ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಪ್ರತಿಭಟನೆ

ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಮಾನತ್ತಿಗೆ ಆಗ್ರಹಿಸಿ. ಕರ್ನಾಟಕ ನವ ನಿರ್ಮಾಣ ಸೇನೆಯು ಪ್ರತಿಭಟನೆ ನಡೆಸಿತು.

  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ಯಾಂಸುಂದರ ದಿನಕ್ಕೊಂದು ಹೇಳಿಕೆ ನೀಡಿ ಸದನವನ್ನು ಹಾಗೂ ಶಿಕ್ಷಣ ಸಚಿವರನ್ನು, ಸಂಘಟಕರನ್ನು ದಾರಿ ತಪ್ಪಿಸುತ್ತಿರುವದನ್ನು ಖಂಡಿಸಿ ಅಶೋಕ ವೃತದಲ್ಲಿ ರಸ್ತೆ ತಡೆ ನಡೆಸಿ ಶಿಕ್ಷಣ ಸಚಿವರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಲಾಯಿತು. ಕನಸೇ ಸಂಘಟನೆಯ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರ  ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು,ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
Please follow and like us:
error