ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾಗಿ ಬಿ.ಗಿರೀಶಾನಂದ ಜ್ಞಾನಸುಂದರ

ಕರ್ನಾಟಕ ರಕ್ಷಣಾ ವೇದಿಕೆ  ( ಪ್ರವೀಣಶೆಟ್ಟಿ ಬಣ) ದ ಕೊಪ್ಪಳ ತಾಲೂಕ ಘಟಕದ ಪೂರ್ವ ಭಾವಿ ಸಭೆಯನ್ನು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಇಂದು  ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ, ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅರ್ಜುನ ನಾಯಕ ಗಂಗಾವತಿ ತಾಲೂಕ ಅ

ಧ್ಯಕ್ಷಕರು, ಶಿವನಗೌಡ ಪಾಟೀಲ ಹಲಗೇರಿ, ಗವಿಸಿದ್ದಪ್ಪ ಕರಕಿಹಳ್ಳಿ, ರಿಯಾಜ್ ಹಣಗಿ, ಹನುಮೇಶ ಬೂದಗುಂಪಾ, ಆಗಮಿಸಿದ್ದರು. ಸಭೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಪ್ರವೀಣಕುಮಾರಶೆಟ್ಟಿ, ಇವರ ಆದೇಶದ ಮೆರೆಗೆ ಬಿ.ಗಿರೀಶಾನಂದ ಜ್ಞಾನಸುಂದರ ಇವರನ್ನು ಕೊಪ್ಪಳ ತಾಲೂಕ ಅಧ್ಯಕ್ಷರಾಗಿ ಅವಿರೋಧವಾಗಿ ನೇಮಕ ಮಾಡಲಾಗಿದೆ.  ಇನ್ನೂ ಹೆಚ್ಚಿನ ರೀತಿಯಲ್ಲಿ ನಾಡು-ನುಡಿ, ಜಲ ಗಡಿ, ಭಾಷೆ ವಿಷಯದಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲ್ಲು ಆದೇಶಿಸಿಸಲಾಗಿದೆ.

Leave a Reply