ಕಿನ್ನಾಳ : ಅಹೋರಾತ್ರಿ ಸಂಗೀತೊತ್ಸವ ಸಮಾರಂಭ

ಕೊಪ್ಪಳ, ಮಾ. ೦೭ : ಶ್ರೀ ಶಾರದಾ ಸಂಗೀತ, ಕಲೆ ಮತ್ತು ಶಿಕ್ಷಣ ಸಂಸ್ಥೆಯ ೬ನೇ ವರ್ಷದ ಸಂಗೀತೋತ್ಸವ ಸಮಾರಂಭವು ಜರುಗಲಿದ್ದು, ನಾಡಿನ ಹೆಸರಾಂತ ಕಲಾವಿದರು ಅಹೋರಾತ್ರಿ ಸಂಗೀತದ ರಸದೌತಣ ನೀಡಲಿದ್ದಾರೆ.
ಕಿನ್ನಾಳದ ಶ್ರಿ ಕಾಶಿವಿಶ್ವನಾಥ ದೇವಸ್ಥಾನದ ಆವರಣದಲ್ಲಿ ಮಾ, ೯ ರಂದು ರಾತ್ರಿ ನಡೆಯಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಷಡಕ್ಷರಯ್ಯ ಸ್ವಾಮಿಗಳು ವಹಿಸುವರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ಅಧ್ಯಕ್ಷತೆಯಲ್ಲಿ ಕೆ.ಪಿ.ಟಿ.ಸಿ.ಎಲ್. ನಿರ್ದೇಶಕರಾದ ಡಾ. ಮುದ್ದುಮೋಹನ ಅವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸುವರು. ಗೌರವಾನ್ವಿತ ಅತಿಥಿಗಳಾಗಿ ಸಂಸದ ಶಿವರಾಮಗೌಡ, ಬಿಎಸ್‌ಆರ್ ಕಾಂಗ್ರೆಸ್ ಮುಖಂಡರಾದ ಲಲಿತಾರಾಣಿ ಶ್ರೀರಂಗದೇವರಾಯಲು, ವಿಶೇಷ ಆಹ್ವಾನಿತರಾಗಿ ವನಿತಾ ಗಡಾದ, ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ಅಮರೇಶ ಉಪಲಾಪೂರ ಹಾಗೂ ಕಿನ್ನಾಳ ಗ್ರಾ.ಪಂ. ಅಧ್ಯಕ್ಷ ವೀರಭದ್ರಪ್ಪ ಗಂಜಿ ಪಾಲ್ಗೊಳ್ಳುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಸೌಭಾಗ್ಯ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಮರಾವ್, ಕಸಾಪ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಸಾಹಿತಿಗಳಾದ ಡಾ. ವಿ.ಬಿ. ರಡ್ಡೇರ, ಡಾ. ಮಹಾಂತೇಶ ಮಲ್ಲನಗೌಡ್ರ, ತಾ.ಪಂ. ಮಾಜಿ ಸದಸ್ಯ ಬಿ. ವಿರುಪಕ್ಷಿ ಮುಂತಾದವರು ಅತಿಥಿಗಳಾಗಿ ಆಗಮಿಸುವರು.
ನ್ಯಾಯವಾದಿ, ಬಿಜೆಪಿ ಜಿಲ್ಲಾಧ್ಯಕ್ಷ ಗಿರೇಗೌಡ, ಪದ್ಮಶಾಲಿ ಸಮಾಜದ ಅಧ್ಯಕ್ಷ ಕಾಳಪ್ಪ ಕೊಂಕತಿ, ನಾಗಲಿಂಗಪ್ಪ ಪತ್ತಾರ, ಪತ್ರಕರ್ತರಾದ ಬಸವರಾಜ ಬಿನ್ನಾಳ, ವೈ. ಬಿ. ಜೂಡಿ, ಅಪಘಾತ ರಹಿತ ಚಾಲಕ ಶೇಖರಪ್ಪ ಶಿವಸಿಂಪಿ, ದೇವೇಂದ್ರಪ್ಪ ಬಂಡಿಹಾಳ ಹಾಗೂ ರಂಗ ಕಲಾವಿದ ನಾರಾಯಣಚಾರ್ ಜೋಶಿ ಅವರುಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು.
ಖ್ಯಾತ ಹಿಂದುಸ್ಥಾನಿ ಗಾಯಕ ಡಾ. ಮುದ್ದುಮೋಹನ್, ಗಿನ್ನಿಸ್ ದಾಖಲೆ ಖ್ಯಾತಿಯ ಶಾಸ್ತ್ರೀಯ ಸಂಗೀತ ಗಾಯಕ ಪ್ರಸನ್ನ ಮಾಧವ ಗುಡಿ, ಸುಗಮಸಂಗೀತ ಗಾಯಕ ಸದಾಶಿವ ಪಾಟೀಲ್, ಸಿತಾರ್ ವಾದಕ ಶ್ರೀಕಾಂತ ಪಾಠಕ್, ವಿದೂಷಕಿ ಕೆ.ಜಿ. ಕವಿತಾ, ಪ್ರೇಮಾ ದೇಸಾಯಿ, ಡಾ|| ಶಿವಯ್ಯ ಗಂಧದಮಠ ಹಾಗೂ ಕು. ಸುಧಾ ಅಡವಿ ಇವರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಶಾರದಾ ಸಂಗೀತ ಶಾಲೆಯ ಕಾರ್ಯದರ್ಶಿ ಲಚ್ಚಪ್ಪ ಹಳೆಪೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error