ಸಿಆರ್‌ಪಿ, ಬಿಆರ್‌ಪಿ ಹುದ್ದೆಗಳಿಗೆ ಶಿಕ್ಷಕರಿಂದ ಅರ್ಜಿ ಆಹ್ವಾನ.

ಕೊಪ್ಪಳ ಮಾ. ೦೩
(ಕ ವಾ) ಕೊಪ್ಪಳ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಖಾಲಿ ಇರುವ ಸಿಆರ್‌ಪಿ
ಮತ್ತು ಬಿಆರ್‌ಪಿ ಹುದ್ದೆಗಳ ಭರ್ತಿಗಾಗಿ ಆಸಕ್ತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ
ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಜಿಲ್ಲೆಯಲ್ಲಿ ಖಾಲಿ ಇರುವ ಸಿಆರ್‌ಪಿ
ಮತ್ತು ಬಿಆರ್‌ಪಿ ಹುದ್ದೆಗಳನ್ನು ಲಿಖಿತ ಪರೀಕ್ಷೆ, ವಿದ್ಯಾರ್ಹತೆ ಹಾಗೂ ಸೇವಾ ಅನುಭವದ
ಆಧಾರದ ಮೇಲೆ ಭರ್ತಿ ಮಾಡಲು ಉದ್ದೇಶಿಸಲಾಗಿದೆ.  ಆಸಕ್ತಿ ಇರುವ ಸರ್ಕಾರಿ ಪ್ರಾಥಮಿಕ
ಮತ್ತು ಪ್ರೌಢಶಾಲಾ ಶಿಕ್ಷಕರು ಅರ್ಜಿ ಸಲ್ಲಿಸಬಹುದು.  ಅರ್ಜಿ ನಮೂನೆಯನ್ನು ಆಯಾ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು
ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾ. ೧೪ ರಂದು ಸಂಜೆ ೫ ಗಂಟೆಯ ಒಳಗಾಗಿ
ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು (ಅಭಿವೃದ್ಧಿ), ಡಯಟ್, ಮುನಿರಾಬಾದ್
ಅಥವಾ ವೆಬ್‌ಸೈಟ್ ssಚಿ.ಞಚಿಡಿಟಿಚಿಣಚಿಞಚಿ.gov.iಟಿ ಅಥವಾ ಆಯಾ ಕ್ಷೇತ್ರ
ಶಿಕ್ಷಣಾಧಿಕಾರಿಗಳಿಂದ ಪಡೆಯಬಹುದು ಎಂದು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ
ಸಮನ್ವಯಾಧಿಕಾರಿ ಎ. ಶ್ಯಾಮಸುಂದರ್ ತಿಳಿಸಿದ್ದಾರೆ.
Please follow and like us:
error