ತಂದೆ ತಾಯಿ ಸೇವೆ ನಿಜವಾದ ಸಮಾಜ ಸೇವೆ : ಹಸನ್ ನಯಿಂ ಸುರಕೋಡ್

ಕುಷ್ಟಗಿ : ಕುಷ್ಟಗಿಯ ರೇಣುಕಾಚಾರ್ಯ ಮಂಗಲಭವನದಲ್ಲಿ ಶ್ರೀ ಚಂದಮ್ಮ ಚಂದಪ್ಪ ನೀರಾವರಿ ಸ್ಮಾರಕ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅನುವಾದಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಸನ್ ನಯಿಂ ಸುರಕೋಡ್ ದುಡ್ಡಿದ್ದವರು ಸಮಾಜ ಸೇವೆಯಲ್ಲಿ ತೊಡಗುವುದು ಬಹಳ ಕಡಿಮೆ. ತಮ್ಮ ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳದೆ ಅವರನ್ನು ವೃದ್ದಾಶ್ರಮಕ್ಕೆ ಅಟ್ಟಿ , ದೇಣಿಗೆ ನೀಡುತ್ತಾ ದೊಡ್ಡ ಸಮಾಜ ಸೇವಕ ಎನಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ . ತಂದೆ ತಾಯಿ ಸೇವೆ ನಿಜವಾದ ಸೇವೆ ಎಂದು ಅಭಿಪ್ರಾಯ ಪಟ್ಟರು.
ನಿವೃತ್ತ ಶಿಕ್ಷಕ , ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ್ ಕೊಪ್ಪಳ ಜಿಲ್ಲೆಯ ಹಿರಿಮೆ ಕುರಿತು ಮಾತನಾಡಿದರು. ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಎಚ್.ಟಿ.ಅರಸ್ ಡೈಲಾಗ್ . ಗಳನ್ನು ಹೇಳಿ ಸಭಿಕರ ಮನ ಗೆದ್ದರು. ವಿಧಾನ ಪರಿಷತ್ ಸದಸ್ಯ ಎಚ್.ಸಿ.ನೀರಾವರಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಶರಣಪ್ಪ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Leave a Reply