ಜಿಲ್ಲಾ ಮಟ್ಟದ ಯುವಜನ ಮೇಳ : ಸ್ಪರ್ಧೆ ಫಲಿತಾಂಶ ಪ್ರಕಟ

ಕೊಪ್ಪಳ ಫೆ.:  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕುಷ್ಟಗಿಯಲ್ಲಿ ಫೆ. ೭, ೮ ರಂದು ಜರುಗಿದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳದ ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟಗೊಂಡಿದೆ.
  ಯುವಕರ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಕುಷ್ಟಗಿಯ ಯುವರಾಜ್ ಹಿರೇಮಠ- ಪ್ರಥಮ, ಗಂಗಾವತಿಯ ಮಹಮ್ಮದ್ ಹುಸೇನ್-ದ್ವಿತೀಯ.  ರಂಗಗೀತೆ ಸ್ಪರ್ಧೆಯಲ್ಲಿ ಗಂಗಾವತಿಯ ಮಹಮ್ಮದ್ ಪ್ರಥಮ, ಯಲಬುರ್ಗಾದ ಶ್ರೀಕಾಂತಗೌಡ ದ್ವಿತೀಯ.  ಏಕಪಾತ್ರಾಭಿನಯದಲ್ಲಿ ಯಲಬುರ್ಗಾದ ಲೋಕೇಶನಾಯ್ಕ(ಪ್ರಥಮ) ಕೊಪ್ಪಳದ ಶಿವಕುಮಾರ(ದ್ವಿತೀಯ).  ಜಾನಪದ ಗೀತೆಯಲ್ಲಿ ಸುಖಮುನಿ ತಂಡ ಕುಷ್ಟಗಿ(ಪ್ರಥಮ), ತಾಯಮ್ಮದೇವಿ ಭಜನಾ ಸಂಘ, ಕೊಪ್ಪಳ (ದ್ವಿತೀಯ).  ಜಾನಪದ ನೃತ್ಯ ಸ್ಪರ್ಧೆಯಲ್ಲಿ ಗೌರಿಶಂಕರ ಯುವಕ ಸಂಘ, ಭಾಗ್ಯನಗರ (ಪ್ರಥಮ), ಬಸವೇಶ್ವರ ಯುವಕ ಸಂಘ, ಗಂಗಾವತಿ (ದ್ವಿತೀಯ).  ಗೀಗೀಪದ ಸ್ಪರ್ಧೆಯಲ್ಲಿ ಮಾರುತೇಶ್ವರ ಯುವಕ ಸಂಘ, ಕುಷ್ಟಗಿ (ಪ್ರಥಮ), ಬಸವೇಶ್ವರ ಯುವಕ ಸಂಘ, ಗಂಗಾವತಿ (ದ್ವಿತೀಯ).  ಲಾವಣಿ ಸ್ಪರ್ಧೆಯಲ್ಲಿ ಶ್ರೀಕಾಂತಗೌಡ ಯಲಬುರ್ಗಾ (ಪ್ರಥಮ), ವಿಜಯ ಮಹಾಂತೇಶ ಕುಷ್ಟಗಿ (ದ್ವಿತೀಯ).  ಕೋಲಾಟ ಸ್ಪರ್ಧೆಯಲ್ಲಿ ಕರ್ನಾಟಕ ಯುವಕ ಸಂಘ ಯಲಬುರ್ಗಾ (ಪ್ರಥಮ),  ಗೌರಿ ಶಂಕರ ಯುವಕ ಸಂಘ ಭಾಗ್ಯನಗರ (ದ್ವಿತೀಯ).  ಭಜನೆ ಸ್ಪಧೆಯಲ್ಲಿ ತಾಯಮ್ಮ ದೇವಿ ಭಜನಾ ಸಂಘ ಕೊಪ್ಪಳ (ಪ್ರಥಮ), ಬಸವೇಶ್ವರ ಯುವಕ ಸಂಘ ಯಲಬುರ್ಗಾ (ದ್ವಿತೀಯ).  ವೀರಗಾಸೆ ಸ್ಪರ್ಧೆಯಲ್ಲಿ ಕರ್ನಾಟಕ ಯುವಕ ಮಂಡಳಿ ಯಲಬುರ್ಗಾ (ಪ್ರಥಮ), ಗುರುಬಸವೇಶ್ವರ ಯುವಕ ಸಂಘ ಕೊಪ್ಪಳ (ದ್ವಿತೀಯ).  ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಯುವಕ ಸಂಘ, ಯಲಬುರ್ಗಾ (ಪ್ರಥಮ).  ದೊಡ್ಡಾಟ ಸ್ಪರ್ಧೆಯಲ್ಲಿ ಕನಕಶ್ರೀ ಯುವಕ ಸಂಘ ಕುಷ್ಟಗಿ (ಪ್ರಥಮ), ಆದಿಶಕ್ತಿ ಯುವಕ ಸಂಘ ಯಲಬುರ್ಗಾ (ದ್ವಿತೀಯ) ಸ್ಥಾನ ಪಡೆದುಕೊಂಡಿವೆ.
