ಕವಿ ಮತ್ತು ಕಾವ್ಯ ಈ ಸಮಾಜವನ್ನ ಮುಟ್ಟಬೇಕು

ಕವಿಯಾದವನಿಗೆ ಸಮಾಜದ ಎಲ್ಲಾ ವಿಚಾರ ಹಾಗೂ ನ್ಯೂನತೆಗಳು ನೋವುಗಳು ಅರ್ಥವಾಗಬೇಕು ಅಂದಾಗ ಕಾವ್ಯ ಗಟ್ಟಿಯಾಗಿ ಹುಟ್ಟಲು ಸಾಧ್ಯವೆಂದು ಹಿರಿಯ ಸಾಹಿತಿ ವಿಠ್ಠಪ್ಪ ಗೊರಂಟ್ಲಿ ನುಡಿದರು. 
ಅವರು ಕನಕಗಿರಿಯ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದಲ್ಲಿ ಜರುಗಿದ ಜಿಲ್ಲಾ ಕವಿಗೊಷ್ಠಿ ಅಧ್ಯಕ್ಷತೆವಹಿಸಿಕೊಂಡು ಮಾತಾನಾಡಿದರು. ಇಂದಿನ ವಾಸ್ತವ ಸಮಾಜದಲ್ಲಿ ಸಂಸ್ಕೃತಿ ಸಮಾನತೆಗಿಂತ ರಾಜಕಾರಣ ಬಲಿಷ್ಠವಾಗುತ್ತಿದೆ ಹಾಗೂ ಭ್ರಷ್ಟಾಚಾರದಲ್ಲಿ ಪ್ರಮುಖ ಪಾತ್ರವಹಿಸಿಕೊಳ್ಳುತ್ತಿದೆ ಇದನ್ನು ತಡೆಯುವಲ್ಲಿ ಸಮಾಜವನ್ನು ಎಚ್ಚರಿಸುವಲ್ಲಿ ಕವಿ ಕಾವ್ಯ ಶ್ರಮಿಸಬೇಕೆಂದು ಕರೆ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠ ಸಂಯೋಗದಲ್ಲಿ ಜರುಗಿದ ಜಿಲ್ಲಾ ಕವಿಗೋಷ್ಠಿ  ಕಾರ್ಯಕ್ರಮವನ್ನು ಕನ್ನಡ ಪ್ರಾಧ್ಯಾಪಕ ಡಾ|| ಜಾಜಿ ದೇವೇಂದ್ರಪ್ಪ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಕೊಪ್ಪಳ ಜಿಲ್ಲೆಯಲ್ಲಿ ಕಾವ್ಯ ಪರಂಪರೆ ಬಲಿಷ್ಠವಾಗಿದೆ ಈ ಭಾಗದ ಪ್ರತಿ ಹಳ್ಳಿಯಲ್ಲಿ ತತ್ವ ಪದ, ಶರಣ ಸಾಹಿತ್ಯ, ಸೂಫಿ ಸಾಹಿತ್ಯ ಇನ್ನೂ ಜೀವಂತವಾಗಿವೆ ಹಾಗಾಗಿ ನವ್ಯ ಕಾವ್ಯದಲ್ಲಿ ಕೂಡ ಹೋರಾಟದ ಪ್ರತಿಪಾದನೆ ಮಾಡುವ ಕಾವ್ಯಗಳು ಈ ಭಾಗದ ಕವಿಗಳಿಂದ ಗಟ್ಟಿಗೊಳ್ಳುತ್ತವೆ. ಅಧ್ಯಯನ ಮತ್ತು ಅನುಭವ ರೂಡಿಸಿಕೊಂಡವರು ಉತ್ತಮ ಕವಿತೆ ಬರೆಯಬಲ್ಲರು ಎಂದು ನುಡಿದರು. 
ಈ ಸಂದರ್ಭದಲ್ಲಿ ಕವಿಗೊಷ್ಠಿಯ ಆಶಯನುಡಿ ನುಡಿದ ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯ ಸಂಚಾಲಕ ಸಂಗಮೇಶ ಕೋಟೆ ಕೊಪ್ಪಳ ಜಿಲ್ಲೆಯಲ್ಲಿ ಅಕಾಡಮಿಯು ಇನ್ನೂ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ ಸಾಹಿತಿಗಳಿಗಿಂತ ರಾಜಕಾರಣಿಗಳ ಸಹಕಾರ ಅಗತ್ಯವಿದೆ ಹಾಗಾಗಿ ಸದರಿ ಕಾರ್ಯಕ್ರಮವನ್ನು ಗ್ರಾಮಾಂತರ ಪ್ರದೇಶವಾದ ಕನಕಗಿರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.
ಈ ಕವಿಗೋಷ್ಠಿಯಲ್ಲಿ ೨೦ ಯುವ ಮತ್ತು ಹಿರಿಯ ಕವಿಗಳಿ ಕವನ ಮತ್ತು ಗಜಲ್ ವಾಚನಮಾಡಿದರು. ವಿಶೇಷವಾಗಿ ಕಳಕೇಶ ಗುಡ್ಲಾನೂರು, ಮಹೇಶ ಬಳ್ಳಾರಿ, ರಮೇಶ ಗಬ್ಬೂರು, ಅಲ್ಲಾಗಿರಿರಾಜ್, ರಮೇಶ ಬನ್ನಿಕೊಪ್ಪ, ವಿಜಯಲಕ್ಷ್ಮಿ, ಶಾಂತಾದೇವಿ ಹಿರೇಮಠ ಇವರ ಕವಿತೆಗಳು ಸಭಿಕರ ಗಮನ ಸೆಳೆದವು ಈ ಸಂದರ್ಬದಲ್ಲಿ ಸ್ಳಿಯ ಹಿರಿಯರಾದ ಮಹಾಬಲೇಶ್ವರ ಸ್ವಾಮಿಯವರು ಉಪಸ್ಥಿತರಿದ್ದರು.
ಪ್ರಮೋದ್ ತುರ್ವಿಹಾಳ ಕಾರ್ಯಕ್ರಮ ನಿರೂಪಿಸಿದರು ಕವಿ ಅಲ್ಲಾಗಿರಿರಾಜ್ ಸ್ವಾಗತಿಸಿದರು ಸಿರಾಜ್ ಬಿಸರಹಳ್ಳಿ ವಂದಿಸಿದರು

Leave a Reply