ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಹೀರೆಸಿಂದೋಗಿಗೆ ಬೆಳ್ಳಿ-ಪದಕ

 ಇತ್ತಿಚೆಗೆ ದಿ-೨೪/೦೮/೨೦೧೪ ರವಿವಾರದಂದು ಶಿವಮೊಗ್ಗದ ಇಂಡೊರ್ ಸ್ಟೇಡಿಯಂನಲ್ಲಿ ಇಂಟರನ್ಯಾಷನಲ್ ಶೋಟೋಖಾಯಿ ಕರಾಟೆ ಡು ಫೆಡರೇಶನ್ ನವರು ನಡೆಸಿದ ಪ್ರಥಮ ರಾಜ್ಯ ಮಟ್ಟದ ಕರಾಟೆ  ಸ್ಫರ್ಧೇಯಲ್ಲಿ ಎಕಲವ್ಯ ಬುಡೋಖಾನ ಕರಾಟೆ ಸಂಸ್ಥೆಯ ಕರಾಟೆ ಪಟು ರಮೇಶ ಭಜಂತ್ರಿ ೪೫ ರಿಂದ ೫೦ ಕೆಜಿ ಕುಮೀತೆ (ಫೈಟ್) ವಿಭಾಗದಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಬೆಳ್ಳಿಯ ಪದಕ ಪಡೆದಿದ್ದಾನೆ. ಆವರಿಗೆ ಹೀರೆಸಿಂದೋಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕೇಶವರೆಡ್ಡಿ ಮಾದಿನೂರು ಮತ್ತು ಅಂತರಾಷ್ಟ್ರೀಯ ಕರಾಟೆ ಪಟು ಮೌನೇಶ ಎಸ್ ವಿ, Sಆಒಅ ಮಾಜಿ ಅಧ್ಯಕ್ಷರಾದ ಚನ್ನನಗೌಡ್ರು, ಯುವ ಮುಖಂಡ ಹೂವಯ್ಯ ಮಠದ ಮತ್ತು ಕರಾಟೆ ತರಬೇತಿದಾರರಾದ ದೇವಣ್ಣ, ಶಾಂತವೀರ ಅಬಿನಂದಿಸಿ ಮುಂಬರುವ ದಿನಗಳಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಸ್ಫರ್ಧೇ ಮಾಡಿ ಇನ್ನು ಹೆಚ್ಚಿನ ಸಾಧನೆ ಮಾಡಲೆಂದು ಹಾರೈಸಿದರು.
Please follow and like us:
error