  ಯುವತಿಯರ ವಿಭಾಗದಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ಅಕ್ಷತಾ ಬಣ್ಣದ ಬಾವಿ ಯಲಬುರ್ಗಾ (ಪ್ರಥಮ), ಗೀತಾ ಬಳಿಗಾರ ಕೊಪ್ಪಳ (ದ್ವಿತೀಯ).  ರಂಗಗೀತೆ ಸ್ಪರ್ಧೆಯಲ್ಲಿ ಲಲಿತಾ ಹಿರೇಮಠ ಕುಷ್ಟಗಿ (ಪ್ರಥಮ), ರೇಣುಕಾ ಪೂಜಾರ (ದ್ವಿತೀಯ).  ಜಾನಪದ ಗೀತೆ ಸ್ಪರ್ಧೆಯಲ್ಲಿ ಜ್ಯೋತಿ ಯುವತಿ ಮಂಡಳಿ ಕುಷ್ಟಗಿ (ಪ್ರಥಮ).  ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮದರ್ ಥೆರೆಸಾ ಯುವತಿ ಸಂಘ ಕುಷ್ಟಗಿ (ಪ್ರಥಮ).  ಗೀಗೀಪದ ಸ್ಪರ್ಧೆಯಲ್ಲಿ ಬನಶಂಕರಿ ಯುವತಿ ಮಂಡಳಿ ಕುಷ್ಟಗಿ (ಪ್ರಥಮ), ಲಲಿತಮ್ಮ ಕಲಾ ತಂಡ ಕುಷ್ಟಗಿ (ದ್ವಿತೀಯ).  ಲಾವಣಿ ಸ್ಪರ್ಧೆಯಲ್ಲಿ ಬಸವರಾಜೇಶ್ವರಿ ಕುಷ್ಟಗಿ (ಪ್ರಥಮ), ಲಲಿತಾ ಹಿರೇಮಠ ಕುಷ್ಟಗಿ (ದ್ವಿತೀಯ).  ಕೋಲಾಟ ಸ್ಪರ್ಧೆಯಲ್ಲಿ ಮದರ್ ಥೆರೆಸಾ ಯುವತಿ ಮಂಡಳಿ ಕುಷ್ಟಗಿ (ಪ್ರಥಮ).  ಭಜನೆ ಸ್ಪರ್ಧೆಯಲ್ಲಿ ಬನಶಂಕರಿ ಸಾಂಸ್ಕೃತಿಕ ಕ್ರೀಡಾ ಮಂಡಳಿ ಕುಷ್ಟಗಿ (ಪ್ರಥಮ).  ಸೋಬಾನ ಪದ ಸ್ಪರ್ಧೆಯಲ್ಲಿ ಜ್ಯೋತಿ ಮಹಿಳಾ ಮಂಡಳಿ ಕುಷ್ಟಗಿ (ಪ್ರಥಮ).  ಬೀಸುಕಲ್ಲು ಪದ ಸ್ಪರ್ಧೆಯಲ್ಲಿ ಜ್ಯೋತಿ ಯುವತಿ ಮಂಡಳಿ ಕುಷ್ಟಗಿ (ಪ್ರಥಮ) ಸ್ಥಾನ ಪಡೆದಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ. ರಾಮಕೃಷ್ಣಯ್ಯ   ತಿಳಿಸಿದ್ದಾರೆ.
Please follow and like us:
error