fbpx

ದೇವದಾಸಿ ಪದ್ಧತಿ ನಿರ್ಮೂಲನೆ ಬೀದಿನಾಟಕ ಯಶಸ್ವಿ

ಕೊಪ್ಪಳ, ೧೮- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ದೇವದಾಸಿ ಪುನರ್ ಯೋಜನೆ ಜಿಲ್ಲಾ ಕೇಂದ್ರ ಕೊಪ್ಪಳ ಇವರ ಸಹಯೋಗದಲ್ಲಿ ಚೇತನ್ ಸಾಂಸ್ಕೃತಿಕ ಕಲಾ ತಂಡ ಓಜಿನಹಳ್ಳಿ ವರಿಂದ ಜಿಲ್ಲೆಯ ಆಯ್ದ ತಾಲೂಕಿನ ಗಂಗಾವತಿ ಹಾಗೂ ಕೊಪ್ಪಳ ತಾಲೂಕಿನ ಗ್ರಾಮಗಳಾದ ಚಿಕ್ಕಜಂತಕಲ್ಲ, ಕಾರಟಗಿ, ಹಿರೇಸಿಂದೋಗಿ ಬೆಟಗೇರಿ ಅಳವಂಡಿ ಮಾ. ೧೩ ಮತ್ತು ೧೪ ಎರಡು ದಿನಗಳ ಕಾಲ ಸಮಾಜದಲ್ಲಿ ಅನಿಷ್ಟ ಪದ್ಧತಿಯಾದ ದೇವದಾಸಿ ಪದ್ಧತಿ ನಿರ್ಮೂಲನೆ ಕುರಿತು ಜನರಿಗೆ ಅರಿವು ಮೂಡಿಸಲು ಶಿವಮೂರ್ತಿ ಮೇಟಿ ನಿರ್ದೇಶನದಲ್ಲಿ ಬಾಲಪ್ಪ ಮೋಟಿ, ನೀಲಪ್ಪ ಮೋಟಿ, ಬಾಬುಸಾಬ ಸಿಂದೋಗಿ, ಖಾದರಸಾಬ ನದಾಫ್, ಕರೀಮ್‌ಸಾಬ ನದಾಫ್, ಮಹ್ಮದ ನದಾಫ್, ಅಂಬುಜಾ ಸಿಂಧುನೂರ, ಪ್ರಕಾಶ ಹೊಸಗೇರಿ, ರಾಮಣ್ಣ ವಾಲ್ಮೀಕಿ ಭಾಗವಹಿಸಿ ಅಭಿನಯದ ಮೂಲಕ ಜಾನಪದ ಜಾಗೃತಿ ಗೀತೆಯೊಂದಿಗೆ ಜನರಿಗೆ  ಅರಿವು ಮೂಡಿಸಿದರು.
Please follow and like us:
error

Leave a Reply

error: Content is protected !!