೩೩ ನೆ ಬೆಳಕಿನೆಡೆಗೆ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದಲ್ಲಿ ಲಿಂ.ಶ್ರೀ.ಮ.ನಿ.ಪ್ರ.ಜ ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಪ್ರತಿ ಅಮವಾಸ್ಯೆಯ ಅಂಗವಾಗಿ ನೆಡೆಯುವ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ದಿನಾಂಕ ೧೯-೦೭-೨೦೧೨  ಗುರುವಾರ ಸಾಯಂಕಾಲ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಪ್ರೊ. ಮಲ್ಲಿಕಾರ್ಜುನ ಎನ್.ವಾಲಿ ಜಾನಪದ ವಿದ್ವಾಂಸರು ವಿಜಾಪುರು ಆಗಮಿಸಲಿದ್ದಾರೆ.ಆಧ್ಯಕ್ಷತೆಯನ್ನು ಉಪಪೋಲಿಸ್ ವರಿಷ್ಟಾಧಿಕಾರಿಗಳು ಕೊಪ್ಪಳ  ವಿಜಯ ಡಂಬಳ  ವಹಿಸಲಿದ್ದಾರೆ.ವಿಶೇಷವಾಗಿ ಲಿಂ.ಶ್ರೀಕಲ್ಲಪ್ಪ ಗಾಜರೆ ಸಾ.ವಿಜಾಪುರ ಇವರ ಸ್ಮರಣಾರ್ಥವಾಗಿ ಪ್ರತಿಭಾವಂತ ಬಡಮಕ್ಕಳ ವಿದ್ಯಾರ್ಥಿವೇತನ ವಿತರಣಾ ಸಮಾರಂಭ  ಜರುಗಲಿದೆ. ದಾನಿಗಳಾದ ಶ್ರೀಮುರುಗೇಶ ಕಲ್ಲಪ್ಪಗಾಜರೆ ದುಬೈ   ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಶ್ರೀಮತಿಶಕುಂತಲಾ ವಿರೇಶಬಡೀಗೇರ ಕೊಪ್ಪಳ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ.  

Leave a Reply