ರಾಷ್ಟ್ರಾದ್ಯಾಂತ ಮುಷ್ಕರ ಪ್ರತಿಭಟನೆ

ಹೊಸಪೇಟೆ: ಕೇಂದ್ರ ಸರ್ಕಾರವು ಸರ್ಕಾರಿ ಸಾಮ್ಯದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಪೋರೇಟ್ ಕಂಪನಿಗೆ ಒಳಿತು ಮಾಡಲು ಹೊರಟಿದೆ. ಅದರ ಭಾಗವಾಗಿಯೇ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯಾಗಿದೆ ಎಂದು ಸಿಐಟಿಯು ಮುಖಂಡ ಎ. ಕರುಣಾನಿಧಿ ಹೇಳಿದರು.
ನಗರದಲ್ಲಿ ಗುರುವಾರ  ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ಇದೇ ದಿ.೩೦ರಂದು ಸಾರಿಗೆ ನೌಕರರು ರಾಷ್ಟ್ರಾದ್ಯಾಂತ ಮುಷ್ಕರದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ಚುನಾವಣೆಯಲ್ಲಿ ಕಾರ್ಪೋರೇಟ್ ಕಂಪನಿಗಳು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಈ ಬಳವಳಿ ನೀಡುತ್ತಿದೆ ಎಂದು ಆರೋಪಿಸಿದರು. ಸಿಐಟಿಯು ಮುಖಂಡ ಭಾಸ್ಕರರೆಡ್ಡಿ ಮಾತನಾಡಿ, ಮೋದಿಯ ಸರ್ಕಾರ ಸರ್ವಾಧಿಕಾರದತ್ತ ದಾಪುಗಾಲು ಹಾಕುತ್ತಿದೆ. ರೈತರ ಭೂಸ್ವಾಧೀನ ಮಸೂದೆಯ ನಂತರ ರಸ್ತೆಸಾರಿಗೆ ಮಸೂದೆಗೆ ಕೈ ಹಾಕಿದೆ. ಇದು ಹೀಗೆ ನಡೆದರೆ ಮತ್ತೊಂದು ಭಾರಿ ಭಾರತ ಪರತಂತ್ರದ ಪಾಲಾಗುತ್ತಿದೆ. ಈಗಾಗಲೇ ಕಾರ್ಮಿಕರು, ರೈತರು ಸಂಕಷ್ಟದಲ್ಲಿದ್ದು ಇದರಿಂದ ಮತ್ತಷ್ಟು ದುಸ್ಥಿತಿಗೆ ತಳ್ಳಪಡುತ್ತಾರೆ. ಕೂಡಲೇ ಸರ್ಕಾರ ಈ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಎಐಟಿಯಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಪ್ ಅಂಡ್ ವರ್ಕಸ್ ಫೆಡರೇಷನ್ ತಾಲೂಕು ಅಧ್ಯಕ್ಷ ಜಿ. ಶ್ರೀನಿವಾಸಲು ಮಾತನಾಡಿ, ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ಕಾನೂನು ಆಗಿ ಜಾರಿಗೆ ಬಂದರೆ ಅದು ವಿನಾಶಕಾರಿ ಕಾನೂನು ಆಗಲಿದೆ ಎಂದರು. ಅಪಘಾತದಲ್ಲಿ ಶಿಶು ಮರಣ ಹೊಂದಿದರೆ ಮೂರುಲಕ್ಷ ರೂಪಾಯಿ ದಂಡ ಜೊತೆಗೆ ಏಳುವರ್ಷ ಜೈಲು ಶಿಕ್ಷೆ ಎಂದಿದೆ. ಯಾರು ಬೇಕಂತಲೆ ಅಪಘಾತ ನಡೆಸುವುದಿಲ್ಲ. ಅಪಘಾತ ಅಕಸ್ಮಿಕವಾಗಿದೆ. ಇಂತಹ ಕಾನೂನು ಅವೈಜ್ಞಾನಿಕವಾಗಿದೆ. ಇಂತಹ ಆಂಶಗಳೇ ಈ ಮಸೂದೆಯಲ್ಲಿ ತುಂಬಿವೆ ಎಂದರು. ಸಾರಿಗೆ ಸಂಸ್ಥೆಯ ಚಾಲಕ ಮಾತ್ರವಲ್ಲ, ಸಾಮಾನ್ಯ ಚಾಲಕನಿಗೂ ಇದು ಅನ್ವಯವಾಗುತ್ತದೆ ಈ ಕಾರಣದಿಂದ ಎಲ್ಲರೂ ಈ ಮಸೂದೆಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಗುತ್ತದೆ. ಇದಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು. ಉಪಾಧ್ಯಕ್ಷ ಬಿ.ವಿರೂಪಾಕ್ಷಪ್ಪ, ಖಜಾಂಚಿ ರವಿಕುಲಕರ್ಣಿ, ಕಾರ್ಯಕಾರಿ ಸಮಿತಿ ಸದಸ್ಯ ಜೆ.ರಾಮಯ್ಯ ಹಾಗೂ ಮತ್ತಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು. 
ಹೊಸಪೇಟೆಯಲ್ಲಿ ಗುರುವಾರ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಭಾಗವಾಗಿ ಬಸ್ ನಿಲ್ದಾಣ ಬಿಕೋ ಅನ್ನುತ್ತಿರುವುದು. 
ಹೊಸಪೇಟೆ: ಕೇಂದ್ರಸರ್ಕಾರವು ತರಲು ಉದ್ದೇಶಿಸಿರುವ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ಗುರುವಾರ  ಸಾರಿಗೆ ನೌಕರರು ರಾಷ್ಟ್ರಾದ್ಯಾಂತ ಮುಷ್ಕರದಂಗವಾಗಿ ನಗರದಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. 
