You are here
Home > Koppal News > ಓಪನ್ ಸೆಕ್ಸ್, ವಿದೇಶಿಯರ ಕಾಮ ‘ಆಟ’ವೇ ಕಾರ್ಯಕ್ರಮದ ಹೈಲೈಟ್ಸ್: ಮಾದ್ಯಮಕ್ಕೆ ಬಹಿರಂಗವಾಯಿತು ವಿಡಿಯೋ ಕ್ಲಿಪಿಂಗ್ಸ್: ವಿವಾದದಲ್ಲಿ ಸ್ಟ್ರಿಂಗ್ ಝೂಕ್

ಓಪನ್ ಸೆಕ್ಸ್, ವಿದೇಶಿಯರ ಕಾಮ ‘ಆಟ’ವೇ ಕಾರ್ಯಕ್ರಮದ ಹೈಲೈಟ್ಸ್: ಮಾದ್ಯಮಕ್ಕೆ ಬಹಿರಂಗವಾಯಿತು ವಿಡಿಯೋ ಕ್ಲಿಪಿಂಗ್ಸ್: ವಿವಾದದಲ್ಲಿ ಸ್ಟ್ರಿಂಗ್ ಝೂಕ್

ಮಲ್ಪೆಯ ಪ್ರಸಿದ್ದ ಪ್ರವಾಸಿ ತಾಣ ಸೈಂಟ್ ಮೆರೀಸ್ ದ್ವೀಪದಲ್ಲಿ ಕಲಾ ಉತ್ಸವದ ನೆಪದಲ್ಲಿ ಮೂರು ದಿನಗಳ ಕಾಲನಡೆದ ಸ್ಟ್ರಿಂಗ್ ಝೂಕ್ ಕಾರ್ಯಕ್ರಮ ನಿಜವಾಗಿಯೂ ಸಂಸ್ಕೃ ತಿಕ ಕಲಾಉತ್ಸವದ ಕಾರ್ಯಕ್ರಮವಾಗಿತ್ತೇ ಎಂಬ ಜಿಜ್ಞಾಸೆ ಕಾರಣವಾಗಿದೆ.

ಯಾಕೆಂದರೆ ಮಧ್ಯ ರಾತ್ರಿ ಭಾರತೀಯ ಸಂಸ್ಕೃತಿಯ ಬದಲು ಅಲ್ಲಿ ಹಿಪ್ಪಿ ಸಂಸ್ಕೃತಿ ಅನಾವರಣವಾಗಿತ್ತು.ರಾತ್ರೀ ಇಡೀ ಡಿಜೆ ನೃತ್ಯ ನಡೆದರೆ ಡ್ರಗ್ಸ್,ಅಮಲು ಪಾದಾರ್ಥಗಳು ಪೊಲೀಸರ ಸಮ್ಮುಖದಲ್ಲೇ ನಿರಾತಂಕವಾಗಿ ಉಪಯೋಗವಾದವು ಇನ್ನು ಉಡುಪಿಯ ಜನರೇ ನಾಚಿಕೆ ಪಡುವಂತೆ ವೇದಿಕೆಯಲ್ಲಿ ವಿದೇಶಿಗರು ಓಪನ್ ಸೆಕ್ಸ್ ನಲ್ಲಿ ತೊಡಗಿದ್ದು ಈಗ ಬಹಿರಂಗವಾಗಿದೆ.ಇದು ವಿವಾದಕ್ಕೂ ಕಾರಣ ವಾಗಿದೆ.

