ಕಿನ್ನಾಳ ಗ್ರಾಮದಲ್ಲಿ ಅನ್ಸಾರಿಯವರಿಗೆ ಅಭಿನಂದನೆ.

ಕೊಪ್ಪಳ : ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಅತ್ಯಂತ ಬಹುಮತಗಳಿಂದ ಆಯ್ಕೆಯಾದ ನೂತನ ಶಾಸಕರಾದ ಇಕ್ಬಾಲ ಅನ್ಸಾರಿಯವರಿಗೆ ದಿನಾಂಕ ೨೬-೦೫-೨೦೧೩ ರಂದು ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಶಾಸಕರಾದ ಇಕ್ಬಾಲ ಅನ್ಸಾರಿಯವರು ಕಿನ್ನಾಳ ಗ್ರಾಮದಲ್ಲಿ ಅತಿ ಹೆಚ್ಚು ಮತಗಳನ್ನು ಕೊಟ್ಟು ಆಯ್ಕೆ ಮಾಡಿದ ಗ್ರಾಮದ ಜನತೆಗೆ ಕ್ರತಜ್ಞತೆ ಸಲ್ಲಿಸಿದರು. ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಕಾರ್ಯಗಳನ್ನು ತಕ್ಷಣವೇ ಕೈಗೊಳ್ಳುತ್ತೆನೆಂದು ಹಾಗೂ ಸರ್ಕಾರದ ಎಲ್ಲಾ ಅನುದಾನಗಳನ್ನು ಸಮಸ್ತ ಕ್ಷೇತ್ರದ ಜನತೆಗೆ ಪ್ರಾಮಾಣೀಕವಾಗಿ ಪ್ರತಿಯೊಂದು ಗ್ರಾಮದಲ್ಲಿ ಗ್ರಾ. ಪಂ ಮೂಲಕ ಸಂಬಂದಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿ ಜನ ಸಂಪರ್ಕ ಸಭೆಗಳನ್ನು ಮಾಡುವುದರ ಮೂಲಕ ಸಮರ್ಪಿಸುವೆ ಎಂದು ಹೇಳಿದರು. 
ಗ್ರಾಮದ ಹಿರಿಯರಾದ ವೀರಯ್ಯ ಹಿರೆಮಠ, ಶಂಕ್ರಪ್ಪ ಮೆಣೆದಾಳ, ಕಾಳಪ್ಪ ಮಾಸ್ತರ ಪತ್ತಾರ, ಮಾಬುಸಾಬ ಹಿರಾಳ, ಶೇಖರಪ್ಪ ಉದ್ದಾರ, ಹಂಪಮ್ಮ ಎಲಿಗಾರ, ವೀರೇಶ ತಾವರಗೇರಿ, ಬಸವರಾಜ ಚಿಲವಾಡಗಿ, ಅನೀಲ ಬೋರಟ್ಟಿ, ಭಾಷಾ ಹಿರೇಮನಿ, ವೀರಭದ್ರಪ್ಪ ಬೂತ, ಪರಸಪ್ಪ ವಾಲ್ಮಿಕಿ, ಈಶಪ್ಪ ರಡ್ಡಿ, ಕೃಷ್ಣಾ ಕಲಾಲ್, ಮಂಜುನಾಥ ಕುದ

ರಿಮೋತಿ, ಪಂಪಣ್ಣ ಟಂಕಸಾಲಿ, ಇನ್ನು ಅನೇಕರು ಉಪಸ್ಥಿತರಿದ್ದರು. ಹಾಗೂ ಅನ್ಸಾರಿಯವರ ಸಾವಿರಾರು ಅಭಿಮಾನಿಗಳು ಪಾಲ್ಗೊಂಡು ಬುಡಶೆಟ್ಟನಾ, ಮುದ್ಲಾಪೂರ, ಜನತೆಯು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply