ಮಸೀಹಾ ಪಾಲಿ ನೂತನ ಆಸ್ಪತ್ರೆಗೆ ಡಾ|| ರಾಂಪೂರ ಚಾಲನೆ

ಕೊಪ್ಪಳ,ಜೂ.೧೮: ಕೊಪ್ಪಳದ ಹಿರಿಯ ಸಮಾಜ ಸೇವಕರಾದ ಖಲೀಲ್ ಅಹ್ಮದ್ ಡಾಕ್ಟರ್‌ರವರ ಮಗಳಾದ ಡಾ|| ಶಬಾನಾ ನೇತೃತ್ವದಲ್ಲಿ ನಗರದ ವಾಲ್ಮೀಕಿ ಭವನ ರಸ್ತೆ ಎಲ್‌ಐಸಿ ಕಛೇರಿ ಹಿಂದುಗಡೆ ನೂತನವಾಗಿ ಆರಂಭಿಸಲಾದ ಮಸೀಹಾ ಪಾಲಿ ಕ್ಲೀನಿಕ್ ನೂತನ ಆಸ್ಪತ್ರೆಯ ಉದ್ಘಾಟನೆಯನ್ನು ಹಿರಿಯ ವೈದ್ಯ ಡಾ|| ಎಂ.ಬಿ.ರಾಂಪೂರುರವರು ರಿಬ್ಬನ್ ಕಟ್ ಮಾಡುವುದರ ಮೂಲಕ ಆಸ್ಪತ್ರೆಯ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳ ಜೊತೆಗೆ ಉತ್ತಮ ಬಾಂಧವ್ಯವಹಿಸಿ ಅವರ ರೋಗ ಗುಣಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ವೈದ್ಯರ ಜವಾಬ್ದಾರಿ ಅದನ್ನು ಸರಿಯಾಗಿ ನಿಬಾಯಿಸುವುದರ ಜೊತೆಗೆ ಈ ಭಾಗದ ಜನಸಾಮಾನ್ಯರ ಪ್ರೀತಿ, ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಬೇಕು ಎಂದು ಡಾ|| ಎಂ.ಬಿ.ರಾಂಪೂರು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಹಾಜಿ ಎ.ಎ.ಚೌಥಾಯಿ ವಕೀಲರು, ನಗರಸಭೆ ಸದಸ್ಯೆ ಇಂದಿರಾ ಭಾವಿಕಟ್ಟಿ, ಪಂಚಮ ಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸವಲಿಂಗಪ್ಪ ಲಾಡಿ, ಯುವ ನಾಯಕರಾದ ವಾಹೀದ್ ಸೋಂಪೂರು, ಸಾಧಿಕ್ ಶೇಖ, ಚಾಂದಸಾಬ, ಜಲೀಲ್ ಸಾಬ ದಾಗ್ದಾರ್, ಅಜೀಜ್ ಮನಿಯಾರ್, ಮಕ್ಬುಲ್ ಮನಿಯಾರ್, ಮಹೆಬೂಬ್ ಅಲಿ ಮುಲ್ಲಾ, ಅಶ್ವೀನಿ ಜಾಂಗಡಾ, ಗೌತಮ್ ಜಾಂಗಡಾ, ಶಾಬುದ್ದೀನ್ ಸಾಬ ನೂರಬಾಷಾ, ಮುನೀರ್ ಸಿದ್ದಿಕಿ, ರಹಿಮತ್ ಹುಸೇನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 
Please follow and like us:
error