           ಪ್ರವಾಸೋದ್ಯಮದ ಅಭಿವೃದ್ದಿಯ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಸ್ಟ್ರಿಂಗ್ ಝೂಕ್ ಕಾರ್ಯಕ್ರಮ ಮುಗಿದಿದ್ದರೂ ಅದರ ವಿವಾದ ಮಾತ್ರ ಇನ್ನೂ ಬಿಸಿಯೇ ಇದೆ.ಯಕೆಂದರೆ ಇಲ್ಲಿ ನಡೆದದ್ದು ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲ ಓಪನ್ ಸೆಕ್ಸ್ ಎಂಬುದು ಈಗ ಬಹಿರಂಗವಾಗಿದೆ. ವೇದಿಕೆಯ ಮಧ್ಯ ಭಾಗದಲ್ಲೇ ವಿದೇಶಿಯರು ಕಾಮಕೇಳಿಯಲ್ಲಿ ತೊಡಗಿರುವ ದೃಶ್ಯ ಈಗ ಮಾದ್ಯಮಗಳಿಗೆ ಲಭ್ಯವಾಗಿದ್ದು ಈ ಮೂಲಕ ವಿದೇಶರಿಗೆ ರೇವ್ ಪಾರ್ಟಿ ಮಾಡಲೆಂದೇ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬುದಕ್ಕೆ ಪುಷ್ಟಿ ಸಿಕ್ಕಿದೆ. 
 ಏನೂ ನಡೆದಿಲ್ಲ ಎಂದು ಮುಖ್ಯಮಂತ್ರಿಗಳು  ನಿನ್ನೆ ಉಡುಪಿಗೆ ಆಗಮಿಸಿದ್ದ ಸಂದರ್ಭದಲ್ಲಿ ಹೇಳಿದ್ದಾರೆ.ಪ್ರವಾಸೋದ್ಯಮದ ಅಭಿವೃದ್ದಿಗೆ ಇಂತಹದು ಬೇಕು ಎನ್ನುವುದಾರರೆ ಇಂತಹ ಓಪನ್ ಸೆಕ್ಸ್ ಕೂಡಾನ ಎಂಬ ಪ್ರಶ್ನೆ ಉದ್ಬವಿಸುತ್ತಿದೆ.

ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾ ತಂಡಗಳು 8ಮಾತ್ರ. ಉಳಿದ ಎಲ್ಲಾ ಕಾರ್ಯಕ್ರಮಗಳು ವಿದೇಶಿಯರದ್ದು ಅಂದರೆ ಇಲ್ಲಿ ವೇದಿಕೆಯಲ್ಲಿ ಕುಡಿದು, ಅಮಲು ಪದಾರ್ಥ ಸೇವಿಸಿ ಹಿಪ್ಪಿ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದು ಮಾತ್ರ.

ಕಾರ್ಯಕ್ರಮದ ಆಯೋಜಕರು ಜಿಲ್ಲಾಡಳಿತಕ್ಕೆ ಪಾವತಿಸುವ ಮೊತ್ತ 5ಲಕ್ಷ ಮಾತ್ರ.ಈಗಾಗಲೇ ಇಲ್ಲಿ 2ಸಾವಿರಕ್ಕೂ ಹೆಚ್ಚು ವಿದೇಶಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.ಒಬ್ಬರಿಗೆ ಬರೋಬ್ಬರಿ 3ರಿಂದ 5ಸಾವಿರ ಟಿಕೆಟ್ ಕಡ್ಡಾಯ.ಅoದರೆ ಇದು ಕೋಟ್ಯಾಂತರ ರೂ ವ್ಯವಹಾರ ಎಂಬುದು ಬಹಿರಂಗವಾಗಿದೆ.ಈ ಮೂಲಕ ವಿದೇಶರಿಗೆ ಮೋಜು ಮಸ್ತಿ ನಡೆಸಲು ರೇವ್ ಪಾರ್ಟಿ ಮಾಡಿದ್ದು ಬಿಟ್ಟರೆ ಬೇರೆ ಏನೂ ಅಲ್ಲ ಎಂಬುದು ಸ್ಪಷ್ಟವಾಗಿದೆ.ವೇದಿಕೆಯಲ್ಲೇ ಓಪನ್ ಸೆಕ್ಸ್ ನಂತಹ ಅಸಭ್ಯ ವರ್ತನೆಗೆ ಜಿಲ್ಲೆಯಾದ್ಯಂತ ಟೀಕೆಗೂ ಕಾರಣವಾಗಿದೆ.

ಕೃಪೆ: gulfkannadiga

Leave a Reply

Top