You are here
Home > Koppal News > ಕೃಷಿ ಭಾಗ್ಯ : ಮೇ. ೧೧ ರೊಳಗೆ ಕಾರ್ಯಾದೇಶ ಪಡೆಯಲು ರೈತರಿಗೆ ಸೂಚನೆ

ಕೃಷಿ ಭಾಗ್ಯ : ಮೇ. ೧೧ ರೊಳಗೆ ಕಾರ್ಯಾದೇಶ ಪಡೆಯಲು ರೈತರಿಗೆ ಸೂಚನೆ

 : ಕೃಷಿಭಾಗ್ಯ ಯೋಜನೆಯಡಿ ೨೦೧೪-೧೫ ಸಾಲಿಗಾಗಿ ಅರ್ಜಿ ಸಲ್ಲಿಸಿರುವ ರೈತರು ಮೇ.೧೧ ರೊಳಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಕಾರ್ಯಾದೇಶ ಪಡೆಯಬಹುದಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೊಪ್ಪಳದ ಜಂಟಿ ಕೃಷಿ ನಿರ್ದೇಶಕರು ಸೂಚನೆ ನೀಡಿದ್ದಾರೆ.  
  ಕೃಷಿ ಭಾಗ್ಯ ಯೋಜನೆಯಡಿ ೨೦೧೪-೧೫ನೇ ಸಾಲಿಗಾಗಿ ಕೊಪ್ಪಳ ಜಿಲ್ಲೆಯಲ್ಲಿ ೯೪೨೮ ಅರ್ಜಿಗಳು ಸ್ವೀಕೃತಗೊಂಡಿವೆ. ೨೦೧೪-೧೫ನೇ ಹಾಗೂ ಪ್ರಸಕ್ತ ಸಾಲಿನ ಗುರಿಯಂತೆ ಪ್ರತಿ ತಾಲೂಕಿಗೆ ೪೦೦ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶವಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ರೈತರಿಗೆ ಕಾರ್ಯಾದೇಶ ನೀಡಲಾಗುವುದು.  ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿರುವ ರೈತರು ಮೇ.೦೫ ರೊಳಗಾಗಿ ಪಹಣಿ, ಗುರುತಿನ ಚೀಟಿ ಅಥವಾ ಅರ್ಜಿ ಸ್ವೀಕೃತಿ ಪತ್ರದೊಂದಿಗೆ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಕಾರ್ಯಾದೇಶ ಪಡೆಯಬೇಕು ಎಂದು ಕೊಪ್ಪಳದ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.   ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ರೈತ ಸಂಪರ್ಕ ಕೇಂದ್ರಗಳ ಮುಖ್ಯಸ್ಥರನ್ನು ಸಂಪರ್ಕಿಸಬಹುದಾಗಿದೆ.  

Leave a Reply

Top