ಭಾವನಾತ್ಮಕವಾಗಿ ಕನ್ನಡವನ್ನು ಕಟ್ಟಿ ಬೆಳೆಸುವುದು ಅಗತ್ಯ : ಎಸ್.ಬಿ. ರಾಜೂರ

  :

ಕನ್ನಡ ನುಡಿ ಹಾಗೂ ನಡೆಯ ಬಗ್ಗೆ ಅಭಿಮಾನ ಹೊಂದುವದರ ಜೊತೆಗೆ ಭಾವನಾತ್ಮಕವಾಗಿ ಕನ್ನಡವನ್ನು ಕಟ್ಟಿ ಬೆಳೆಸುವುದು ಅಗತ್ಯವಿದೆ ಎಂದು ಕೊಪ್ಪಳದ ಬಾಲಕರ ಸರಕಾರಿ ಪ.ಪೂ,ಕಾಲೇಜಿನ ಪ್ರಾಚಾರ್ಯ ಎಸ್.ಬಿ. ರಾಜೂರ ಹೇಳಿದರು.

  ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಡಲಗೇರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕಸಾಪ ಹಾಗೂ ತಾಲೂಕ ಕಸಾಪ ದವರು ಏರ್ಪಡಿಸಿದ ನೂರರ ಸಂಭ್ರಮ – ನೂರು ಕಾರ್ಯಕ್ರಮ ಅಡಿಯಲ್ಲಿ  ಏರ್ಪಡಿಸಿದ ಯಲಬುರ್ಗಾ ತಾಲೂಕ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಿ.ಎಮ್.ಚೆನ್ನಬಸಪ್ಪನವರ ’ಬದುಕು ಬರಹ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
  ಗಡಿನಾಡು ಜಿಲ್ಲೆಗಳಲ್ಲಿ ಪರ ರಾಜ್ಯಗಳ ಭಾಷೆಯ ದಾಳಿಯನ್ನು ತಪ್ಪಿಸಲು ಕನ್ನಡಿಗರು ಒಂದುಗೂಡಬೇಕು. ಶಿಕ್ಷಣದಲ್ಲಿ ಆಸಕ್ತಿ ಮೂಡುವ ಪಠ್ಯಕ್ರಮವನ್ನು ರೂಪಿಸಬೇಕು ಭಾಷಾ ಮಾಧ್ಯಮ ಆ ರಾಜ್ಯದ ಆಡುವ ಭಾಷೆಯೆ ಜಾರಿಗೊಳ್ಳಬೇಕು.   ಕನ್ನಡಕ್ಕೆ ಅಪಾಯ ಇರುವದನ್ನು ಮನಗೊಂಡು ತಜ್ಞರು ಕನ್ನಡ ಭಾಷೆ ಉಳಿವಿಗಾಗಿ ರಚನಾತ್ಮಕ ಕಾರ್ಯಗಳನ್ನು ರೂಪಿಸಬೇಕು ಆ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಟ್ಟಿ ನಿಲುವನ್ನು ತಾಳಿರುವದು ಸ್ವಾಗತಾರ್ಹ. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಗಟ್ಟಿಗೊಂಡಿದೆ ಎನ್ನುವದು ಅಭಿಮಾನದ ವಿಷಯವಾಗಿದೆ ಎಂದರು. 
  ಸಿ.ಎಮ್.ಚೆನ್ನಬಸಪ್ಪನವರ ಬದುಕು ಬರಹ ಕುರಿತು ಗಜೇಂದ್ರಗಡ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎನ್.ಶಿವರೆಡ್ಡಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅದ್ಯಕ್ಷ ಪ್ರಕಾಶ ಹೊರಪೇಟೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಎಸ್.ಆರ್.ಹಿರೇಮಠ ಭುವನೇಶ್ವರಿ ಭಾವಚಿತ್ರಕ್ಕೆ ಗೌರವ ಸಮರ್ಪಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಹಾಗೂ ಸಿ.ಎಮ್.ಚೆನ್ನಬಸಪ್ಪ ಮಾತನಾಡಿದರು. 
  ಹೆಚ್. ವೀರನಗೌಡ, ಟಿ.ಹಂಚ್ಯಾಳಪ್ಪ, ಹನುಮಂತಪ್ಪ ಉಪ್ಪಾರ, ಶ್ರೀಕಾಂತ ಪೂಜಾರ, ಎನ್.ಸಿ.ಫಣಿ, ಬಿ.ಎಮ್.ಹಳ್ಳಿ, ಹನುಮಂತಪ್ಪ ಜಳಕಿ,ವಿಜಯಕುಮಾರ ಅಂಗಡಿ ಹಾಗೂ ಸ್ಥಳೀಯ ಗ್ರಾ.ಪಂ.ಸದಸ್ಯರು  ಉಪಸ್ಥಿತರಿದ್ದರು ಭೋಜರಾಜ ಸೊಪ್ಪಿಮಠ ನಿರೂಪಿಸಿದರು ತಳಕಲ್ ಹೋಬಳಿ ಅಧ್ಯಕ್ಷ ರಾಜಕುಮಾರ ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು.
Please follow and like us:
error

Related posts

Leave a Comment