ಆಟೋರೀಕ್ಷಾ ಯೂನಿಯನ್ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರಿಂದ ಆಟೋ ರೀಕ್ಷಾ ಸಂಚಾರ ಕೂಡಾ ವಿರಳವಾಗಿತ್ತು. ಇದರಿಂದ ಸಂಚಾರ ಸಂಪೂರ್ಣ ಸ್ಥಭ್ಧವಾಗಿತ್ತು. ಪ್ರಯಾಣಿಕರು ಕಾಲ್ನಡಿಗೆಯಲ್ಲಿ ಸಂಚರಿಸುತ್ತಿರುವುದು ಸಾಮಾನ್ಯವಾಗಿತ್ತು. ಎಐಟಿಯಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಪ್ ಅಂಡ್ ವರ್ಕಸ್ ಫೆಡರೇಷನ್ ಕರೆಗೆ ಸ್ಪಂದಿಸಿದ ಚಾಲಕರು ಬಸ್ ಏರಲೇ ಇಲ್ಲ. ನಿರ್ವಾಹಕರು ಅವರಿಗೆ ಸಾಥ್ ನೀಡಿದರು. ಬಸ್ ಮುಷ್ಕರದಿಂದಾಗಿ ನಗರದಲ್ಲಿ ವ್ಯಾಪಾರ ವಹಿವಾಟು ಕೂಡಾ ನಡೆಯಲಿಲ್ಲ. ಒಂದು ರೀತಿಯ ಬಂದ್ ವಾತಾವರಣ ಉಂಟಾಗಿತ್ತು. ಏಐಟಿಯುಸಿ ಹಾಗೂ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಮೆರವಣಿಗೆ ನಡೆಸಿ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ಹಿಂಪೆಡೆಯಲು ಆಗ್ರಹಿಸಿದವು. ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಪ್ರದರ್ಶನ ನಡೆಸಿ, ಬಹಿರಂಗಸಭೆ ನಡೆಸಿದವು. 

ಹೊಸಪೇಟೆಯಲ್ಲಿ ಗುರುವಾರ ಏಐಟಿಯುಸಿ ಕಾರ್ಮಿಕ ಸಂಘಟನೆ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ಮೆರವಣಿಗೆ ನಡೆಸಿತು.
ಹೊಸಪೇಟೆ: ನಗರದ ಚಿತ್ತವಾಡ್ಗಿಯ ದೋಬಿಗಾಟ್ ಕಾಂಪೌಂಡ್ ಗೋಡೆ ನಿರ್ಮಾಣದ ಕಾಮಗಾರಿಗೆ ನಗರಸಭೆ ಸದಸ್ಯ ಪಿ.ಮಲ್ಲಿಕಾರ್ಜುನ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು. 
ಶಾಸಕ ಆನಂದ್ ಸಿಂಗ್ ಅವರ ಅನುದಾನದಲ್ಲಿ ಬಿಡುಗಡೆಯಾಗಿರುವ ೫ ಲಕ್ಷ ರೂ.ವೆಚ್ಚದ ದೋಬಿಗಾಟ್ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತ ಕೆ.ಲಕ್ಷ್ಮಣ ಮಾತನಾಡಿ ದೋಬಿಗಾಟ್ ನಿರ್ಮಾಣ ಮಾಡಲು ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪ ಅವರು  ತಮ್ಮ ಅನುದಾನದಲ್ಲಿ ಈ ಹಿಂದೆ ಒಂದು ಭಾಗದ ಕಾಂಪೌಂಡ್ ಗೋಡೆಯನ್ನು ನಿರ್ಮಿಸಿ ಕೊಟ್ಟು ಈ ಭಾಗದ ಮಡಿವಾಳ ಸಮಾಜದವರಿಗೆ ಅನುವು ಮಾಡಿಕೊಟ್ಟಿದ್ದರು. ನಂತರ ಶಾಸಕ ಆನಂದ್ ಸಿಂಗ್ ಅವರು ಶಾಸಕರಾದ ಮೇಲೆ ದೋಬಿಗಾಟ್ ಒಳಾಂಗಣವನ್ನು ಸ್ವಚ್ಚಗೊಳಿಸಿ ಸಮತಟ್ಟ ಮಾಡಿಕೊಟ್ಟಿದ್ದರು ಎಂದ ಅವರು, ಪುನಃ ೫ ಲಕ್ಷ   ಅನುದಾನವನ್ನು ಬಿಡುಗಡೆ ಮಾಡಿ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಸಂದೀಪ್ ಸಿಂಗ್, ನಗರಸಭೆ ಮಾಜಿ ಸದಸ್ಯ ಅರಳಿ ಕೊಟ್ರಪ್ಪ, ನಾಮನಿರ್ದೇಶನ ಮಾಜಿ ಸದಸ್ಯ ಡಮ್ಮಿ ಹನುಮಂತಪ್ಪ, ಮಡಿವಾಳ ಸಮಾಜದ ಅಧ್ಯಕ್ಷ ಎಂ.ಕೆ.ಹನುಮಂತಪ್ಪ, ಎ.ವೆಂಕೋಬಿ, ಪರಶಪ್ಪ, ಲಕ್ಷ್ಮಮ್ಮ, ಡೊಮ್ಮಿ ದೊಡ್ಡಜಂಬಣ್ಣ, ಗಿಣಿಗೇರಿ ಅಶೋಕ, ಬಿಜೆಪಿಯ ಜಯಮ್ಮ ಕುಲಕರ್ಣಿ ಸೇರಿದಂತೆ ಇತರರು ಹಾಜರಿದ್ದರು. 
Please follow and like us:
error