ಮುಂದಿನ ರಾಜಕೀಯಜೀವನ ಶ್ರೀಮಠದಿಂದಲೇ ಆರಂಭಿಸುವೆ: ಕೆ.ಎಂ.ಸಯ್ಯದ್

ಕೊಪ್ಪಳ,ಮಾ.೧೮: ನನಗೂ ಹಾಗೂ ಈ ಗ್ರಾಮಕ್ಕೂ ಯಾವುದೋ ಅವಿನಾಭಾವ ಸಂಬಂಧವಿದ್ದಂತೆ ಕಾಣುತ್ತದೆ. ಇಲ್ಲಿನ ಜನತೆ ಔದಾರ್ಯ ಪ್ರೀತಿಗೆ ರುಣಿಯಾಗಿದ್ದು, ನನ್ನ ಮುಂದಿನ ರಾಜಕೀಯ ಜೀವನವನ್ನು ಶ್ರೀಮಠದಿಂದಲೇ ಆರಂಭಿಸಲು ತಿರ್ಮಾನಿಸಿರುವುದಾಗಿ ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕೆ.ಎಂ. ಸಯ್ಯದ್ ತಿಳಿಸಿದರು. 
ಅವರು ತಾಲೂಕಿನ ಸುಕ್ಷೇತ್ರ ಹಂದ್ರಾಳ ಗ್ರಾಮದ ಜಗದ್ಗುರು ಫಕೀರೇಶ್ವರ ಜಾತ್ರಾ ಮಹೋತ್ಸವ ಭಾವೈಕ್ಯ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದುಕಿಗೆ ಹೇಗೆ ಗುರಿ ಇರಬೇಕು ಹಾಗೆ ಅದಕ್ಕೆ ಗುರು ಬೇಕು. ತಾವೇಲ್ಲಾ ಧನ್ಯವಂತರು ಗುರುವನ್ನು ಪಡೆದಿದ್ದೀರಿ ಎಂದ ಅವರು, ಇರುವಷ್ಟು ದಿನಗಳ ಕಾಲ ಜನರ ಮಧ್ಯೇ ಇರುವ ಬಯಕೆ ಎಂದು ತಮ್ಮ ಅಂತರಾಳದ ನುಡಿಗಳನ್ನಾಡಿದರು. ನಿಸ್ವಾರ್ಥ ಸೇವೆ ಬುದುಕಿಗೆ ಸಾರ್ಥಕತೆ ನೀಡಬಲ್ಲದು. ಸಯ್ಯದ್ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಇಗಾಗಲೇ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ನಡೆಸಿದ್ದು, ಮುಂದೆಯೋ ಸಂಸ್ಥೆ ಇದೇ ರೀತಿ ಮುಂದುವರೆಯಲು ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಅಗತ್ಯ ಎಂದು ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕೆ.ಎಂ. ಸಯ್ಯದ್ ಹೇಳಿದರು.
ಇದೇ ವೇಳೆ ಫಕೀರೇಶ್ವರಸ್ವಾಮಿ ಶಾಖಾಮಠದ ಫಕೀರ ಮರಿದೇವರು ಮಾತನಾಡಿ, ಕೆ.ಎಂ. ಸಯ್ಯದ್ ಒಬ್ಬ ದಾರಾಳ ಗುಣದ ದಾನಿಗಳು ಕಳೆದೆರಡು ತಿಂಗಳ ಹಿಂದೆ ಮಠದ ಆವರಣದಲ್ಲಿ ಉಚಿತವಾಗಿ ಹಾಕಿಸಿಕೊಟ್ಟ ಬೋರವೇಲ್ ಬಾರಿ ಪ್ರಮಾಣದ ನೀರು ಬಿದ್ದು ಇಲ್ಲಿನ ಗಿಡಮರಗಳಿಗೆ ಹಾಗೂ ಮಠಕ್ಕೆ ತುಂಬ ಅನುಕೂಲಕರವಾಗಿದೆ. ಅದೇ ರೀತಿ ಅವರ ಇಂತಹ ಜನಪರ ಕಳಕಳಿಯುಳ್ಳ ಕಾರ್ಯಕ್ರಮಗಳು ಇನ್ನು ಹೆಚ್ಚಿನ ರೀತಿಯಲ್ಲಿ ಸಾಗಲಿ ಅದೇ ರೀತಿ ಅವರ ರಾಜಕೀಯ ಜೀವನವು ಉಜ್ವಲಗೊಳ್ಳಲಿ ಎಂದು ನುಡಿದರು. 
ಕಾರ್ಯಕ್ರಮದಲ್ಲಿ ಕೊಟ್ಟೂರು ದೇವರು, ಯತ್ನಟ್ಟಿ ಶ್ರೀಮಠದ ಶಂಭುಲಿಂಗ ದೇವರು, ನಾಗನಕಲ್ ತಾತನವರು, ಗುಲಬರ್ಗಾ ಗಜಲ್ ಗಾಯಕ ಶರಣಕುಮಾರ ಯಾವೂರು, ಸುರೇಶ ಕುಮಾರ ಎಂ. ಹೂಗಾರ, ಕೃಷ್ಣಮೂರ್ತಿ ಕುಲಕರ್ಣಿ ಸೇರಿದಂತೆ ಊರಿನ ಹಿರಿಯರು,  ಗಣ್ಯರು ಉಪಸ್ಥಿತರಿದ್ದರು.
ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಕಲಾವೇದಿಕೆ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
Please follow and like us:
error