ವಿರೇಶ ಮಹಾಂತಯ್ಯನಮಠ ತಮ್ಮ ಯೋಗ್ಯತೆಯನ್ನು ಸಾಬೀತು ಮಾಡಿ ತೋರಿಸಲಿ- ಬಾದವಾಡಗಿ

ವಿರೇಶ ಮಹಾಂತಯ್ಯನಮಠ ಆರೋಪ ಮಾಡುವ ಮೊದಲು ತಮ್ಮ ಯೋಗ್ಯತೆಯನ್ನು ಸಾಬೀತು ಮಾಡಿ ತೋರಿಸಬಹುದಿತ್ತು. ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಬಂಡಾಯ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಎಂಪಿ ಎಲೆಕ್ಷನ್ ನಲ್ಲಿ ಬೇರೆ ಪಕ್ಷಗಳ ಪರವಾಗಿ ದುಡಿದಿದ್ದಾರೆ. ಇಂತವರು ಇಕ್ಬಾಲ್ ಅನ್ಸಾರಿಯವರ ಮೇಲೆ  ವೈಯುಕ್ತಿಕ  ತೇಜೋವದೆಯನ್ನು ಮಾಡುವುದನ್ನು  ಬಿಡಬೇಕು. ಜೆಡಿಎಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ.  ಪಕ್ಷದ  ಸಂಘಟನೆ ಬಗ್ಗೆ ಮಾತನಾಡುವವರು ತಮ್ಮ ಯೋಗ್ಯತೆಯನ್ನು ಸಾಭೀತುಮಾಡಿ ತೋರಿಸಬೇಕು. ಈಗ ನಡೆಯುತ್ತಿರುವ ಜಿಲ್ಲಾ ಪಂಚಾಯತ್ ಎಲೆಕ್ಷನ್ ನಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ ಶಕ್ತಿ ಪ್ರದರ್ಶನ ಮಾಡಲಿ. ಕೇವಲ ಪತ್ರಿಕಾ ಹೇಳಿಕೆಗಳಿಂದ ಏನೂ ಸಾಧಿಸಲಿಕ್ಕಾಗಲ್ಲ. 4 ಜನರನ್ನು ಕೂಡಿಸುವ ಸಾಮರ್ಥ್ಯ ಇಲ್ಲ.  ಮುಂದಿನ ದಿನಗಳಲ್ಲಿ ಪಕ್ಷದಿಂದ  ಶಿಸ್ತು ಕ್ರಮ ಕೈಗೊಳಲ್ಲಾಗುತ್ತದೆ.  ವಿರೇಶ ಮಹಾಂತಯ್ಯನಮಠರಿಗೆ ಜಾತಿ ಭೂತ ಅಂಟಿಕೊಂಡಿದೆ. ಜಾತ್ಯಾತೀತ ಮನೋಭಾವದ ಅಲ್ಪಸಂಖ್ಯಾತ ವ್ಯಕ್ತಿಯೊರ್ವರು ಶಾಸಕರಾಗಿರುವುದು ಮುಂದೆ ಬೆಳೆಯುವುದು ಇವರಿಗೆ ಬೇಕಿಲ್ಲ. ಕುಷ್ಟಗಿ ಮತ್ತು ಇತರೆಡೆ ಪಕ್ಷ ಸಂಘಟನೆಯಲ್ಲಿ ಸ್ಥಳೀಯ ನಾಯಕರೇ ತೊಡಗಿಕೊಂಡಿದ್ದಾರೆ. ಕೊಪ್ಪಳದಲ್ಲಿ ಮಾತ್ರ ಪ್ರತಿಯೊಂದಕ್ಕೂ ಇಕ್ಬಾಲ್ ಅನ್ಸಾರಿ ಬೇಕು ಎಂದರೇ ಹೇಗೆ? ರಾಜ್ಯಮಟ್ಟದಲ್ಲಿ ದೇವೆಗೌಡರು ಮತ್ತು ಇಕ್ಬಾಲ್ ಅನ್ಸಾರಿಯವರ ಮದ್ಯೆ ಕಮ್ಯುನಿಕೇಷನ್ ಗ್ಯಾಪ್ ಇದೆ. ಇಕ್ಬಾಲ್ ಅನ್ಸಾರಿ ಗೆದ್ದಿದ್ದು ವೈಯುಕ್ತಿಕ ವರ್ಚಸ್ಸಿನಿಂದ.  – ಇದು ಕೊಪ್ಪಳದ ಮೀಡಿಯಾ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಗಮೇಶ ಬಾದವಾಡಗಿ ಜೆಡಿಎಸ್  ಜಿಲ್ಲಾ ಮುಖಂಡ ಹೇಳಿದ ಮಾತುಗಳು.  ಈ ಸಂದರ್ಭದಲ್ಲಿ  ಜೆಡಿಎಸ್ ಪಕ್ಷದ ಗಾಳೆಪ್ಪ ಗಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Leave a Reply