ಸಾಣೆಹಳ್ಳಿಯಲ್ಲಿ ರಂಗಶಿಕ್ಷಣ ಡಿಪ್ಲೋಮಾ


  ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಸಾಣೆಹಳ್ಳಿಯಲ್ಲಿರುವ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ಒಂದು ವರ್ಷ ಅವಧಿಯ ರಂಗಶಿಕ್ಷಣ ಡಿಪ್ಲೋಮಾ ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
  ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ರಂಗಶಿಕ್ಷಣ ಡಿಪ್ಲೋಮಾಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ, ಪದವೀಧರರಿಗೆ ಆದ್ಯತೆಯಿದೆ.  ತರಬೇತಿ ಅವಧಿಯಲ್ಲಿ ರಂಗತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ.  ಈ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು.  ಭಾರತೀಯ ರಂಗಭೂಮಿ, ಕನ್ನಡ ರಂಗಭೂಮಿ, ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಅಭಿನಯ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು, ಕಳರಿ, ಯೋಗ, ಕಥಕ್ಕಳಿ, ಯಕ್ಷಗಾನ, ಕಂಸಾಳೆ, ಹೆಜ್ಜೆಮೇಳ, ವೀರಗಾಸೆ, ಪ್ರಸಾಧನ, ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸ ಮುಂತಾದ ಕಾರ್ಯಾಗಾರಗಳ ಜೊತೆಗೆ ಕಾವ್ಯ, ಸಿನಿಮಾ, ಚಿತ್ರಕಲೆ ಕುರಿತಾದ ಕಮ್ಮಟಗಳು ನಡೆಯುತ್ತವೆ.  ಒಂದು ವರ್ಷದ ಅವಧಿಯಲ್ಲಿ ನಾಲ್ಕರಿಂದ ಐದು ನಾಟಕಗಳ ಅಭ್ಯಾಸ ಹಾಗೂ ಪ್ರದರ್ಶನ ನಡೆಯುತ್ತದೆ.  ಆಸಕ್ತರು ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲಾ, ಸಾಣೇಹಳ್ಳಿ, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ ಈ ವಿಳಾಸಕ್ಕೆ ಬರೆದು, ಪ್ರವೇಶ ಪತ್ರಗಳನ್ನು ಪಡೆದುಕೊಳ್ಳಬಹುದು.  ಜು. ೨ ರಂದು ಬೆಳಿಗ್ಗೆ ೧೦ ಗಂಟೆಗೆ ಸಾಣೇಹಳ್ಳಿ ರಂಗಪ್ರಯೋಗ ಶಾಲೆಯಲ್ಲಿ ಸಂದರ್ಶನ ನಡೆಯಲಿದೆ.  ಜು. ೧೫ ರಿಂದ ತರಗತಿಗಳು ಪ್ರಾರಂಭವಾಗುತ್ತವೆ.  ಹೆಚ್ಚಿನ ಮಾಹಿತಿಗಾಗಿ ೦೮೧೯೯- ೨೪೩೭೭೨, ಮೊಬೈಲ್- ೯೪೪೮೩೯೮೧೪೪ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಾಚಾರ್ಯ ನಟರಾಜ ಹೊನ್ನವಳ್ಳಿ ಅವರು  ತಿಳಿಸಿದ್ದಾರೆ.

Please follow and like us:
error