬಾರಾವ್ ಅವರ ಲೇಖನಗಳು ಹೊಸರೀತಿಯಲ್ಲಿ ಗಮನ ಸೆಳೆಯುತ್ತಿದ್ದವಲ್ಲದೇ ಅದರಿಂದ ಪತ್ರಿಕಾ ಓದುಗರ ಸಂಖ್ಯೆ ಹೆಚ್ಚಿಸುವಲ್ಲಿ ಅವರ ಕಾಣಿಕೆ ಹಿರಿದಾಗಿದೆ. ಕೊನೆಯ ದಿನಗಳಲ್ಲೂ ಅವರು ಸುಚಿತ್ರಾ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದದ್ದು ಅವರ ಕ್ರಿಯಾಶೀಲತೆಗೆ ನಿದರ್ಶನವಾಗಿದೆ. ಇಡೀ ಜೀವನವನ್ನು ಪತ್ರಿಕಾರಂಗದಲ್ಲಿ ಸವೆಸಿದ ಸುಬ್ಬಾರಾವ್ ಅವರ ನಿಧನದಿಂದ ಪತ್ರಿಕಾರಂಗದಿಂದ ಬಡವಾಗಿದೆ ಎಂದು ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ, ಶರಣಪ್ಪ ಬಾಚಲಾಪೂರ, ಬಸವರಾಜ ಕರುಗಲ್, ಪ್ರಕಾಶ ಕಂದಕೂರ, ತಿಪ್ಪನಗೌಡ ಮಾಲೀಪಾಟೀಲ್, ಭೀಮಸೇನ ಚೆಳಗೇರಿ, ಗಂಗಾಧರ ಬಂಡಿಹಾಳ, ಶರಣಬಸವ ಹುಲಿಹೈದರ, ಹುಸೇನಪಾಷಾ, ಗುರುರಾಜ, ಶ್ರೀಪಾದ ಅಯಾಚಿತ್, ಸಂತೋಷ ದೇಶಪಾಂಡೆ, ಮೌನೇಶ ಬಡಿಗೇರ, ವಾಸೀಂ ಭಾವಿಮನಿ, ದೊಡ್ಡೇಶ ಯಲಿಗಾರ, ಮುಕ್ಕಣ್ಣ ಕತ್ತಿ, ಸಿದ್ದು ಬಿರಾದಾರ್, ನಾಭಿರಾಜ ದಸ್ತೇನವರ, ಶರಣಪ್ಪ ಕೊತಬಾಳ, ಶಂಕರ ಕೊಪ್ಪದ, ಜಯಂತ್ ಸಿ.ಎಂ., ಮಾರುತಿ ಕಟ್ಟಿಮನಿ, ಅಮಿತ್, ಗುರುರಾಜ ಡಂಬಳ, ಈರಣ್ಣ ಬಡಿಗೇರ, ಸಿರಾಜ್ ಬಿಸರಳ್ಳಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಕೊಪ್ಪಳ,೯-ಖ್ಯಾತ ಅಂಕಣಕಾರ, ಹಿರಿಯ ಪತ್ರಕರ್ತ ಹಾಗೂ ಸಂಪಾದಕ ವಿ.ಎನ್.ಸುಬ್ಬರಾವ್ ಅವರ ನಿಧನಕ್ಕೆ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.
ಸುಬ್ಬರಾವ್ ಅವರು ಉತ್ತಮ ಬರಹಗಾರಿಕೆಯಿಂದ ಬಹು ಖ್ಯಾತಿ ಹೊಂದಿದ್ದರು, ಕರ್ನಾಟಕ ರಾಜ್ಯ ಮಾಧ್ಯಮ ಆಕಾಡೆಮಿ ಅಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು, ಅಂಥ ಆದರ್ಶವಾದಿ ಹಿರಿಯ ಪತ್ರಕರ್ತರನ್ನು ಕಳೆದುಕೊಂಡು ಪತ್ರಿಕಾ ರಂಗ ಬಡವಾಗಿದೆ.
 ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಸುಣಗಾರ, ಪ್ರಧಾನ ಕಾರ್ಯದರ್ಶಿ ಎಂ.ಸಾದಿಕ್ ಅಲಿ, ರಾಜ್ಯ ಸಮಿತಿ ಸದಸ್ಯ ಹರೀಶ.ಎಚ್.ಎಸ್. ಬಸವರಾಜ ಬಿನ್ನಾಳ,ಮಹೇಶಗೌಡ ಭಾನಾಪೂರು,ಎಂ.ಎನ್.ದೊಡ್ಡಮನಿ.ಜಿ.ಎಸ್.ಗೋನಾಳ, ರಮೇಶ ಪವಾರ, ಹನಮಂತಪ್ಪ ಹಳ್ಳಿಕೇರಿ,ಮಂಜುನಾಥ ಕೋಳೂರು,ಶಿವರಾಜ ನುಗಡೋಣಿ,ಕವಿತಾ ಓಲಿ, ವೈ.ಬಿ ಜೂಡಿ,ಬಸವರಾಜ ಗುಡ್ಲನೂರು ಸೇರಿದಂತೆ ಅನೇಕ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.
Please follow and like us:
error