ಸಿಇಟಿ ಪರೀಕ್ಷೆ ನಿಮಿತ್ಯ ಜೂ.೦೩ ರಂದು ಒಂದು ದಿನದ ಕಾರ್ಯಾಗಾರ

  ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಸಿ.ಇ.ಟಿ ಪರೀಕ್ಷೆ ಕುರಿತು ಕೊಪ್ಪಳ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಜೂ.೦೩ ರಂದು ಬೆಳಿಗ್ಗೆ ೧೦.೩೦ ಕ್ಕೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. 
ಕೊಪ್ಪಳದ ಬಿ.ಎನ್.ಆರ್.ಕೆ. ಡಿ.ಇಡಿ ಕಾಲೇಜ್, ಗಂಗಾವತಿಯ ಜಿ.ಎಸ್.ಎಸ್. ಡಿ.ಇಡಿ ಕಾಲೇಜ್, ಯಲಬುರ್ಗಾದ ಸಿದ್ಧರಾಮೇಶ್ವರ ಡಿ.ಇಡಿ ಕಾಲೇಜ್, ಕುಷ್ಟಗಿಯ ಹನುಮಗೌಡ ಡಿ.ಇಡಿ ಕಾಲೇಜ್ ಈ ಸ್ಥಳಗಳಲ್ಲಿ ಕಾರ್ಯಾಗಾರ ಜರುಗಲಿದ್ದು, ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ಡಯಟ್ ಮುನಿರಾಬಾದ್‌ನ ಪ್ರಾಚಾರ್ಯ ಎ.ಶ್ಯಾಮಸುಂದರ   ತಿಳಿಸಿದ್ದಾರೆ.

Leave a Reply