ಶಾಲಾ ಮಕ್ಕಳಿಂದ ವಿಮೋಚನೆಯ ಕರಿನೆರಳು ಎಂಬ ಕಿರು ನಾಟಕ ಪ್ರದರ್ಶನವಾಯಿತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶ್ರೀಯುತ ಎಚ್.ಎಸ್.ಪಾಟೀಲ್ ಹಿರಿಯ ಸಾಹಿತಿಗಳು, ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿಗಳಾದ ರಾಘವೇಂದ್ರ ಪಾನಘಂಟಿ ವಹಿಸಿದ್ದರು. ಅತಿಥಿಗಳಾಗಿ – ವಿಠ್ಠಪ್ಪ ಗೋರಂಟ್ಲಿ, ಅಲ್ಲಮ ಪ್ರಭು ಬೆಟ್ಟದೂರು, ಎ.ಎಂ.ಮದರಿ, ಶ್ರೀನಿವಾಸ ಗುಪ್ತಾ, ಶ್ರೀನಿವಾಸ ಹ್ಯಾಟಿ ಸದಸ್ಯರು ತಾ.ಪಂ.ಕೊಪ್ಪಳ, ರಾಜಶೇಖರ ಪಾಟೀಲ್, ಸೋಮನಗೌಡ ಮಾ.ಪಾಟೀಲ್, ರಾಚಪ್ಪ ಕೆಸರಬಾವಿ, ಯಲ್ಲಪ್ಪ ಹಾದಿಮನಿ, ಮಾಲಾ ಬಡಿಗೇರ, ಡಿ.ಎಂ.ಬಡಿಗೇರ, ವೀರೇಶ ಕರಮುಡಿ, ಹೊನ್ನೂರುಸಾಬ ಭೈರಾಪುರ ಅಧ್ಯಕ್ಷರು ಗ್ರಾಂ.ಪಂ.ಭಾಗ್ಯನಗರ, ಹಾಗೂ ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ.ಕೆ. ರವರು ಸಹಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ೫ನೇ ತರಗತಿ ಮಕ್ಕಳು ಪ್ರಾರ್ಥನೆ ಗೀತೆ ಹಾಡುವ ಮೂಲಕ ಮಕ್ಕಳ ಕಿರು ನಾಟಕಕ್ಕೆ ಚಾಲನೆ ನೀಡಿದರು. ಈ ಹಿಂದೆ ಹೈದ್ರಾಬಾದ್ ಕರ್ನಾಟಕ ಭಾಗದ ವಿಮೋಚನೆಗಾಗಿ ಜನರನ್ನು ಒಗ್ಗೊಡಿಸಿದ ಗೆ, ನಾಡಪ್ರೇಮ, ತ್ಯಾಗ-ಬಲಿದಾನ, ಕ್ರಾಂತಿಯ ಹೋರಾಟದ ವಿಧಾನ ಅತ್ಯಂತ ರೋಮಾಂಚನಕಾರಿಯಾಗಿತ್ತು. ದೃಶ್ಯ ೧ರಲ್ಲಿ ಗುಲ್ಬರ್ಗಾ ಜಿಲ್ಲೆಯಲ್ಲಿ ಕ್ರಾಂತಿಯ ಕಿಚ್ಚು ಹೊತ್ತಿತ್ತು. ದೃಶ್ಯ-೨ರಲ್ಲಿ ಕೊಪ್ಪಳದ ಕೊಟೆ ಬೀದಿಯ ಲಕ್ಷ್ಮಣ ಗುಡಿ, ಹಾಗೂ ವಾರ್ಕರ ಬೀದಿಯ ಅನಂತಾಚಾರ್ಯ ಜ್ಯೋಷಿ ಯವರು ಸ್ಥಳೀಯ ಯುವಕರನ್ನು ಬದ್ರ ಕೋಟೆಯಷ್ಠೆ ಬಲಿಷ್ಟ ಹೋರಾಟಗಾರ ಗುಂಪನ್ನು ಕಟ್ಟುವ ರೀತಿ ಮೈ ರೋಮ ಏಳುವಂತಿತ್ತು. ಹಾಗೂ ದೃಶ್ಯ-೩ರಲ್ಲಿ ಯಲಬುರ್ಗಾ ತಾಲ್ಲೂಕಿನ ಚಿಕ್ಕೆನಕೊಪ್ಪದಲ್ಲಿ ೭ಜನ ಹೋರಾಟಗಾರರನ್ನು ನಡುಬೀದಿಯಲ್ಲಿ ಬಂಧಿಸುವ ದೃಶ್ಯ ಮತ್ತು ದೃಶ್ಯಕ್ಕೆ ತಕ್ಕಂತ ಹಾಡು ಜನರ ಕಣ್ಣುಗಳಲ್ಲಿ ಕಂಬನಿಸುವಂತೆ ಮಾಡಿತು. ಹೀಗೆ ವೀರ ಪರಾಕ್ರಮ, ಶೌರ್ಯತನದ ಹೋರಾಟದಿಂದ ಕೊನೆಗೆ ಭಾರತ ಸ್ವತಂತ್ರ ಹೊಂದಿದ ೧೩ ತಿಂಗಳ ನಂತರ ಸೆಪ್ಟಂಬರ್ ೧೭-೧೯೪೮ ರಂದು ನಮ್ಮ ಈ ಹೈ.ಕ ಭಾಗಕ್ಕೆ ವಿಮುಕ್ತಿ ಸಿಕ್ಕಿತು. ಎಂಬ ಸಾರಾಂಶ ಸಾರುವ ಕಿರು ನಾಟಕವಾಗಿತ್ತು. ಈ ಕಿರು ನಾಟಕ ೧ ಘಂಟೆ ಪ್ರದರ್ಶನಗೊಂಡರು ಅದರ ಹಿಂದಿನ ಹೋರಾಟದ ನಿಲುವಿನ ಪ್ರದರ್ಶನದ ರೀತಿ ವಿಭಿನ್ನವಾಗಿತ್ತು. ಕೊನೆಗೆ ನಾಟಕವನ್ನು ಕುರಿತು ಅಲ್ಲಮಪ್ರಭು ಬೆಟ್ಟದೂರು ರವರು ಮಾತನಾಡಿ ೯ರಿಂದ೧೧ ವರ್ಷದ ಈ ಚಿಕ್ಕ ವಯಸ್ಸಿನಲ್ಲಯೇ ಅಧ್ವಿತೀಯ ಪ್ರತಿಭೆ ತೋರಿ ವಿಶೇಷತೆಯ ಕಾರ್ಯಕ್ರಮವನ್ನು ನೀಡಿದ ಮಕ್ಕಳನ್ನು ಶ್ಲಾಘಿಸಿದರು. ಮಕ್ಕಳಿಗೆ & ಸಂಸ್ಥೆಯ ಅಧ್ಯಕ್ಷರಿಗೆ ಹಾಗೂ ಮುಖೋಪಾಧ್ಯಾಯರು, ಶಾಲಾ ಸಿಬ್ಬಂದಿವರ್ಗಕ್ಕೂ ಇದೊಂದು ವಿಶೇಷ ರೀತಿಯ ಪ್ರಯೋಗ ಮತ್ತು ಪ್ರಯತ್ನ ಎಂದು ಅಭಿನಂದಿಸಿದರು. ಕಿರುನಾಟಕದ ಕರ್ತೃರಾದ ಶಿವರಾಜ್ ಏಣಿ, ಸಹ ಶಿಕ್ಷಕರನ್ನು ಶ್ಲಾಘಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಜ್ಯೋತಿ ಎಸ್.ಎಸ್. ಸ್ವಾಗತವನ್ನು ಮಂಗಳಾ ಡಂಬಳ. ವಂದನಾರ್ಪಣೆಯನ್ನು ಕಲ್ಲಯ್ಯ ಹಿರೇಮಠ. ಇವರುಗಳು ವಹಿಸಿಕೊಂಡಿದ್ದರು.
ವಿಮೋಚನೆಯ ಕರಿನೆರಳು ನಾಟಕ ಪ್ರರ್ದಶನ
ಕೊಪ್ಪಳ : ದಿ ೨೧-೦೯-೨೦೧೩ರಂದು ಕೊಪ್ಪಳ ತಾಲೂಕಿನ ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲೆಯ ವತಿಯಿಂದ ಸ.ಪ.ಪೂ.ಕಾಲೇಜು ಆವರಣದಲ್ಲಿ ಸಂಜೆ : ೬:೦೦ಘಂಟೆಗೆ, ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟ ಕುರಿತು
Please follow and like us: