ಕುಕನೂರಿನ ಜೇಷ್ಠಾ ದೇವಿ. ಮಹಾಮಾಯಾ ದೇವಿ ಭಕ್ತರಿಗೆ ಮುಕ್ತಿಯನ್ನು ನೀಡುವವಳು

ಸುಪ್ರಸಿದ್ದ ಮಹಾಮಾಯಾ ದೇವಿಯ ಮಹಾರಥೋತ್ಸವ ಇದೇ ಅ.೧೩ ರ ರವಿವಾರದಂದು   ಸಾಯಂಕಾಲ ನಡೆಯಲಿದ್ದು, 
ಯಲಬುರ್ಗಾ,ಅ.೧೨: ಯಲಬುರ್ಗಾ ತಾಲೂಕಿನ ಕುಕನೂರ ಐತಿಹಾಸಿಕ ತಾಣ. ಭಾವೈಕ್ಯತೆಯ ನೆಲೆವೀಡು. ಔದ್ಯೋಗಿಕ ಕೇಂದ್ರ . ಪುಣ್ಯ ಪುರುಷರ ಜನ್ಮ ಸ್ಥಳ. ಗ್ರೈನೈಟ್ ಉದ್ಯಮಿಗಳ ತಾಣ.  ಹೀಗೆ ತನ್ನ ಮಡಿಲಲ್ಲಿ ಅನೇಕ ವಿಶೇಷತೆಗಳನ್ನು ಅಳವಡಿಸಿಕೊಂಡಿರುವ ಕುಕನೂರು ತನ್ನದೇ ಆದ ಅತ್ಯದ್ಬುತ ಲಕ್ಷಣಗಳಿಂದ ರಾಜ್ಯದ ಗಮನ ಸೇಳೆದುಕೊಳ್ಳುತ್ತಿದೆ. ಇತಿಹಾಸ ಪ್ರಸಿದ್ದ ಚಂದ್ರಹಾಸನ ಕಾಲದಿಂದಲೂ ಈ ಗ್ರಾಮ ತನ್ನದೇ ಆದ ನೆಲೆಗಟ್ಟಿನಲ್ಲಿ ಗತ ವೈಭವವನ್ನು ಹೊಂದಿದೆ.
       ಕುಕನೂರಿನ ಚಾರಿತ್ರಿಕ ಹಿನ್ನೆಲೆಯಿಂದ ದೊರೆತ ಶಿಲಾ ಶಾಸನಗಳನ್ನು ಗಮನಿಸಿದಾಗ ಅನೇಕ ಮಹತ್ವದ ವಿಷಯಗಳು ನಮಗೆ ದೊರೆಕುವವು. ಸುಮಾರು ಏಳನೇ ಶತಮಾನದಿಂದ ೧೬-೧೭ನೇ ಶತಮಾನದವರೆಗೂ ಕರ್ನಾಟಕವನ್ನು ಆಳಿದ ತಮ್ಮದೆ ಆದ ಪ್ರಭಾವವನ್ನು ಬೀರಿದ ರಾಜ ಮಹಾರಾಜರಾದ ಬದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರೂ, ಕಲಚೂರಿಗಳು, ಹೊಯ್ಸಳರು, ವಿಜಯ ನಗರ ಸಾಮ್ರಾಜ್ಯದ ಅರಸರು, ರಾಜ್ಯದ ಅರಸರು ರಾಜ್ಯವಾಳಿದ ಭಾಗ ಕುಕನೂರ. ಇದು ೩೦ ಗ್ರಾಮಗಳನ್ನೊಳಗೊಂಡ ಆಡಳಿತ ಘಟಕವಾಗಿ ರಾಜಕೀಯರಂಗದಲ್ಲಿ ಬಹಳ ಪ್ರಖ್ಯಾತಿಯನ್ನು ಪಡೆದಿತ್ತು. ಸುಮಾರು ೧೧-೧೨ ನೇ ಶತಮಾನದಲ್ಲಿ ಯಲಬುರ್ಗಾ ರಾಜಧಾನಿಯಿಂದ ಸಿಂಹಕುಲದ ಮಹಾಮಂಡಲೇಶ್ವರ ಈ ಪ್ರದೇಶವನ್ನು ಪ್ರತ್ಯೇಕವಾಗಿ ಆಳಿದರು. ಕುಕನೂರ ಈ ಹಿಂದೆ ಕುಂತಳಪುರವೆಂದು ಕರೆಯಲ್ಪಡುತ್ತಿತ್ತು. ಕುಕ್ಕನೆಂಬ ಒಬ್ಬ ವ್ಯಕ್ತಿಯ ನಿಮಿತ್ಯವಾಗಿ ಇದಕ್ಕೆ ಕುಕ್ಕನೂರ ಎಂದು ಹೆಸರು ಬಂದಿತೆಂದು ಹಲವು ವಿಧ್ವಾಂಸರ ಅಭಿಪ್ರಾಯವಾಗಿದೆ. 
     ಅಲ್ಲದೇ ಕುಕನೂರ ಈ ಹಿಂದೆ ಹೆಸರಾಂತ ದಾರ್ಮಿಕ ಕ್ಷೇತ್ರವಾಗಿತ್ತು ಶಿವ-ಶಕ್ತಿ-ಸುರತ್-ಸಂಪುಟ ಕ್ಷೇತ್ರವೆಂದು ಪ್ರಸಿದ್ದಿ ಪಡೆದು ಜೇಷ್ಠಾ ದೇವಿಯ ಆವಾಸ ಸ್ಥಾನವಾಗಿ ಶಾಕ್ತ ಫೀಠವಾಗಿತ್ತು. ಶ್ರೀ ಶಕ್ತಿ ಮಹಾಮಾಯೆಯ ಬಗ್ಗೆ ವರ್ಣಿಸುವದಾದರೆ ಮೂಲ ದೇವಿಯು ಅತ್ಯುಗ್ರಳಾಗಿದ್ದಳು. ಸಾಕಷ್ಟು ಬಲಿಕೊಟ್ಟು ಸೌಮ್ಯಳನ್ನಾಗಿಸುವದು ಸಾದ್ಯವಾಗುವದ್ದರಿಂದ ಮೊದಲಿನ ಊರು ಹಾಳಾಯಿತಂತೆ. ದೇವಿಯ ಈ ಪ್ರಖರತೆಯನ್ನು ಕಡಿಮೆ ಮಾಡಿ ಸೌಮ್ಯ ರೂಪವನ್ನು ಇಲ್ಲಿಗೆ ಬಂದ ದಕ್ಷಿಣ ಮೂರ್ತಿ ಎಂಬ ಯತಿಯು ದೇವಿಯನ್ನು ಆರಾದಿಸಿ ಸೌಮ್ಯಗೊಳಿಸಿದನೆಂದು ಪ್ರತೀತಿ ಇದೆ.
ಈ ದೇವಾಲಯವಿದ್ದ ಸ್ಥಳ ಹಿಂದೆ ಕಸ ಚೆಲ್ಲುವ ಸ್ಥಳವಾಗಿತ್ತು. ಒಮ್ಮೆ ಇಲ್ಲಿಗೆ ಬಂದ ಸ್ವಾಮಿಯು ಅದನ್ನು ಸ್ವಚ್ಚಗೊಳಿಸಿ ದೇವಿಯ ಆಗಮನವನ್ನು ಸೂಚಿಸಿದನೆಂದು ಇತಿಹಾಸದ ಮೂಲಗಳಿಂದ ತಿಳಿದು ಬರುತ್ತದೆ. ಮುಂದೆ ಒಂದು ಘಟ ಸರ್ಪವು ಪ್ರಕಟವಾಗಿ ಒಂದು ಸ್ಥಳವನ್ನು ಸೂಚಿಸಿತೆಂದೂ,  ಅನಂತರ ಅಲ್ಲಿಂದ ವಿಗ್ರಹಗಳನ್ನು ತಂದು ಮಂದಿರದಲ್ಲಿ ಪ್ರತಿಷ್ಠಾಪಿಸಿದರೆಂದೂ, ಆನಂತರ ದೇವಿಯ ವೈಭವವು ಬೆಳಗಿತೆಂದೂ ಶಾಸನಗಳಿಂದ ತಿಳಿದು ಬರುತ್ತದೆ.
  ಶಿವನು ಕೈಲಾಸವನ್ನು ತ್ಯಜಿಸಿ ಪಾರ್ವತಿ ಮತ್ತು ಕ್ಷೇತ್ರಪಾಲಕರೊಡಗೂಡಿ ಇಲ್ಲಿಗೆ ಬಂದು ನೆಲೆಸಿದನೆಂದು ಈ ಕ್ಷೇತ್ರದಲ್ಲಿ ಶಿವನ ೧೮ ರೂಪಗಳು ಮತ್ತು ಅದೇ ರೀತಿ ಬೇರೆ ಬೇರೆ ದೇವರುಗಳು ನೇಲಸಿದ್ದರೆಂದು ಶಾಸನಗಳು ಹೇಳುತ್ತವೆ. ಈ ಕ್ಷೇತ್ರ ಇಲ್ಲಿ ಒಂಬತ್ತು ಶಕ್ತಿ ಪೀಠಗಳು ಇರುವದರಿಂದ ಇದಕ್ಕೆ ಶಿವ-ಶಕ್ತಿ-ಸುರತ್-ಸಂಪುಟ ಕ್ಷೇತ್ರವೆಂದು ಹೆಸರು ಬಂದಿದೆ.
    ಶ್ರೀ ದೇವಿಯು ಜೇಷ್ಠದೇವಿ ಎಂಬ ಹೇಸರಿನಿಂದ ಪ್ರಖ್ಯಾತಿ ಪಡೆದಿದ್ದಾಳೆ. ಈ ದೇವಿಗಿಂತ ಮಿಗಿಲಾದವರು ಯಾರು ಇಲ್ಲ. ಉನ್ನತ ಪೀಠದಲ್ಲಿ ವಿರಾಜಿಸುವ ಈಕೆಯ ಇಕ್ಕೆಲಗಳಲ್ಲಿ ಪುಲಯಾಂಬೆ ಮತ್ತು ಕಪಾಲಿಶಯನೆಂಬ ಬೈರವನು ಶೋದಿಸುವವರು. ಶ್ರೀ ಮಹಾಮಾಯೆಗೆ ಪೂರ್ವ ದ್ವಾರವಿದ್ದರೂ ದಕ್ಷಿಣಾಭಿಮುಖವಾಗಿ ನಿಂತಿದ್ದಾಳೆ. ಇದಕ್ಕೆ ನಿದರ್ಶನ ಈಕೆಯು ತಾನು ಯಮ ರಾಜನ ಮೇಲೆ ದಾಳಿ ಮಾಡಲು ಸಮರ್ಥಳು ಸೊಕ್ಕಿನ ನಡೆಯವರನ್ನು ಯಮ ಪಟ್ಟಣಕ್ಕೆ ಅಟ್ಟುವಳು ಎಂದು ಶಾಸನ ತಿಳಿಸುತ್ತದೆ.  
     ಮಹಾಲಕುಮಿಯು ಸಾಮಾನ್ಯಯೇನಲ್ಲ. ದ್ರೋಹಿಗಳಿಗೆ ಭಯಪ್ರದೆ ನಿಂದಕರ ನಾಲಿಗೆಯನ್ನು ಬಿಗಿದು ಕಟ್ಟುವಳು. ಮದಾಂಧರ ಮದವನ್ನು ಮರ್ಧಿಸುವಳು. ಈ ರಾಳ ಕಾಳಿಕೆಯನ್ನು ವಿರೋಧಿಸಿ ಉಳಿದವರ‍್ಯಾರು. ಜೇಷ್ಠಾದೇವಿಯನ್ನು ಬದಿಗಿರಿಸಿದ ಕುಂಬಕರ್ಣ ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದಾಗ ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವ ನಿನಗೇನು ವರ ಬೇಕು ಕೇಳು ಎಂದಾಗ ದೇವಿ ಕುಂಭಕರ್ಣನ ನಾಲಿಗೆಯ ನಿಂತು ನಿರ್ದ್ವೆವ್ವವಾಗಲಿ ಎನ್ನುವ ಬದಲಾಗಿ ನಿದ್ರೆಯಾಗಲಿ ಎಂದು ಅವನ ಬಾಯಿಂದ ನುಡಿಸಿ ಬಿಟ್ಟಳಂತೆ. ಬ್ರಹ್ಮನು ಹಾಗೆಯೇ ಆಗಲಿ ಎಂದನಂತೆ. ಅಂದಿನಿಂದ ಕುಂಬಕರ್ಣನು ನಿದ್ರೆಯಲ್ಲಿಯೇ ತನ್ನ ಜೀವನವನ್ನು ಕಳೆದ, ಈಕೆಯ ಹೆಸರಿಟ್ಟಿದ್ದರೆ ಅನ್ಯ ದೇವರು ಭಯಗ್ರಸ್ಥರಾಗುವದರಿಂದ ಈ ನಿಜಕ್ಕೂ ಜೇಷ್ಠಾದೇವಿ ಮತ್ತು ಲೋಕದಲ್ಲಿ ವರಿಷ್ಠೆ ಎನಿಸಿಕೊಂಡಿದ್ದಾಳೆ. ಸಿದ್ದಿಯನ್ನು ಭಯಸುವವರಿಗೆ ಅವಳ ಮೊರೆ ಹೋಗುವುದೇ ಸೂಕ್ತ ಎಂದು ಶಾಸನಗಳು ಹೇಳಲ್ಪಡುತ್ತವೆ. ಕ್ಷೇತ್ರಪಾಲ ಮತ್ತು ಭೈರವ ಮೂರ್ತಿಯ ಜೋತೆಗೆ ಜೆಷ್ಠ ದೇವಿಯ ಪ್ರತಿಷ್ಠಾಪಿಸಲ್ಪಟ್ಟಿರುವದರಿಂದ ಇವರನ್ನು ಪ್ರತ್ಯೇಕವಾಗಿ ಪೂಜಿಸಬಾರದು ಒಂದು ವೇಳೆ ಪೂಜಿಸಿದರೆ ಆ ಫಲವನ್ನು ಭೈರವನು ಅಪ ಹರಿಸುತ್ತಾನೆ. 
