ಪ್ರವಾಸೋದ್ಯಮದ ಬೆಳವಣಿಗೆಗೆ ಸಂಗೀತ, ಕಲೆ, ಸಂಸ್ಕೃತಿ ಪೂರಕ ಆರ್.ಆರ್.ಜನ್ನು.

ಕೊಪ್ಪಳ, ಜು.೧೭ ಪ್ರವಾಸೋದ್ಯಮದ ಬೆಳವಣಿಗೆಗೆ ಅಲ್ಲಿನ ಸಂಗೀತ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಸವಲತ್ತುಗಳನ್ನು ಪಡೆದುಕೊಂಡು ಜಿಲ್ಲೆಯ ಪ್ರವಾಸೋದ್ಯಮ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಲಹೆ ನೀಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ೨೦೧೩-೧೪ ನೇ ಸಾಲಿನ ಪ.ಜಾತಿ ಮತ್ತು ಪ.ಪಂಗಡದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸಂಗೀತ ಉಪಕರಣ ವಿತರಣೆ ಮಾಡುವ ಯೋಜನೆಯಡಿ, ಸೌಲಭ್ಯ ಮಂಜೂರಾದವರಿಗೆ ಸಂಗೀತ ಉಪಕರಣ ವಿತರಣೆ ಮಾಡಿ ಮಾತನಾಡಿದರು.
     ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯ ಸಂಗೀತಾಸಕ್ತ ನಿರುದ್ಯೋಗಿ ಯುವಜನತೆಗೆ ಸಂಗೀತ ಉಪಕರಣ ವಿತರಣೆ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆ.  ಪ್ರವಾಸೋದ್ಯಮದಲ್ಲಿ ಸಂಗೀತ, ಕಲೆ, ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಇಂತಹ ಯೋಜನೆಗಳು ಮಹತ್ವ ಪೂರ್ಣವಾಗಿದ್ದು, ಇಂತಹ ಯೋಜನೆಗಳನ್ನು ಜಿಲ್ಲೆಯ ಅರ್ಹ ಹಾಗೂ ಪ್ರತಿಭಾವಂತ ಯುವಕರು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು, ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಲಹೆ ನೀಡಿದರು.
          ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಲಿಂಗ ಎಸ್.ತಾಳಕೇರಿ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಸಿದ್ದೇಶ ಎಸ್. ಕಂಬಾಳಿಮಠ ಉಪಸ್ಥಿತರಿದ್ದರು.  ಯೋಜನೆಯಡಿ ಮಂಜೂರಾದ ಸಂಗೀತ ಉಪಕರಣಗಳನ್ನು ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ವಿತರಿಸಲಾಯಿತು. 

Related posts

Leave a Comment