You are here
Home > Koppal News > ಚುನಾವಣಾ ಪ್ರಚಾರದಲ್ಲಿ ಭಾಗಿ : ಸರ್ಕಾರಿ ಭೂಮಾಪಕರ ಪರವಾನಗಿ ಅಮಾನತು

ಚುನಾವಣಾ ಪ್ರಚಾರದಲ್ಲಿ ಭಾಗಿ : ಸರ್ಕಾರಿ ಭೂಮಾಪಕರ ಪರವಾನಗಿ ಅಮಾನತು


 ರಾಜಕೀಯ ಪಕ್ಷವೊಂದರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಯಲಬುರ್ಗಾದ ಭೂಮಾಪಕ ನರಸಿಂಹೇಗೌಡ ಅವರ ಸರ್ಕಾರಿ ಪರವಾನಿಗೆಯನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.
  ಯಲಬುರ್ಗಾ ತಹಸಿಲ್ದಾರರ ಕಾರ್ಯಾಲಯದಲ್ಲಿ ನರಸಿಂಹೇಗೌಡ ಸರ್ಕಾರದ ಪರವಾನಗಿ ಪಡೆದು, ಸರ್ಕಾರಿ ಭೂ ಪರವಾನಗಿ ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು.  ಯಲಬುರ್ಗಾ ಪಟ್ಟಣದಲ್ಲಿ ಮಂಗಳವಾರ ಪಕ್ಷವೊಂದರ ಚುನಾಔಣಾ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಚಾರ ಸಾಮಗ್ರಿಯನ್ನು ಕೊರಳಿಗೆ ಧರಿಸಿಕೊಂಡು, ಪಾಲ್ಗೊಂಡಿರುವ ಬಗ್ಗೆ ಮಾಧ್ಯಮದಲ್ಲಿ ಫೋಟೋ ಸಹಿತ ಸುದ್ದಿ ಪ್ರಕಟಗೊಂಡಿತ್ತು.  ಸರ್ಕಾರಿ ಪರವಾನಿಗೆ ಪಡೆದು, ಮೋಜಿಣಿ ಅಳತೆಗಾಗಿ ಸರ್ಕಾರದಿಂದ ಸಂಭಾವನೆ ಪಡೆಯುತ್ತಿರುವ ನರಸಿಂಹೇಗೌಡ ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ನೀತಿ ಸಂಹಿತೆಯ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, ಇವರ ಸರ್ಕಾರಿ ಪರವಾನಿಗೆ ಸಂಖ್ಯೆ: ೪೫/೧೧೭೩ ಪರವಾನಿಗೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Top