  ಅಲ್ಲದೇ ಜೇಷ್ಠ ದೇವಿಯು ನೆಲೆಸಿದ ಬಗ್ಗೆ ಒಂದು ಸ್ಥಳದ ಪುರಾಣವಿದೆ. ಕುಂತಳ ನಗರದಲ್ಲಿ ಚಂದ್ರಹಾಸನೆಂಬ ರಾಜನೂ ಆಳುತ್ತಿದ್ದನಂತೆ ಈತ ಒಮ್ಮೆ ಉಗ್ರವಾದ ತಪಸ್ಸನ್ನಾಚರಿಸಿ ದೇವಿಯ ಸಾಕ್ಷಾತ್‌ಕಾರ ಪಡೆದನಂತೆ. ನಂತರ ದೇವಿಯ ಮೂರ್ತಿಯನ್ನು ತನ್ನ ರಾಜಧಾನಿ ಕುಂತಳ ನಗರವು ಕುಕನೂರಿನಲ್ಲಿ ಸ್ಥಾಪಿಸಿದನೆಂದು ವಿಧ್ವಾಂಸರು ಅಭಿಪ್ರಾಯ ಪಡುತ್ತಾರೆ. 
         ಕುಕನೂರಿನ ಈ ಪ್ರಖ್ಯಾತ ದೇವಿಗೆ ಹದಿಮೂರನೇ ಶತಮಾನದವರೆಗೂ ಜೆಷ್ಠಾದೇವಿಯೆಂಬ ಹೆಸರು. ನಂತರ ಮಹಾಮಾಯೆ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತಿದೆ.
     ಉತ್ತರ ಕರ್ನಾಟಕದ ಹುಬ್ಬಳ್ಳಿ, ದಾರವಾಡ, ಬೆಳಗಾವಿ, ಹಾವೇರಿ ಯಲ್ಲಿಯ ಜನ ಈಕೆಗೆ ಧ್ಯಾಮವ್ವನೆಂದು ಕರೆಯುತ್ತಾರೆ. ಸಾಕಷ್ಟು ಜನರು ಉತ್ತರ ಕರ್ನಾಟಕ, ಮೈಸೂರ ಕರ್ನಾಟಕ, ಹೈದರಾಬಾದ ಕರ್ನಾಟಕ ಹೀಗೆ ರಾಜ್ಯದ ವಿವಿಧ ಮೂಲೆ-ಮೂಲೆಗಳಲ್ಲಿ ಈ ದೇವಿಯ ಭಕ್ತರು ಹೆಚ್ಚಾಗಿರುವದರಿಂದ ಅವರಿಗೆ ಜಾತ್ರೆ ನಡೆಯುವ ಸರಿಯಾದ ಮಾಹಿತಿ ಒಮ್ಮೊಮ್ಮೆ ಸಿಗುವುದಿಲ್ಲ.
    ಮುಖ್ಯವಾಗಿ ಈ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ವಸತಿ ಗೃಹಗಳ ಅವಶ್ಯಕತೆ ಮತ್ತು ಬಂದಂತಹ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಕುಡಿಯುವ ನೀರಿನ ಸೌಲಭ್ಯ ಜಾತ್ರಾ ನಿಮಿತ್ಯ ಬಸ್‌ಗಳ  ವ್ಯವಸ್ಥೆ ಎಲ್ಲವೂ ನಡೆಯಬೇಕು ಅಂದಾಗ ಮಾತ್ರ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ, ಯಾತ್ರಾರ್ಥಿಗಳಿಗೂ ಅನೂಕೂಲಕರವಾಗುವುದೆಂದು ಆಶಿಸೋಣ. . .
ಭೀಮಪ್ಪ ಕೆ ನಾಯ್ಕರ್. 
ಕುಡಗುಂಟಿ ತಾ:ಯಲಬುರ್ಗಾ
Please follow and like us:
error